ಕೊಳ್ನಾಡು: ಕ್ಷುಲ್ಲಕ ವಿಚಾರ ಹಲ್ಲೆ ಆರೋಪ – ಪ್ರಕರಣ ದಾಖಲು

0

ವಿಟ್ಲ: ಕ್ಷುಲ್ಲಕ ವಿಚಾರಕ್ಕೆ ಸಂಬಂಧಿಸಿದಂತೆ ಅವಾಚ್ಯ ಶಬ್ದಗಳಿಂದ ಬೈದು ಜಾತಿನಿಂದನೆ ಮಾಡಿ ಜೀವ ಬೆದರಿಕೆ ಒಡ್ಡಿದ ಆರೋಪದಲ್ಲಿ ವ್ಯಕ್ತಿಯೋರ್ವರ ವಿರುದ್ಧ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಬಂಟ್ವಾಳ ತಾಲೂಕು ಕೊಳ್ನಾಡು ಗ್ರಾಮದ ಕುಡ್ತಮುಗೇರು ನಿವಾಸಿ ಕೆ. ನಾರಾಯಣ ನಾಯ್ಕ (67ವ.)ರವರು ಬಂಟ್ವಾಳ ತಾಲೂಕು ಕೋಳ್ನಾಡು ಗ್ರಾಮದ ಮಂಕುಡೆ ಕಲ್ಕಾಜೆ ನಿವಾಸಿ ಗಣೇಶ್ ಶೆಟ್ಟಿ (48 ವ.)ರವರ ವಿರುದ್ಧ ದೂರು ನೀಡಿದ್ದಾರೆ.


ನಾನು ಪರಿಶಿಷ್ಟ ಪಂಗಡಕ್ಕೆ ಸೇರಿದವನಾಗಿದ್ದು, ಮೇ.21ರಂದು ಬೆಳಿಗ್ಗೆ ನನ್ನ ಮನೆಯಿಂದ ಹೊರಟು, ಕಲ್ಕಾಜೆ ಕೊಡಂಗೆ ಅಮೈಗೆ ಸಾರ್ವಜನಿಕರು ಹೋಗುವ ಕಾಲುದಾರಿಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ, ಬಂಟ್ವಾಳ ತಾಲೂಕು ಕೋಳ್ನಾಡು ಗ್ರಾಮದ ಮಂಕುಡೆ ಕಲ್ಕಾಜೆ ಎಂಬಲ್ಲಿಗೆ ತಲುಪಿದಾಗ ಗಣೇಶ್ ಶೆಟ್ಟಿರವರ ಮನೆಯ ಬಳಿ ದಾರಿ ಬದಿಯಲ್ಲಿದ್ದ ಸಣ್ಣಮರದ ಕೊಂಬೆಯು ದಾರಿಗೆ ಬಾಗಿದ್ದುದ್ದನ್ನು ನಾನು ಕೈಯಿಂದ ಮುರಿದು ಮುಂದಕ್ಕೆ ಹೋಗುತ್ತಿದ್ದಂತೆ ಗಣೇಶ್ ಶೆಟ್ಟಿ ನನ್ನನ್ನು ತಡೆದು, ಅವಾಚ್ಯ ಶಬ್ದಗಳಿಂದ ಬೈದು, ಜಾತಿ ನಿಂದನೆ ಮಾಡಿ, ಕೊಲೆ ಬೆದರಿಕೆಯನ್ನು ಹಾಕಿದ್ದಾರೆ ಎಂದು ಕೆ. ನಾರಾಯಣ ನಾಯ್ಕರವರು ವಿಟ್ಲ ಠಾಣಾ ಪೊಲೀಸರಿಗೆ ನೀಡಿದ ದೂರಿನಲ್ಲಿ ಆರೋಪಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

LEAVE A REPLY

Please enter your comment!
Please enter your name here