ಶ್ರೀ ದೇವಿ ಕ್ರಿಕೆಟರ್ಸ್ ನೆಲ್ಲಿಗುಂಡಿ ಇವರಿಂದ ಸಾಧಕರಿಗೆ ಸನ್ಮಾನ

0

ಪುತ್ತೂರು: ಶ್ರೀ ದೇವಿ ಕ್ರಿಕೆಟರ್ಸ್ ನೆಲ್ಲಿಗುಂಡಿ ಪುತ್ತೂರು ಇವರ ಆಶ್ರಯದಲ್ಲಿ 2023-24ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕದೊಂದಿಗೆ ತೇರ್ಗಡೆ ಹೊಂದಿದ ಶ್ರೀ ರಾಜ ಮತ್ತು ಶ್ರೀಮತಿ ಮೇಘ ದಂಪತಿಗಳ ಸುಪುತ್ರಿ ಕುಮಾರಿ ನಂದಿತಾ (587 ಅಂಕ) ಶ್ರೀ ಭಾಸ್ಕರ ಮತ್ತು ಶ್ರೀಮತಿ ಪವಿತ್ರ ದಂಪತಿಗಳ ಸುಪುತ್ರಿ ಕುಮಾರಿ ಬಿ.ಪಿ.ಸಿಂಚನಾ (572 ಅಂಕ) ಮತ್ತು ಶ್ರೀ ಜಯಪ್ರಕಾಶ್ ಮತ್ತು ಶ್ರೀಮತಿ ಪ್ರೇಮ ದಂಪತಿಗಳ ಸುಪುತ್ರಿ ಕುಮಾರಿ ಪ್ರಣಮ್ಯ (432 ಅಂಕ) ಇವರನ್ನು ಗುರುತಿಸಿ ಬಪ್ಪಳಿಗೆ ಶ್ರೀ ಮಾರಿಯಮ್ಮ ದೇವಸ್ಥಾನದಲ್ಲಿ ಮೇ 24 ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ದೇವಸ್ಥಾನ ಪ್ರಧಾನ ಅರ್ಚಕರಾದ ಸಂಜೀವ ಮೇಸ್ತ್ರಿ, ಜಗದೀಶ್ ಬಪ್ಪಳಿಗೆ, ಬೊಮ್ಮಣ್ಣ ನೆಲ್ಲಿಗುಂಡಿ, ಮೋಹನ್ ನೆಲ್ಲಿಗುಂಡಿ, ಸಂಜೀವ ನೆಲ್ಲಿಗುಂಡಿ, ತಂಡದ ಸದಸ್ಯರಾದ,ರೋಶನ್ ಬಪ್ಪಳಿಗೆ, ಆನಂದ ಬಪ್ಪಳಿಗೆ, ಚಂದ್ರಶೇಖರ ನೆಲ್ಲಿಗುಂಡಿ, ಯತೀಶ್ ನೆಲ್ಲಿಗುಂಡಿ,ರಂಜೀತ್ ನೆಲ್ಲಿಗುಂಡಿ, ಸುಮಂತ್,ರಿತೇಶ್,ರವಿಕುಮಾರ್, ಸುಮಂತ್ ಎನ್.ಎಸ್. ಮಧುಸೂಧನ್,ಅಭಿಷೇಕ್,ವಿನೀತ್, ವೇಣುಗೋಪಾಲ,ಧನುಷ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here