ಯುವವಾಹಿನಿ ಪುತ್ತೂರು ಘಟಕದಿಂದ ಬಿಲ್ಲವ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ

0

ಪುತ್ತೂರು: ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯುವವಾಹಿನಿ ಪುತ್ತೂರು ಘಟಕದ ವತಿಯಿಂದ 2023-24ನೇ ಶೈಕ್ಷಣಿಕ ಸಾಲಿನಲ್ಲಿ  600ಕ್ಕಿಂತ ಅಧಿಕ ಅಂಕ ಗಳಿಸಿ ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ ಪುತ್ತೂರು ತಾಲೂಕಿನ ಬಿಲ್ಲವ ಗ್ರಾಮ ಸಮಿತಿಗಳ ವಿದ್ಯಾರ್ಥಿಗಳನ್ನು ಅಭಿನಂದಿಸುವ ಕಾರ್ಯಕ್ರಮ ಮೇ.30 ರಂದು ಆಯಾಯ ವಿದ್ಯಾರ್ಥಿಗಳ ಮನೆಗಳಿಗೆ ತೆರಳಿ ಅಭಿನಂದನೆ ಸಲ್ಲಿಸುವ ಮೂಲಕ ವಿಶಿಷ್ಟವಾಗಿ ನಡೆಯಿತು. 

ಬ್ರಹ್ಮಶ್ರೀ ನಾರಾಯಣಗುರುಸ್ವಾಮಿ ಬಿಲ್ಲವ ಗ್ರಾಮ ಸಮಿತಿ ಶಾಂತಿಗೋಡಿನ ಪರಕಮೆ ನಿವಾಸಿಗಳಾದ ಸತೀಶ್ ಪೂಜಾರಿ ಪರಕಮೆ ಹಾಗೂ ರೂಪಲತಾ ಸತೀಶ್ ದಂಪತಿಗಳ ಪುತ್ರ ಮೋಕ್ಷಿತ್ ಪಿ. ಎಸ್(614 ಅಂಕ), ಕೆದಂಬಾಡಿ ಗ್ರಾಮ ಸಮಿತಿಯ ನಾರಾಯಣ ಪೂಜಾರಿ ಕುರಿಕ್ಕಾರ ಹಾಗೂ ದಿವ್ಯ ದಂಪತಿಗಳ ಪುತ್ರಿ ಸನ್ನಿಧಿ(610 ಅಂಕ), ಒಳಮೊಗ್ರು ಗ್ರಾಮ ಸಮಿತಿಯ ಸತೀಶ್ ಪೂಜಾರಿ ಹಾಗೂ ದಿವ್ಯಜ್ಯೋತಿ ದಂಪತಿಗಳ ಪುತ್ರಿ ಸೃಷ್ಟಿ(608 ಅಂಕ) ಇವರುಗಳನ್ನು ಅವರ ಹೆತ್ತವರ ಹಾಗೂ ಮನೆಯ ಹಿರಿಯರ ಸಮ್ಮುಖದಲ್ಲಿ ಸನ್ಮಾನಿಸಲಾಯಿತು. 

ಯುವವಾಹಿನಿ ಪುತ್ತೂರು ಘಟಕದ ಅಧ್ಯಕ್ಷ ಜಯರಾಮ್ ಬಿ. ಎನ್.ರವರು ಸ್ವಾಗತಿಸಿ ಮಾತನಾಡಿ, ಅಧಿಕ ಅಂಕ ಗಳಿಸಿ ನಮ್ಮ ಸಮಾಜಕ್ಕೆ ಒಳ್ಳೆಯ ಹೆಸರನ್ನು ತಂದು ಕೊಟ್ಟ ವಿದ್ಯಾರ್ಥಿಗಳ ಸಾಧನೆ ಶ್ಲಾಘನೀಯ. ಅವರ ವಿದ್ಯಾಸಾಧನೆಯು ಉತ್ತಮ ರೀತಿಯಲ್ಲಿ ಸಾಗಿ ಭವಿಷ್ಯದಲ್ಲಿ ಅವರು ಹೆತ್ತವರಿಗೂ, ಊರಿಗೂ, ನಮ್ಮ ಸಮಾಜಕ್ಕೂ ಒಳ್ಳೆಯ ಹೆಸರನ್ನು ತರುವಲ್ಲಿಯೂ, ಅದೇ ರೀತಿಯಲ್ಲಿ ದೇಶದಲ್ಲಿ ಸತ್ಪ್ರಜೆಯಾಗಿ ಬಾಳುವಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ ಕೃಪಾಶೀರ್ವಾದ ಸದಾ ಅವರ ಮೇಲಿರಲಿ ಎಂದು ಹೇಳಿ ಶುಭ ಹಾರೈಸಿದರು. 

ಈ ಸಂದರ್ಭದಲ್ಲಿ ಯುವವಾಹಿನಿ ಪುತ್ತೂರು ಘಟಕದ ಅಧ್ಯಕ್ಷ ಉಪಾಧ್ಯಕ್ಷ ಅಣ್ಣಿ ಪೂಜಾರಿ ಚಿಕ್ಕಮುಡ್ನೂರು, ನಿಕಟಪೂರ್ವ ಅಧ್ಯಕ್ಷ ಉಮೇಶ್ ಬಾಯಾರ್, ಕಾರ್ಯದರ್ಶಿ ಶಮಿತ್ ಪರ್ಪುಂಜ, ಕೋಶಾಧಿಕಾರಿ ಶರತ್ ಕೈಪಂಗಳ ದೋಳ, ಘಟಕದ ಮಾಜಿ ಅಧ್ಯಕ್ಷ ಉದಯ ಪೂಜಾರಿ ಕೋಲಾಡಿ, ನಿರ್ದೇಶಕರುಗಳಾದ ದಾಮೋದರ ಸುವರ್ಣ ಶಾಂತಿಗೋಡು, ಶಿವಪ್ರಸಾದ್ ಕುಂಬ್ರ, ಹರೀಶ್ ಎಂ. ಕೆ, ಮೋಹನ್ ಶಿಬರ, ನವ್ಯ ದಾಮೋದರ್ ಶಾಂತಿಗೋಡು, ಕೋಚಣ್ಣ ಪೂಜಾರಿ ಎಂಡೆಸಾಗು, ಬಾಳಪ್ಪ ಸುವರ್ಣ ಬಾಲಯ, ವಸಂತ ಪೂಜಾರಿ ಕಲ್ಲರ್ಪೆ, ವೈಷ್ಣವಿ ಶಾಂತಿಗೋಡು ಹಾಗೂ ಎಲ್ಲಾ ವಿದ್ಯಾರ್ಥಿಗಳ ಹೆತ್ತವರು ಹಾಗೂ ಬಂಧುಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here