ಕೆದಿಲ: ಜಮೀನಿನ ವಿಚಾರದಲ್ಲಿ ಹಲ್ಲೆ-ಇತ್ತಂಡದ ವಿರುದ್ಧ ಪ್ರಕರಣ ದಾಖಲು

0

ಪುತ್ತೂರು: ಜಮೀನು ವಿಚಾರದಲ್ಲಿ ನಡೆದ ಹಲ್ಲೆ ಘಟನೆಗೆ ಸಂಬಂಧಿಸಿ ಇತ್ತಂಡದ ವಿರುದ್ಧ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಕೆದಿಲ ಬಾಯಬೆ ನಿವಾಸಿ ಲೋಕೋಪಯೋಗಿ ಗುತ್ತಿಗೆದಾರ ರಶೀದ್ ಎಂಬವರು ಪುತ್ತೂರು ಆಸ್ಪತ್ರೆಯಲ್ಲಿ ದಾಖಲಾಗಿದ್ದು, ನಾನು ಪಾಟ್ರಕೋಡಿ ಶಾಲೆಯಲ್ಲಿ ನಡೆಯುತ್ತಿದ್ದ ಕೆಲಸ ನೋಡಿಕೊಂಡು ಮನೆಗೆ ಬೈಕ್‌ನಲ್ಲಿ ಹೋಗುತ್ತಿದ್ದ ವೇಳೆ ಪಾಟ್ರಕೋಡಿಯಲ್ಲಿ ಆಲಿ, ಬಿಲಾಲ್, ಪಿ.ಕೆ.ಅಬ್ದುಲ್ ರಹಿಮಾನ್, ಪಿ.ಕೆ.ಹ್ಯಾರೀಸ್, ನಾಸೀರ್, ಅಫ್ರಿದ್ ಎಂಬವರು ನನ್ನ ತಂದೆಯ ಜಮೀನಿನಲ್ಲಿದ್ದ ಮರವನ್ನು ಕಡಿದು ಬೇಲಿ ತೆರವು ಮಾಡುತ್ತಿದ್ದರು. ಇದನ್ನು ವಿಚಾರಿಸಿದಾಗ ಅವರು ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ನಡೆಸಿ ಜೀವ ಬೆದರಿಕೆಯೊಡ್ಡಿರುವುದಾಗಿ ಅವರು ಆರೋಪಿಸಿದ್ದಾರೆ. ಪೊಲೀಸರು ಆರೋಪಿಗಳ ವಿರುದ್ಧ ಕಲಂ 143,147,148,447,323,324,504,506 ಜೊತೆಗೆ 149 ಐಪಿಸಿಯಂತೆ ಪ್ರಕರಣ ದಾಖಲಿಸಿದ್ದಾರೆ.

ಇನ್ನೊಂದು ಕಡೆ ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ಮೂರು ಮಂದಿ ದಾಖಲಾಗಿದ್ದು, ಪಾಟ್ರಕೋಡಿಯ ಹೈದರ್ ಪಿ.ಕೆ.ಎಂಬವರು ನೀಡಿದ ದೂರಿನಲ್ಲಿ, ಪಾಟ್ರಕೋಡಿಯಲ್ಲಿ ತಮ್ಮ ಅಜ್ಜನಿಂದ ಬಂದ ಜಾಗದಲ್ಲಿ ಮನೆ ನಿರ್ಮಿಸಲು ಮೇ.28ರಂದು ಅಣ್ಣ ಬಿಲಾಲ್, ದೊಡ್ಡಪ್ಪ ಮೋನು, ತಾಯಿ ಜಮೀಲ, ಚಿಕ್ಕಪ್ಪಂದಿರಾದ ಪಿ.ಕೆ.ರಹಿಮಾನ್, ಹಸೈನಾರ್, ಚಿಕ್ಕಮ್ಮಂದಿರಾದ ಫಾತಿಮತ್ ಜೊಹರಾ, ಆಯಿಷಾ, ಸಕೀನಾ ಮಿಶ್ರಿಯಾ, ಅನ್ನತ್ ಅವರು ಜಾಗದಲ್ಲಿದ್ದ ಗಿಡಗಳನ್ನು ತೆರವು ಮಾಡಿ ಸ್ವಚ್ಛಗೊಳಿಸುತ್ತಿದ್ದರು. ಈ ವೇಳೆ ಮಹಮ್ಮದ್ ರಶೀದ್ ಎಂಬವರು ಅಲ್ಲಿಗೆ ಬಂದು ಅವಾಚ್ಯ ಶಬ್ದಗಳಿಂದ ನಿಂದಿಸಿ ಅನ್ನತ್, ಆಲಿ ಹೈದರ್ ಮತ್ತು ಬಿಲಾಲ್ ಅವರಿಗೆ ಹಲ್ಲೆ ನಡೆಸಿದ್ದಾರೆ. ಇದೇ ವೇಳೆ ಮಹಮ್ಮದ್ ರಶೀದ್ ಅವರ ಸಹೋದರ ಫಾರೂಕ್ ಮತ್ತು ಮಹಮ್ಮದ್ ರಶೀದ್ ಅವರ ತಂದೆ ಉಸ್ಮಾನ್ ಅವರು ಬಂದು ಜೀವ ಬೆದರಿಕೆಯೊಡ್ಡಿದ್ದಾರೆ ಎಂದು ಆರೋಪಿಸಿದ್ದಾರೆ. ಪೊಲೀಸರು ಆರೋಪಿಗಳ ವಿರುದ್ಧ ಕಲಂ: 143,147,148,447,323,324,504,506 ಜೊತೆಗೆ 34 ಐಪಿಸಿ ಯಂತೆ ಪ್ರಕರಣ ದಾಖಲಿಸಿದ್ದಾರೆ.

LEAVE A REPLY

Please enter your comment!
Please enter your name here