ನಿವೃತ್ತ ಯೋಧ ನೆಲಪ್ಪಾಲು ಶಾಂತ ಕುಮಾರ್ ನಾಯ್ಕ್ ರವರ ಶ್ರದ್ದಾಂಜಲಿ ಸಭೆ

0

ಪುತ್ತೂರು: ಮೇ.21ರಂದು ನಿಧನರಾದ ಪರಿವಾರ ಕ್ರೆಡಿಟ್ ಕೋ- ಓಪರೇಟಿವ್ ಸೊಸೈಟಿಯ ಮಾಜಿ ನಿರ್ದೇಶಕ , ಪರಿವಾರ ಬಂಟರ ಸಂಘ ಪುತ್ತೂರು ವಲಯದ ಉಪಾಧ್ಯಕ್ಷರೂ ಆಗಿದ್ದ ನಿವೃತ್ತ ಯೋಧ ಶಾಂತ ಕುಮಾರ್ ನಾಯ್ಕ್ ಅವರ ಶ್ರದ್ದಾಂಜಲಿ ಸಭೆ ಜೂನ್ 1ರಂದು ಉಪ್ಪಿನಂಗಡಿ ಸಹಸ್ರಲಿಂಗೇಶ್ವರ ದೇವಸ್ಥಾನದ ನೇತ್ರಾವತಿ ಸಭಾ ಭವನದಲ್ಲಿ ನಡೆಯಿತು.

ನುಡಿನಮನ ಸಲ್ಲಿಸಿದ ಪ್ರಕಾಶ್ ನಾಯ್ಕ್ ಆಲಿಕೋಡಿ ಮಾತನಾಡಿ ಯೋಧರಾಗಿ ಶಿಸ್ತಿನ ಜೀವನ ನಿರ್ವಹಣೆ ಮಾಡಿ, ಸಂಘ ಸಂಸ್ಥೆಯಲ್ಲಿ ಸಕ್ರೀಯವಾಗಿ ದುಡಿದು, ಸಮಾಜ ಮುಖಿ ಚಿಂತನೆಗಳೊಂದಿಗೆ ಬಾಳಿ, ಕುಟುಂಬ ಸಂಸಾರವನ್ನು ಮುನ್ನಡೆಸಿ ನಮ್ಮೆಲ್ಲರನ್ನು ಅಗಲಿದ ನಿಮ್ಮ ದಿವ್ಯಾತ್ಮ ಭಗವಂತನ ಸನ್ನಿದಿಯಲ್ಲಿ ಚಿರಶಾಂತಿಯಲ್ಲಿರಲಿ ಮನೆಯವರಿಗೆ ನಿಮ್ಮ ಅಗಲಿಕೆಯ ನೋವನ್ನು ಸಹಿಸುವ ಶಕ್ತಿಯನ್ನು ಭಗವಂತನು ಕರುಣಿಸಲಿ ಎಂದರು. ಬಳಿಕ ಒಂದು ನಿಮಿಷದ ಮೌನ ಪ್ರಾರ್ಥನೆ ಸಲ್ಲಿಸಿ ಶಾಂತ ಕುಮಾರ್ ನಾಯ್ಕ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು. ಪರಿವಾರ ಕ್ರೆಡಿಟ್ ಕೋ- ಓಪರೇಟಿವ್ ಸೊಸೈಟಿಯ ಅಧ್ಯಕ್ಷ ಸಂತೋಷ್ ಕುಮಾರ್, ಉಪಾಧ್ಯಕ್ಷ ಶಂಕರ್ ನಾಯ್ಕ್, ನಿರ್ದೇಶಕ ರಾಕೇಶ್ ನಾಯ್ಕ್, ಡಾ.ಸುರೇಶ್ ಪುತ್ತೂರಾಯ, ಪ್ರಸನ್ನ ಮಾರ್ತ, ಪ್ರಸನ್ನ ಶೆಟ್ಟಿ ಸಾಮೆತ್ತಡ್ಕ, ನಗರಸಭೆ ಮಾಜಿ ಅಧ್ಯಕ್ಷರುಗಳಾದ ಜೀವಂಧರ್ ಜೈನ್, ನೆಲ್ಲಿಕಟ್ಟೆ ಜಗದೀಶ್ ಶೆಟ್ಟಿ, ಉಮೇಶ್ ಕೋಡಿಬೈಲು, ಕೃಷ್ಣ ನಾಯ್ಕ್ ಮಧೂರು, ಎ.ಟಿ. ನಾಯ್ಕ್ ಕಾಸರಗೋಡು, ಪ್ರಕಾಶ್ ನಾಯ್ಕ್, ನಿವೃತ್ತ ಪೋಲಿಸ್ ಸುರೇಶ್ ನಾಯ್ಕ್ ಸೇರಿದಂತೆ ಹಲವಾರು ಗಣ್ಯರು ಸೇರಿದಂತೆ ಮೃತರ ಪತ್ನಿ ವನಿತಾ, ಪುತ್ರರಾದ ಶ್ರವಣ್ ನಾಯ್ಕ್, ಸಾತ್ವಿಕ್ ನಾಯ್ಕ್, ಪುತ್ರಿ ಶ್ರೇಯಾ, ಅಳಿಯ ಪ್ರಿಯೇಶ್ ನಾಯ್ಕ್ , ಮೊಮ್ಮಗಳು ಆರ್ಯಲಕ್ಷ್ಮೀ, ಸಹೋದರ, ಸಹೋದರಿಯರು ಹಾಗೂ ಬಂಧು ಮಿತ್ರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here