ಎಸೆಸ್ಸೆಲ್ಸಿ ಪರೀಕ್ಷೆ:ಸುದಾನ ಶಾಲೆಗೆ ಶೇ.100 ಫಲಿತಾಂಶ

0

ಪುತ್ತೂರು: 2023-24ನೇ ಸಾಲಿನ ಎಸೆಸ್ಸೆಲ್ಸಿ ಪರೀಕ್ಷೆಯಲ್ಲಿ ನೆಹರುನಗರದ ಸುದಾನ ವಸತಿಯುತ ಶಾಲೆಗೆ ಶೇ.ನೂರು ಫಲಿತಾಂಶ ಲಭಿಸಿದ್ದು ಶಾಲೆಗೆ ‘ಎ’ಗ್ರೇಡ್(ಕೆ.ಎಸ್.ಇ.ಎ.ಬಿ)ದೊರೆತಿದೆ. ಇದರಲ್ಲಿ ನಾಲ್ಕು ಮಂದಿ 600 ಅಂಕಗಳ ಮೇಲೆ, 39 ಮಂದಿ ಡಿಸ್ಟಿಂಕ್ಷನ್‌ನಲ್ಲಿ, 70 ಮಂದಿ ಪ್ರಥಮ ಶ್ರೇಣಿಯಲ್ಲಿ, ಎಂಟು ಮಂದಿ ದ್ವಿತೀಯ ಶ್ರೇಣಿಯಲ್ಲಿ, ಈರ್ವರು ತೃತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.


ಸ್ವಸ್ತಿ ಶೆಟ್ಟಿರವರು 613 ಅಂಕ ಗಳಿಸಿ ಶಾಲೆಗೆ ಟಾಪರ್ ಎನಿಸಿಕೊಂಡಿದ್ದಾರೆ. ದ್ವಿತೀಯ ಸ್ಥಾನದಲ್ಲಿ ಸಾನ್ವಿ ಜೆ.ಎಸ್(606 ಅಂಕ), ಯಶಸ್ವಿ ಎಚ್.ಸುವರ್ಣ(606 ಅಂಕ), ತೃತೀಯ ಸ್ಥಾನದಲ್ಲಿ ಶೇಖ್ ಮೊಹಮದ್ ಆಯಾನ್(603 ಅಂಕ) ಗುರುತಿಸಿಕೊಂಡಿದ್ದಾರೆ. ಉಳಿದಂತೆ ಜಿಯಾ ಸ್ವೀಡಲ್ ಲಸ್ರಾದೋ(599 ಅಂಕ), ಪೂರ್ವಿ ಯು.ಶೆಟ್ಟಿ(506 ಅಂಕ), ನಿಹಾರಿಕಾ ಎನ್.ರೈ(595 ಅಂಕ), ಇಶಿತಾ ಸೂರಜ್ ನಾಯರ್(592 ಅಂಕ), ರಿಶೆಲ್ ಎಲ್ಸಾ ಬೆನ್ನಿ(592 ಅಂಕ), ಪ್ರಣಾಮ್ ಕೆ.ಟಿ(590 ಅಂಕ), ದಿಪಾಲಿ ಜೆ.ಕೆ(589 ಅಂಕ), ಶಜ್ಮಾ ಸುಮಯ್ಯ(588 ಅಂಕ), ಝಾಮಾ ಅಮೀನಾ(588 ಅಂಕ), ಶಮನ್ ಸಿಕ್ವೇರಾ(585 ಅಂಕ), ಎ.ಫಾತಿಮಾ ರಾಫಿಯಾ(580 ಅಂಕ), ವಿಶಾಲ್ ಬಿ(579 ಅಂಕ), ಸಮೃದ್ಧ್ ಶೆಟ್ಟಿ(578 ಅಂಕ), ಧನ್ವಿತ್ ರೈ ಎಂ.ಪಿ(576 ಅಂಕ), ಸಂಹಿತಾ ಪಿ.ಬಿ(575 ಅಂಕ), ಪೂರ್ಣಶ್ರೀ(575 ಅಂಕ), ಶಿಫಾ ಪರ್ವಿನ್(574 ಅಂಕ), ಪ್ರೀತಂ ಕೆ.ಎಸ್(573 ಅಂಕ), ದಿಯಾ ಪ್ರಮೋದ್ ಬೀಡಿಗೆ(572 ಅಂಕ), ದೇವಿಕ್ ಜಿ(570 ಅಂಕ), ಆರ್.ರೋಹಿತ್ ಕುಮಾರ್(568 ಅಂಕ), ಕೆ.ಅಭಿನವ್(567 ಅಂಕ), ನಮಿತ್ ಬಿ.ಆರ್(567 ಅಂಕ), ಆತ್ಮಿ ಬಿ.ರೈ(566 ಅಂಕ), ವೇದಿಕ್ ಎಸ್.ನಾಕ್(559 ಅಂಕ), ಬಿ.ಸಂಜಯ್(557 ಅಂಕ), ಅಲಿಮತ್ ಸಹದಿಯಾ(557 ಅಂಕ), ಅಲಿಮಾ ತಾಬಾ(554 ಅಂಕ), ಫಾತಿಮತ್ ಶಿಭಾ(551 ಅಂಕ), ಸಂದೇಶ್ ಬಿ.ಗೌಡ(549 ಅಂಕ), ದ್ರುವಿಕಾ ಕೋಟ್ಯಾನ್(546 ಅಂಕ), ವರ್ಷಿತ್ ಎಚ್.ಆರ್(545 ಅಂಕ), ಸ್ಮೃತಿ ಸಾಜಿ(543 ಅಂಕ), ತನಿಶ್ ಕುಮಾರ್ ಬಿ(532 ಅಂಕ), ಹಿಮಾಂಶು ಎಸ್(532 ಅಂಕ)ರವರು ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ ಎಂದು ಶಾಲಾ ಪ್ರಕಟಣೆ ತಿಳಿಸಿದೆ.

