ಕೊಂಬಾರು, ಸಿರಿಬಾಗಿಲು ಗ್ರಾಮಗಳಿಗೆ ನಿರಂತರ ವಿದ್ಯುತ್ ಸಮಸ್ಯೆ – ಸಮಸ್ಯೆ ಪರಿಹರಿಸದಿದ್ದರೆ ಪ್ರತಿಭಟನೆ ಎಚ್ಚರಿಕೆ

0

ಕಡಬ: ಕೊಂಬಾರು ಹಾಗೂ ಸಿರಿಬಾಗಿಲು ಗ್ರಾಮಗಳಿಗೆ ಕಳೆದ 6 ತಿಂಗಳುಗಳಿಂದ ನಿರಂತರವಾಗಿ ವಿದ್ಯುತ್ ಸಮಸ್ಯೆ ಇದ್ದು ಇದನ್ನು ಕೂಡಲೇ ಪರಿಹರಿಸಬೇಕು ಇಲ್ಲದಿದ್ದಲ್ಲಿ ವಾರದೊಳಗೆ ಕಡಬ ಮೆಸ್ಕಾಂ ಕಛೇರಿಯ ಎದುರು ಪ್ರತಿಭಟನೆ ಮಾಡಲಾಗುವುದು ಎಂದು ಕೊಂಬಾರು ಗ್ರಾ.ಪಂ. ಅಧ್ಯಕ್ಷ ಮಧುಸೂದನ್ ಹಾಗೂ ಬಿಳಿನೆಲೆ ಸಿ.ಎ. ಬ್ಯಾಂಕ್ ಅಧ್ಯಕ್ಷ ದಾಮೋಧರ ಗುಂಡ್ಯ ಅವರ ನೇತೃತ್ವದಲ್ಲಿ ಮೇ.22ರಂದು ಕಡಬ ಉಪವಿಭಾಗದ ಸಹಾಯಕ ಅಭಿಯಂತರರಿಗೆ ಮನವಿ ನೀಡಿ ಸುಮಾರು 6 ತಿಂಗಳಿನಿಂದ ನಮ್ಮ ಗ್ರಾಮದಲ್ಲಿ ವಿದ್ಯುತ್ ಸಂಪರ್ಕವು ಸರಿಯಾದ ರೀತಿಯಲ್ಲಿ ಇಲ್ಲದಿರುವ ಕಾರಣ ಗ್ರಾಮಸ್ಥರು ತಮ್ಮ ಕೃಷಿ ಮತ್ತು ಇತರ ಚಟುವಟಿಕೆಗಳಿಗೆ ತುಂಬಾ ತೊಂದರೆ ಅನುಭವಿಸುತ್ತಿದ್ದೇವೆ. ಇದಕ್ಕೆ ಮುಖ್ಯ ಕಾರಣ ಪವರ್ ಮ್ಯಾನ್‌ಗಳ ಕೊರತೆ ಮತ್ತು ಇರುವಂತಹ ಒಬ್ಬ ಲೈನ್ ಮ್ಯಾನ್ ಸರಿಯಾಗಿ ಕೆಲಸವನ್ನು ನಿರ್ವಹಿಸದೆ ರಾತ್ರಿ ವೇಳೆಗೆ ಕೊಂಬಾರು ಮತ್ತು ಸಿರಿಬಾಗಿಲು ಎರಡು ಗ್ರಾಮಗಳ ಮುಖ್ಯ ಸಂಪರ್ಕ ಲೈನನ್ನು ಸುಂಕದಕಟ್ಟೆ ಎಂಬಲ್ಲಿ ಆಫ್ ಮಾಡಿ ಮರುದಿನ ಬೆಳಿಗ್ಗೆ ಬಂದು ಆನ್ ಮಾಡಿ ಹೋಗುತ್ತಾರೆ, ಇದರಿಂದ ರಾತ್ರಿ ಹೊತ್ತಲ್ಲಿ ಈ ಎರಡು ಗಾಮಕ್ಕೂ ವಿದ್ಯುತ್ ಸಂಪರ್ಕ ಇಲ್ಲದೆ, ಕತ್ತಲೆಯಲ್ಲಿ ಕಳೆಯುವಂತಾಗಿದೆ, ಅದು ಅಲ್ಲದೆ ಅರ್ಜುನ್ ಎಂಬ ಲೈನ್ ಮ್ಯಾನ್ ಈ ಎರಡು ಗ್ರಾಮಕ್ಕೆ ಒಬ್ಬರೆ ಇದ್ದು ಅವರು ಗ್ರಾಮಸ್ಥರ ಸಂಪರ್ಕಕ್ಕೆ ಸಿಗದಿರುವುದು ಸಮಸ್ಯೆಯಾಗಿದೆ. ಈ ಬಗ್ಗೆ ಜೆ.ಇ ಅವರಲ್ಲಿ ಮಾತನಾಡಿದಾಗ ನನಗೂ ಅವರು ಸಂಪರ್ಕಕ್ಕೆ ಸಿಗುತ್ತಿಲ್ಲ ಎಂದು ತಿಳಿಸಿರುತ್ತಾರೆ, ಇದರ ಬಗ್ಗೆ ತಮಗೆ ಮತ್ತು ಮೇಲಾಧಿಕಾರಿಗಳಿಗೆ ಮಾಹಿತಿಯನ್ನು ನೀಡಿದ್ದೇವೆ. ಕೂಡಲೇ ಎರಡು ಗ್ರಾಮಗಳ ವಿದ್ಯುತ್ ಸಮಸ್ಯೆಯನ್ನು ಪರಿಹರಿಸದಿದ್ದರೆ ವಾರದೊಳಗೆ ಉಗ್ರ ಪ್ರತಿಭಟನೆ ಮಾಡಲಿದ್ದೇವೆ ಎಂದು ಮನವಿಯಲ್ಲಿ ತಿಳಿಸಲಾಗಿದೆ, ಮನವಿ ನೀಡುವ ಸಂದರ್ಭದಲ್ಲಿ ಯತೀಶ್ ಆಮಡ್ಕ,ಗಣೇಶ್ ಪಿಲಿಕಜೆ,ಉಮೇಶ್ ದೇರಣೆ, ವಿಜಯಕುಮಾರ್ ನೀರಾಯ, ಲಿಂಗಪ್ಪ ಗೌಡ ಕೋಲ್ಪೆ, ವೆಂಕಟ್ರಮಣ ಕೋಲ್ಪೆ ಸೇರಿದಂತೆ ಹಲವಾರು ಗ್ರಾಮಸ್ಥರು ಉಪಸ್ಥಿತರಿದ್ದರು.

