ಮಾಣಿಯ ಕರ್ನಾಟಕ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶಿಕ್ಷಕ ರಕ್ಷಕ ಸಭೆ

0

ಸಂಸ್ಥೆಯು ಪ್ರೌಢ ಶಿಕ್ಷಣಕ್ಕೆ ಕಾಲಿಡುತ್ತಿರುವುದು ಸಂತಸದ ವಿಷಯ: ಕಿರಣ್ ಹೆಗ್ಡೆ
ಮನೆಯೇ ಮೊದಲ ಪಾಠಶಾಲೆ: ಗಂಗಾಧರ ಆಳ್ವ

ವಿಟ್ಲ: ಮಾಣಿಯ ಕರ್ನಾಟಕ ಆಂಗ್ಲ ಮಾಧ್ಯಮ ಶಾಲೆಯ 2024-25ನೇ ಶೈಕ್ಷಣಿಕ ವರ್ಷದ ಮೊದಲನೇ ಶಿಕ್ಷಕ ರಕ್ಷಕ ಸಭೆಯು ಮಾಣಿ ವಿದ್ಯಾಬಿವರ್ಧಕ ಸಂಘದ ಅಧ್ಯಕ್ಷರಾದ ಕಿರಣ್ ಹೆಗ್ಡೆರವರ ಅಧ್ಯಕ್ಷತೆಯಲ್ಲಿ ನಡೆಯಿತು.


ಬಳಿಕ ಮಾತನಾಡಿದ ಅವರು ಸಂಸ್ಥೆಗೆ ನೂತನವಾಗಿ ಖರೀದಿಸಿದ ಎರಡು ಬಸ್ಸುಗಳ ಬಗ್ಗೆ ಮಾಹಿತಿ ನೀಡಿ, ಸಂಸ್ಥೆಯು ಪ್ರೌಢ ಶಿಕ್ಷಣಕ್ಕೆ ಕಾಲಿಡುತ್ತಿರುವುದು ಸಂತಸದ ವಿಷಯ ಎಂದರು. ಮಾಣಿ ವಿದ್ಯಾಭಿವರ್ಧಕ ಸಂಘದ ಆಡಳಿತ ಮಂಡಳಿ ಸದಸ್ಯರಾಗಿರುವ, ತುಂಬೆ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಗಂಗಾಧರ ಆಳ್ವರು ಸಂಪನ್ಮಾಲ ವ್ಯಕ್ತಿಯಾಗಿ ಆಗಮಿಸಿ ಮಾತನಾಡಿ
ಮಕ್ಕಳ ಮೊದಲ ಪಾಠಶಾಲೆ ಮನೆಯಾಗಿರುವುದು, ಶಾಲೆಯಲ್ಲಿ ಮಕ್ಕಳನ್ನು ಶಿಕ್ಷಕರು ತಮ್ಮ ಸ್ವಂತ ಮಕ್ಕಳಂತೆ ಕಂಡು ಅವರಿಗೆ ಉನ್ನತ ಶಿಕ್ಷಣ ನೀಡುವುದು ಶಿಕ್ಷಕರ ಗುರಿಯಾಗಿರಬೇಕು, ಮನಸ್ಸಿದ್ದರೆ ಮಾರ್ಗ ಎಂದರು. ಶಾಲಾ ಸಂಚಾಲಕರಾದ ಹಾಜಿ ಇಬ್ರಾಹಿಂ ಇವರು ಸಭೆಯಲ್ಲಿ ಉಪಸ್ಥಿತರಿದ್ದರು.

ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷರು ಮೆಲ್ವಿನ್ ಕಿಶೋರ್ ಮಾರ್ಟಿಸ್ ಇವರು ಶಾಲೆಯ ಅಭಿವೃದ್ಧಿಯಲ್ಲಿ ಪೋಷಕರಾದ ನಾವು ಕೈ ಜೋಡಿಸುತ್ತೇವೆ ಎಂದು ಆಶ್ವಾಸನೆ ನೀಡಿದರು. ಶಾಲೆಯ ಮುಖ್ಯೋಪಾದ್ಯಾಯನಿ ಸಾರಿಕಾ ಶಾಲೆಯ ವೈಶಿಷ್ಟತೆಯ ಬಗ್ಗೆ ಹಾಗೂ 2024-25ನೇ ಸಾಲಿನ ವಿವಿಧ ಕಾರ್‍ಯಕ್ರಮಗಳು ಹಾಗೂ ಪಠ್ಯೇತರ ಚಟುವಟಿಕೆಗಳ ಬಗ್ಗೆ ಸಮಗ್ರ ಮಾಹಿತಿಯನ್ನು ನೀಡಿದರು. ಸಭೆಯಲ್ಲಿ ಶಾಲಾ ಆಡಳಿತ ಮಂಡಳಿಯ ಸದಸ್ಯರು. ಶಾಲಾ ಸಹ ಶಿಕ್ಷಕಿಯರಾದ ಧನ್ಯ ಶ್ರೀ ಹಾಗೂ ರೇಷ್ಮಾ ಪ್ರಾರ್ಥಿಸಿದರು. ಭವ್ಯ ಸ್ವಾಗತಿಸಿ, ಸವಿತಾ ವಂದಿಸಿದರು, ಲೋಲಾಕ್ಷಿ ಕಾರ್‍ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here