ಉಪ್ಪಿನಂಗಡಿ: ಇಲ್ಲಿನ ಗ್ರಾ.ಪಂ.ನ ಡಿಜಿಟಲ್ ಗ್ರಂಥಾಲಯ ಹಾಗೂ ಮಾಹಿತಿ ಕೇಂದ್ರದ ವತಿಯಿಂದ 2024ನೇ ಸಾಲಿನ ಗ್ರಾಮೀಣ ಮಕ್ಕಳ ಬೇಸಿಗೆ ಶಿಬಿರ ಮೂರು ದಿನಗಳ ಕಾಲ ಉಪ್ಪಿನಂಗಡಿ ಗ್ರಾ.ಪಂ. ಸಭಾಂಗಣದಲ್ಲಿ ನಡೆಯಿತು.
ಶಿಕ್ಷಣ ಫೌಂಡೇಶನ್‌ನ ಜಿಲ್ಲಾ ಸಂಯೋಜಕರಾದ ಲವೀಶ್ ಮತ್ತು ಶ್ರೀಮತಿ ಸುಮತಿ ಶಿಬಿರವನ್ನು ಉದ್ಘಾಟಿಸಿದರು. ಶಿಬಿರದಲ್ಲಿ ಅಮೂಲ್ಯ ಆರ್ಥಿಕ ಸಾಕ್ಷರತಾ ಕೇಂದ್ರದ ಆಪ್ತ ಸಮಾಲೋಚಕಿ ಶ್ರೀಮತಿ ಗೀತಾ ಶಿಬಿರಾರ್ಥಿಗಳಿಗೆ ವಿದ್ಯಾರ್ಥಿ ವೇತನದ ಬಗ್ಗೆ ಮಾಹಿತಿ ನೀಡಿದರು. ಶಿಬಿರದಲ್ಲಿ ವಿವಿಧ ಮನೋರಂಜನಾ ಆಟಗಳು, ನ್ಯೂಸ್ ಪೇಪರ್‌ನಿಂದ ಟೋಪಿ ತಯಾರಿ, ಕ್ರಾಫ್ಟ್, ಮುಖವಾಡ ತಯಾರಿ, ಯೋಗಾಸನ, ತೆಂಗಿನ ಗರಿಯಿಂದ ವಾಚ್ ತಯಾರಿ, ಉಂಗುರ, ಗಿರಿಗಿಟ್ ತಯಾರಿಯ ಬಗ್ಗೆ ಹೇಳಿಕೊಡಲಾಯಿತು. ಸಂಪನ್ಮೂಲ ವ್ಯಕ್ತಿಯಾದ ಶ್ರೀಮತಿ ದೇವಕಿ ಶಿಬಿರವನ್ನು ನಡೆಸಿಕೊಟ್ಟರು. ಶಿಬಿರದ ಜೊತೆಗೆ ಪುಸ್ತಕದ ಮಹತ್ವ, ಡಿಜಿಟಲ್ ಗ್ರಂಥಾಲಯ ಸದ್ಭಳಕೆಯನ್ನು ತಿಳಿಸಿಕೊಡಲಾಯಿತು. ಶಿಬಿರದಲ್ಲಿ ಒಟ್ಟು 61 ಮಕ್ಕಳು ಭಾಗವಹಿಸಿದ್ದರು.
ಈ ಸಂದರ್ಭ ಗ್ರಾ.ಪಂ. ಅಧ್ಯಕ್ಷೆ ಲಲಿತಾ, ಉಪಾಧ್ಯಕ್ಷೆ ವಿದ್ಯಾಲಕ್ಷ್ಮೀ ಪ್ರಭು, ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ವಿಲ್ಫ್ರೆಡ್ ಲಾರೆನ್ಸ್ ರೊಡ್ರಿಗಸ್, ಕಾರ್ಯದರ್ಶಿ ಗೀತಾ ಶೇಖರ್ ಉಪಸ್ಥಿತರಿದ್ದರು. ಗ್ರಂಥಾಲಯ ಮೇಲ್ವೀಚಾರಕಿ ಹೇಮಾವತಿ ಸಹಕರಿಸಿದರು.