ಇಡ್ಕಿದು ಸೇವಾ ಸಹಕಾರಿ ಸಂಘಕ್ಕೆ ಕರ್ನಾಟಕ ಬ್ಯಾಂಕಿನ ಡಿ.ಜಿ.ಯಂ ಭೇಟಿ

0

ವಿಟ್ಲ: ಇಡ್ಕಿದು ಸೇವಾ ಸಹಕಾರಿ ಸಂಘಕ್ಕೆ ಕರ್ನಾಟಕ ಬ್ಯಾಂಕಿನ ಡಿ.ಜಿ.ಯಂ ಹೇರಳೆ ವಸಂತ್ ಆರ್. ರವರು ಭೇಟಿ ನೀಡಿ ಸಂಘದ ಕಾರ್ಯವೈಖರಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.


ಇಡ್ಕಿದು ಸೇವಾ ಸಹಕಾರಿ ಸಂಘದ ಅಧ್ಯಕ್ಷ ಸುಧಾಕರ ಶೆಟ್ಟಿ ಬೀಡಿನಮಜಲುರವರು ಸಂಘವು ಗ್ರಾಮೀಣ ಪ್ರದೇಶದಲ್ಲಿ ಜನರ ಅವಶ್ಯಕತೆಗಳಿಗೆ ಅನುಗುಣವಾಗಿ ವ್ಯವಹಾರ ಮಾಡುತ್ತಾ ಅಭಿವೃದ್ದಿ ಹೊಂದಿದ ಹಂತಗಳ ಬಗ್ಗೆ ಮಾಹಿತಿ ನೀಡಿದರು. ಉಪಾಧ್ಯಕ್ಷ ರಾಮಭಟ್ ನೀರಪಳಿಕೆ, ಕರ್ನಾಟಕ ಬ್ಯಾಂಕ್ ಕಬಕದ ಶಾಖಾಧಿಕಾರಿ ಶಶಿಧರ ಎಸ್, ವೃತ್ತಿಪರ ನಿರ್ದೇಶಕ ಗೋಪಾಲಕೃಷ್ಣ ಭಟ್ ಮೈಕೆ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಈಶ್ವರ ನಾಯ್ಕ್ ಎಸ್, ಸಂಘದ ನಿರ್ದೇಶಕ ನಾರಾಯಣ ನೇರ್ಲಾಜೆ, ಪ್ರವೀಣ್ ಕುಮಾರ್ ಕೊಪ್ಪಲ, ಜಯಂತ ದರ್ಬೆ, ಸುಂದರ ಪಿ. ಪಾಂಡೇಲು, ಶಿವಪ್ರಕಾಶ್ ಕೂವತ್ತಿಲ, ಜನಾರ್ದನ ಕಾರ್ಯಾಡಿ, ವಸಂತ ಉರಿಮಜಲು, ಶೇಖರ ನಾಯ್ಕ್ ಅಳಕೆಮಜಲು, ನಳಿನಿ ಪೆಲತ್ತಿಂಜ, ವಿಜಯಲಕ್ಷೀ ಪಿಲಿಪ್ಪೆ, ರತ್ನ ಸೇಕೆಹಿತ್ತಿಲು ಮೊದಲಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here