ಪುತ್ತೂರು.ಮಂಗಳೂರಿನ ಜನನಿಬಿಡ ಪ್ರದೇಶದ ರಸ್ತೆಯಲ್ಲಿ ನಮಾಜು ಮಾಡಿ ಸಾರ್ವಜನಿಕರಿಗೆ ತೊಂದರೆ ಮತ್ತು ಕೋಮು ದ್ವೇಷ ಹರಡಿದವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಹೇಳಿದ ಹಿಂದೂ ಸಂಘಟನೆಯ ಮುಖಂಡ ಶರಣ್ ಪಂಪ್ ವೆಲ್ ಮೇಲೆಯೇ ಕೇಸು ದಾಖಲಿಸಿದ ಪೊಲೀಸ್ ರ ನಡೆ ಸರಿಯಲ್ಲ ಎಂದು ಪುತ್ತೂರು ಗ್ರಾಮಾಂತರ ಮಂಡಲ ಅಧ್ಯಕ್ಷ ಸಾಜ ರಾಧಕೃಷ್ಣ ಆಳ್ವ ತಿಳಿಸಿದ್ದಾರೆ.
ಅಷ್ಟು ಮಾತ್ರವಲ್ಲದೇ ನಮಾಜು ಮಾಡಿದವರ ಮೇಲೆ ಸುಮೋಟೋ ಕೇಸ್ ದಾಖಲಿಸಿದ ಅಧಿಕಾರಿಯನ್ನು ರಜೆಯಲ್ಲಿ ಕಳುಹಿಸಿ ದಾಖಾಲಾದ ಕೇಸನ್ನು ಹಿಂಪಡೆಯಲು ಹುನ್ನಾರ ನಡೆಸಿದ ಕಾಂಗ್ರೆಸ್ ಸರಕಾರ ಹಿಂದೂಗಳಿಗೊಂದು ನ್ಯಾಯ ಮುಸ್ಲಿಮರಿಗೊಂದು ನ್ಯಾಯ ಮಾಡುತ್ತಿದೆ. ಈ ಸರಕಾರದಿಂದ ಬಹುಸಂಖ್ಯಾತರಿಗೆ ನ್ಯಾಯ ಸಿಗುವುದು ಮರೀಚಿಕೆಯಾಗಿದೆ ಹಾಗೂ ಹಿಂದೂ ಮುಖಂಡ ಶರಣ್ ಪಂಪ್ ವೆಲ್ ಮೇಲೆ ದಾಖಾಲಾದ ಕೇಸನ್ನು ಕೂಡಲೇ ಹಿಂಪಡೆಯಬೇಕು ಎಂದು ಆಗ್ರಹಿಸಿದ್ದಾರೆ.