ಎನ್‌ಎಂಎಂಎಸ್ ಪರೀಕ್ಷೆ: ನೇರ್ಲ ಶಾಲಾ ಮೂವರು ವಿದ್ಯಾರ್ಥಿಗಳು ಉತ್ತೀರ್ಣ

0

ನೆಲ್ಯಾಡಿ:2023-24ನೇ ಸಾಲಿನಲ್ಲಿ 8ನೇ ತರಗತಿ ವಿದ್ಯಾರ್ಥಿಗಳಿಗೆ ನಡೆಸಲಾದ ಎನ್‌ಎಂಎಂಎಸ್ ಪರೀಕ್ಷೆಯಲ್ಲಿ ಇಚ್ಲಂಪಾಡಿ ನೇರ್ಲ ಸರಕಾರಿ ಉನ್ನತೀಕರಿಸಿದ ಹಿ.ಪ್ರಾ.ಶಾಲೆಯ ವಿದ್ಯಾರ್ಥಿಗಳಾದ ಕಾವ್ಯಶ್ರೀ, ಯಶ್ಮಿತಾ ಬಿ.ಕೆ., ಸಾನ್ವಿ ಎಸ್.ಎಂ.ಅವರು ತೇರ್ಗಡೆಗೊಂಡು ವಿದ್ಯಾರ್ಥಿ ವೇತನ ಪಡೆಯಲು ಅರ್ಹರಾಗಿದ್ದಾರೆ.

ಪ್ರಸಕ್ತ ಸಾಲಿನ ಶೇಕಡವಾರು ಫಲಿತಾಂಶದಲ್ಲಿ ನೇರ್ಲ ಶಾಲೆ ಶೇ.60ರೊಂದಿಗೆ ಪುತ್ತೂರು-ಕಡಬ ತಾಲೂಕಿನಲ್ಲಿ ಪ್ರಥಮ ಸ್ಥಾನ ಪಡೆದುಕೊಂಡಿದೆ. ಶಾಲೆಯ ಟಿಜಿಟಿ ಶಿಕ್ಷಕ ಸಂದೀಪ್‌ಕುಮಾರ್, ಜಿಪಿಟಿ ಶಿಕ್ಷಕ ಡಾ.ಗಿರೀಶ್ ಎಚ್.ಎಂ.ಅವರು ವಿದ್ಯಾರ್ಥಿಗಳಿಗೆ ತರಬೇತಿ ನೀಡಿದ್ದರು. ಸತತವಾಗಿ 8 ವರ್ಷಗಳಿಂದ ನೇರ್ಲ ಶಾಲೆಯ ವಿದ್ಯಾರ್ಥಿಗಳು ಎನ್‌ಎಂಎಂಎಸ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ವಿದ್ಯಾರ್ಥಿ ವೇತನ ಪಡೆಯುತ್ತಿದ್ದಾರೆ ಎಂದು ಶಾಲಾ ಮುಖ್ಯಗುರು ಜಯಶ್ರೀ ಎಸ್., ಎಸ್‌ಡಿಎಂಸಿ ಅಧ್ಯಕ್ಷ ವಸಂತರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here