ಆಲಂಕಾರು ಜೆಸಿಐ ವತಿಯಿಂದ ಕೆ ಎಂ ಸಿ ಅತ್ತಾವರ ಮತ್ತು ಇಂಡಿಯನ್ ಕ್ಯಾನ್ಸರ್ ಸೊಸೈಟಿ ನೇತೃತ್ವದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ

0

ಆಲಂಕಾರು: ಆಲಂಕಾರು ಜೆಸಿಐ ವತಿಯಿಂದ ಕೆ ಎಂ ಸಿ ಅತ್ತಾವರ ಮತ್ತು ಇಂಡಿಯನ್ ಕ್ಯಾನ್ಸರ್ ಸೊಸೈಟಿ ಮಂಗಳೂರು ಇವರ ನೇತೃತ್ವದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಾಗೂ ಉಚಿತ ಕ್ಯಾನ್ಸರ್ ತಪಾಸನ ಶಿಬಿರ ಶ್ರೀ ದುರ್ಗಾಂಬ ಪದವಿ ಪೂರ್ವ ಕಾಲೇಜು ಆಲಂಕಾರಿನಲ್ಲಿ ಇತ್ತೀಚೆಗೆ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜೆಸಿಐ ಆಲಂಕಾರಿನ ಅಧ್ಯಕ್ಷೆ ಮಮತಾ ಅಂಬರಾಜೆ ವಹಿಸಿದ್ದರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಜೆಸಿಐ ವಲಯ 15ರ Community Development ವಿಭಾಗದ ನಿರ್ದೇಶಕ ಭರತ್ ಶೆಟ್ಟಿ ಮಾತನಾಡಿ ಇದೊಂದು ಅದ್ಭುತ ಕಾರ್ಯಕ್ರಮವಾಗಿದ್ದು ಗ್ರಾಮೀಣ ಜನರಿಗೆ ಬಹಳಷ್ಟು ಉಪಕಾರ ಹಾಗೂ ಮಾಹಿತಿ ಇದರಿಂದ ದೊರಕುತ್ತದೆ ಎಂದು ಹೇಳಿದರು

ಕೆ ಎಮ್‌ ಸಿ ಅತ್ತಾವರದ Radiation Oncologist ಡಾ| ಪಾಲ್ ಸೈಮನ್ ಮಾತನಾಡಿ ಹೆಚ್ಚಿನ ಜನರು ಕ್ಯಾನ್ಸರ್ ತಪಾಸನೆ ಮಾಡಿಕೊಳ್ಳುವುದಿಲ್ಲ. ಒಂದು ರೀತಿಯ ಹೆದರಿಕೆಯ ಮನೋಭಾವ ಜನರಲ್ಲಿ ಇದೆ. ಇಂತಹ ಶಿಬಿರಗಳನ್ನು ಮಾಡಿದಾಗ ಜನರಿಗೆ ಅದರ ಅರಿವು ಮೂಡುತ್ತದೆ ಮತ್ತು ಕ್ಯಾನ್ಸರ್ ವಿಷಯದಲ್ಲಿ ವಹಿಸಬೇಕಾದ ಮುಂಜಾಗ್ರತ ಕ್ರಮಗಳ ಬಗ್ಗೆ ತಿಳಿಸಿದರು.

ಆಲಂಕಾರು ಶ್ರೀ ದುರ್ಗಾಂಬ ವಿದ್ಯಾವರ್ಧಕ ಸಭಾದ ಅಧ್ಯಕ್ಷ ದಯಾನಂದ ರೈ ಮನವಳಿಕೆ ಮಾತನಾಡಿ ನಮ್ಮ ಊರಿನಲ್ಲಿ ಇಂತಹ ಕಾರ್ಯಕ್ರಮ ನಿಜವಾಗಲೂ ಅಗತ್ಯಪೂರ್ಣವಾದದ್ದು ಎಂದರು.

ಲಯನ್ಸ್ ಕ್ಲಬ್ ಆಲಂಕಾರು ಇದರ ಅಧ್ಯಕ್ಷ ಪ್ರಶಾಂತ್ ರೈ ಮನವಳಿಕೆ ಮಾತನಾಡಿ ಇಂತಹ ಶಿಬಿರಗಳನ್ನು ಸಂಘ ಸಂಸ್ಥೆಗಳು ಹೆಚ್ಚಿನ ಸಂಖ್ಯೆಯಲ್ಲಿ ಆಯೋಜಿಸಬೇಕು ಮತ್ತು ನಮ್ಮ ಲಯನ್ಸ್ ಕ್ಲಬ್ ಹಲವಾರು ಇಂತಹ ಶಿಬಿರಗಳನ್ನು ಈ ಹಿಂದೆಯೂ ಆಯೋಜಿಸಿದೆ ಆದರೆ ಕ್ಯಾನ್ಸರ್ ಶಿಬಿರವನ್ನು ಆಯೋಜಿಸಿಲ್ಲ. ಇದೊಂದು ಅದ್ಭುತ ಕಾರ್ಯಕ್ರಮ ಎಂದರು.ಶ್ರೀ ಆಲಂಕಾರು ದುರ್ಗಾಂಬ ಪದವಿ ಪೂರ್ವ ಕಾಲೇಜಿನ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸುಂದರ ಗೌಡ ನೆಕ್ಕಿಲಾಡಿ ಕಾರ್ಯಕ್ರಮಕ್ಕೆ ಶುಭಹಾರೈಸಿದರು.

ವೇದಿಕೆಯಲ್ಲಿ ಶ್ರೀ ದುರ್ಗಾಂಬ ಪದವಿ ಪೂರ್ವ ಕಾಲೇಜು ಆಲಂಕಾರು ಇದರ ಆಡಳಿತ ಅಧಿಕಾರಿಗಳಾದ ಶ್ರೀಪತಿ ರಾವ್, ಇಂಡಿಯನ್ ಕ್ಯಾನ್ಸರ್ ಸೊಸೈಟಿಯ ರಂಜನ್ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಸ್ಥಳೀಯ ಸಂಘ ಸಂಸ್ಥೆಯ ಪದಾಧಿಕಾರಿಗಳು,ಜೆಸಿಐ ಆಲಂಕಾರು ಇದರ ಪೂರ್ವಾಧ್ಯಕ್ಷರುಗಳು ಹಾಗೂ ಸದಸ್ಯರುಗಳು ಮತ್ತಿತರರು ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಜೆಸಿಐ ಆಲಂಕಾರಿನ ಅಧ್ಯಕ್ಷೆ ಮಮತಾ ಅಂಬರಾಜೆ ನಿರೂಪಿಸಿ, ಕಾರ್ಯದರ್ಶಿ ಕೃತಿಕಾ ಗುರುಕಿರಣ್ ಶೆಟ್ಟಿ ವಂದಿಸಿದರು.ಸುಮಾರು 80 ಜನರು ಶಿಬಿರದ ಪ್ರಯೋಜನ ಪಡೆದುಕೊಂಡರು.

LEAVE A REPLY

Please enter your comment!
Please enter your name here