ಸಮಸ್ಯೆ ಪರಿಹರಿಸಲು ಕ್ರಮ-ಸಜಿ ಕುಮಾರ್ ಎ.ಇ.ಇ.
ಮನವಿ ಸ್ವೀಕರಿಸಿದ ಎ.ಇ.ಇ. ಸಜಿ ಕುಮಾರ್ ಅವರು ಪ್ರತಿಕ್ರಿಯೆ ನೀಡಿ, ಕಡಬ ಉಪ ವಿಭಾಗದಲ್ಲಿ ಪವರ್ ಮ್ಯಾನ್‌ಗಳ ಕೊರತೆ ಇದೆ, ಬಿಳಿನೆಲೆ ಸೆಕ್ಷನ್‌ನಲ್ಲಿ ಇದ್ದ ಪವರ್ ಮ್ಯಾನ್‌ಗಳು ವರ್ಗಾವಣೆ ಆಗಿದ್ದಾರೆ, ನೇಮಕ ಆಗುವಲ್ಲಿಯವರೆಗೆ ಬದಲಿ ಪವರ್ ಮ್ಯಾನ್‌ಗಳನ್ನು ನಿಯೋಜಿಸಲು ಅವಕಾಶ ಇದ್ದು ಆ ವ್ಯವಸ್ಥೆ ಮಾಡಿಕೊಂಡು ಆ ಭಾಗದ ಸಮಸ್ಯೆಯನ್ನು ನಿವಾರಿಸಲಾಗುವುದು ಎಂದು ಹೇಳಿದ್ದಾರೆ.

LEAVE A REPLY

Please enter your comment!
Please enter your name here