ಬಾರ್ಯ ಸುಂದರ ನೂರಿತ್ತಾಯ ಹೃದಯಾಘಾತದಿಂದ ನಿಧನ

0

ಪುತ್ತೂರು: ಪುತ್ತೂರು ನೆಹರುನಗರ ಗಣೇಶ್‌ಬಾಗ್ ನಿವಾಸಿ ಕ್ಯಾಂಪ್ಕೋ ನಿವೃತ್ತ ಅಧಿಕಾರಿ ಮತ್ತು ಪುತ್ತೂರು ಶಿವಳ್ಳಿ ಸಂಪದ ಸೌಹಾರ್ದ ಸಹಕಾರಿ ಸಂಘದ ನಿವೃತ್ತ ಸಿಇಓ, ಉಪ್ಪಿನಂಗಡಿ ಸಮೀಪದ ಬಾರ್ಯ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ,ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಅರ್ಚಕ ಮನೆತನದ ಬಾರ್ಯ ಸುಂದರ ನೂರಿತ್ತಾಯ(68ವ)ರವರು ಮೇ 30ರಂದು ಬೆಳಿಗ್ಗೆ ಹೃದಯಾಘಾತದಿಂದ ನಿಧನರಾದರು.

ಮೂಲತಃ ಉಪ್ಪಿನಂಗಡಿ ಸಮೀಪದ ಬಾರ್ಯ ನಿವಾಸಿಯಾಗಿದ್ದ ಬಾರ್ಯ ಸುಂದರ ನೂರಿತ್ತಾಯ ಅವರು ಪುತ್ತೂರು ಕ್ಯಾಂಪ್ಕೋ ನಿವೃತ್ತ ಮ್ಯಾನೇಜರ್ ಆಗಿದ್ದು,ಪುತ್ತೂರು ಶಿವಳ್ಳಿ ಸಂಪದ ಸೌಹಾರ್ಧ ಸಂಘದ ನಿವೃತ್ತ ಸಿಇಓ, ಪುತ್ತೂರಿನಲ್ಲೇ ವಾಸ್ತವ್ಯ ಹೊಂದಿದ್ದರು. ಅನಾರೋಗ್ಯದಿಂದ್ದ ಅವರು ಮೇ .30ರಂದು ಅವರ ಆರೋಗ್ಯದಲ್ಲಿ ಏರುಪೇರಾದ ಹಿನ್ನೆಲೆಯಲ್ಲಿ ಪುತ್ತೂರು ಆಸ್ಪತ್ರೆಗೆ ಕರೆದೊಯ್ದರು ಆಗಲೇ ಅವರು ಮೃತಪಟ್ಟಿದ್ದಾರೆ. ಮೃತರು ಪತ್ನಿ ಪ್ರೇಮಾ, ಪುತ್ರಿಯರಾದ ಶುಷ್ಮ ಮತ್ತು ಸ್ಮಿತಾ, ಸಹೋದರ ಆಂಜನೇಯ ಯಕ್ಷಗಾನ ಕಲಾ ಸಂಘದ ಅಧ್ಯಕ್ಷ ಭಾಸ್ಕರ್ ಬಾರ್ಯ ಮತ್ತು ಮೂವರು ಸಹೋದರಿಯರನ್ನು ಅಗಲಿದ್ದಾರೆ. ಶಿವಳ್ಳಿ ಸಂಪದ ಸೌಹಾರ್ದ ಸಹಕಾರಿ ಸಂಘದ ಸ್ಥಾಪಕಾಧ್ಯಕ್ಷ ನನ್ಯ ಅಚ್ಚುತ ಮೂಡೆತ್ತಾಯ, ಅಧ್ಯಕ್ಷ ಹರೀಶ್ ಪುತ್ತೂರಾಯ, ಉಪಾಧ್ಯಕ್ಷ ಜಯರಾಮ ಕೆದಿಲಾಯರವರು ಮೃತರ ಮನೆಗೆ ಭೇಟಿ ನೀಡಿ ಸಂತಾಪ ಸಲ್ಲಿಸಿದರು. ಮೃತರ ಮನೆಗೆ ಶಿವಳ್ಳಿ ಸಂಪದದ ಗಣ್ಯರು ಸೇರಿದಂತೆ ಅನೇಕರು ಭೇಟಿ ನೀಡಿದ್ದಾರೆ.

LEAVE A REPLY

Please enter your comment!
Please enter your name here