ಸುದಾನ ಪದವಿ ಪೂರ್ವ ಕಾಲೇಜಿಗೆ
ದಾಖಲಾತಿ ಆರಂಭಗೊಂಡಿದೆ…
ಪ್ರಸ್ತುತ ವರ್ಷ ಸುದಾನ ವಿದ್ಯಾಸಂಸ್ಥೆಯು ಸುದಾನ ಪದವಿ ಪೂರ್ವ ಕಾಲೇಜನ್ನು ಆರಂಭಿಸಿದ್ದು ಈಗಾಗಲೇ ಬಿರುಸಿನ ದಾಖಲಾತಿ ಪ್ರಾರಂಭಗೊಂಡಿದೆ. ಹಸುರು ಹೊದಿಕೆಯ ಪರಿಸರಸ್ನೇಹಿ ಕ್ಯಾಂಪಸ್‌ವನ್ನೊಳಗೊಂಡ ಈ ಸುದಾನ ವಿದ್ಯಾಸಂಸ್ಥೆಯು ಪುತ್ತೂರಿನ ವಿಸ್ತರಿತ ಶೈಕ್ಷಣಿಕ ಕ್ಷೇತ್ರದಲ್ಲೊಂದು ಮೈಲಿಗಲ್ಲನ್ನು ಸ್ಥಾಪಿಸುವತ್ತ ಹೊರಟಿದೆ. ಈ ವಿದ್ಯಾಸಂಸ್ಥೆಯಲ್ಲಿ ಈಗಾಗಲೇ ಕೆ.ಜಿಯಿಂದ ಎಸೆಸ್ಸೆಲ್ಸಿವರೆಗೆ ಗುಣಮಟ್ಟದ ಶಿಕ್ಷಣವನ್ನು ನೀಡುತ್ತಿದ್ದು ಇದೀಗ ಪದವಿ ಪೂರ್ವ ವಿಭಾಗವನ್ನು ಆರಂಭಿಸಿದೆ. ಈ ಪದವಿ ಪೂರ್ವ ವಿಭಾಗದಲ್ಲಿ ವಿಜ್ಞಾನ ವಿಭಾಗದಲ್ಲಿ ‘ಪಿಸಿಎಂಬಿ/ಪಿಸಿಎಂಸಿ’(ಫಿಸಿಕ್ಸ್,ಕೆಮಿಸ್ಟ್ರೀ,ಬಯೋಲಜಿ,ಮ್ಯಾಥ್ಸ್,ಕಂಪ್ಯೂಟರ್ ಸೈನ್ಸ್), ಕಾಮರ್ಸ್ ವಿಭಾಗದಲ್ಲಿ ‘ಎಸ್‌ಸಿಬಿಎ’(ಸ್ಟ್ಯಾಟಿಸ್ಟಿಕ್ಸ್,ಕಂಪ್ಯೂಟರ್ ಸೈನ್ಸ್,ಬಿಸಿನೆಸ್ ಸ್ಟಡೀಸ್,ಎಕೌಂಟೆನ್ಸಿ), ಇಂಗ್ಲೀಷ್/ಕನ್ನಡ/ಹಿಂದಿ ಜೊತೆಗೆ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಸಂಸ್ಥೆಯು ಒಳಗೊಂಡಿದೆ.

LEAVE A REPLY

Please enter your comment!
Please enter your name here