ಪುತ್ತೂರು:ಡಾ.ಪಿ.ಬಿ ರೈ ಪ್ರತಿಷ್ಠಾನ ಕೆಯ್ಯೂರು ಮತ್ತು ಪವಿತ್ರ ವಿವಾ ಎಂಟರ್ಪ್ರೈಸಸ್ ನೆಲ್ಯಾಡಿ ಇದರ ಜಂಟಿ ಆಶ್ರಯದಲ್ಲಿ ಮೇ.23ರಂದು ಕೊಂಬೆಟ್ಟು ಬಂಟರ ಭವನದಲ್ಲಿ ನಡೆಯಲಿರುವ ವಿವಾ ಕಿಸಾನ್ ಕಿಂಗ್ ಸಾವಯವ ಗೊಬ್ಬರ ಹಾಗೂ ಸಾವಯವ ಕೃಷಿ ಮಾಹಿತಿ ಕಾರ್ಯಾಗಾರ ಮತ್ತು ಜಗದಂಬಾ ಎಂಟರ್ಪ್ರೈಸಸ್ ಸಂಸ್ಥೆಯ ಅನಾವರಣ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆಯು ಮೇ.17ರಂದು ಇಲ್ಲಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನಡೆಯಿತು.
ದೇವಸ್ಥಾನದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದ ಬಳಿಕ ಆಮಂತ್ರಣ ಬಿಡುಗಡೆಗೊಳಿಸಲಾಯಿತು. ಡಾ.ಪಿ.ಬಿ ರೈ ಪ್ರತಿಷ್ಠಾನದ ಗೌರವಾಧ್ಯಕ್ಷ ಕಾವು ಹೇಮನಾಥ ಶೆಟ್ಟಿ, ಅಧ್ಯಕ್ಷ ದಂಬೆಕ್ಕಾನ ಸದಾಶಿವ ರೈ, ಗೌರವ ಪ್ರಧಾನ ಕಾರ್ಯದರ್ಶಿ ಡಾ.ರಾಜೇಶ್ ಬೆಜ್ಜಂಗಳ, ಪವಿತ್ರ ವಿವಾ ಎಂಟರ್ಪ್ರೈಸಸ್ನ ಎ.ಆರ್ ಅಮನ್, ರವಿಪ್ರಸಾದ್ ಶೆಟ್ಟಿ ಬನ್ನೂರು, ಜಯರಾಜ್ ಶೆಟ್ಟಿ ಅನಿಲೆ, ಗಣೇಶ್ ಶೆಟ್ಟಿ ನೆಲ್ಲಿಕಟ್ಟೆ, ಗಂಗಾಧರ ಶೆಟ್ಟಿ ಎಲಿಕ, ಅಶೋಕ್ ಕುಮಾರ್ ಪುತ್ತಿಲ, ಸೀತಾರಾಮ ಶೆಟ್ಟಿ ಬನ್ನೂರು ಮೊದಲಾದವರು ಉಪಸ್ಥಿತಿರಿದ್ದರು.
ಕೃಷಿಯಲ್ಲಿ ಪ್ರಮುಖವಾಗಿ ಬಾಧಿಸುವ ಎಲೆ ಚುಕ್ಕಿ ರೋಗ, ಕುಂಟುಸಿರಿ, ಫಂಗಸ್, ಬೇರು ಹುಳ ರೋಗಕ್ಕೆ ಉತ್ತಮ ಫಲಿತಾಂಶ ನೀಡುವ ಮೂಲಕ ಉತ್ತಮ ಬೆಳವಣಿಗೆ ಮತ್ತು ಉತ್ತಮ ಇಳುವರಿಗೆ ಜಿಲ್ಲೆಯಲ್ಲೇ ಅಡಿಕೆ ಬೆಳೆಗಾರರ ಮನಗೆದ್ದಿರುವ (ಐಸಿಎಆರ್) ಭಾರತೀಯ ಕೃಷಿ ಮತ್ತು ಸಂಶೋಧನಾ ಮಂಡಳಿಯಿಂದ ಅಂತರರಾಷ್ಟ್ರೀಯ ಮಟ್ಟದ ಪೇಟೆಂಟ್ ಪಡೆದಿರುವ ಕಿಸಾನ್ ಕಿಂಗ್ ಸಾವಯವ ಗೊಬ್ಬರವಾಗಿದೆ. ಹಲವು ರೋಗಗಳಿಗೆ ಪರಿಣಾಮಕಾರಿಯಾಗಿರುವ ಔಷಧಿಯ ಕುರಿತು ರೈತರಿಗೆ ಮಾಹಿತಿ ನೀಡುವ ಕಾರ್ಯಕ್ರಮವಾಗಿದೆ. ಈ ಸಾವಯವ ಗೊಬ್ಬರ ಬಳಕೆ ಮಾಡಿ ಪರಿಣಾಮಕಾರಿಯಾಗಿ ಪ್ರಯೋಜನ ಪಡೆದಿರುವ ರೈತರು ಪುತ್ತೂರಿನಲ್ಲಿದ್ದು ಅವರಿಂದಲೂ ಮಾಹಿತಿ ಪಡೆದುಕೊಳ್ಳಬಹುದು ಎಂದು ಸಂಘಟಕರು ತಿಳಿಸಿದ್ದಾರೆ.