ನೆಲ್ಯಾಡಿ: ಸಂತ ಅಲ್ಫೋನ್ಸ ಚರ್ಚ್‌ನಲ್ಲಿ ಪ್ರತಿಭಾ ಸಂಗಮ

0

ನೆಲ್ಯಾಡಿ: ಬೆಳ್ತಂಗಡಿ ಧರ್ಮಪ್ರಾಂತ್ಯಕ್ಕೆ ಒಳಪಟ್ಟ ನೆಲ್ಯಾಡಿ ಸಂತ ಅಲ್ಫೋನ್ಸ ಚರ್ಚ್‌ನಲ್ಲಿ ಜೂ.2ರಂದು ಪ್ರತಿಭಾ ಸಂಗಮ ನಡೆಯಿತು.
ಮುಖ್ಯ ಅತಿಥಿಯಾಗಿದ್ದ ಸಾಹಿತಿ ಜೆಸ್ಸಿ ಪಿ.ವಿ.ಅವರು ಮಾತನಾಡಿ, ವಿದ್ಯಾರ್ಥಿಗಳು ಜ್ಞಾನದ ಜೊತೆಗೆ ಸದ್ಗುಣಗಳನ್ನೂ ಬೆಳೆಸಿಕೊಂಡಾಗ ಸಮಗ್ರ ವ್ಯಕ್ತಿತ್ವ ಬೆಳೆಯಲು ಸಾಧ್ಯ ಎಂದು ಹೇಳಿದರು.

ಧರ್ಮಗುರು ವಂದನಿಯ ಫಾ.ಶಾಜಿ ಮ್ಯಾಥ್ಯು ವಹಿಸಿದ್ದರು. ನೆಲ್ಯಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿವೃತ್ತ ಮೇನೇಜರ್ ಸೆಬಾಸ್ಟಿಯನ್ ಪುಳಿಕಾಯತ್‌ರವರು ಚರ್ಚ್‌ಗೆ ನೀಡಿದ ಸೇವೆಯನ್ನು ಪರಿಗಣಿಸಿ ಸ್ಮರಣಿಕೆ ನೀಡಿ ಗೌರವಿಸಲಾಯಿತು. ದ್ವಿತೀಯ ಪಿಯುಸಿ ಮತ್ತು ಹತ್ತನೇ ತರಗತಿಯಲ್ಲಿ ವಿಶಿಷ್ಟ ಸಾಧನೆಗೈದ ವಿದ್ಯಾರ್ಥಿಗಳನ್ನು ಸ್ಮರಣಿಕೆ ನೀಡಿ ಗೌರವಿಸಲಾಯಿತು. ಸಂಡೆ ಸ್ಕೂಲ್‌ನಲ್ಲಿ ವಿಶಿಷ್ಟ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೂ ಬಹುಮಾನ ವಿತರಿಸಲಾಯಿತು. ಸಿ| ಲಿಸ್ ಮ್ಯಾಥ್ಯು, ರೊಯ್ ಕೊಳಮ್‌ಗರಾತ್ತ್, ನಿವೃತ್ತ ಸೈನಿಕ ಹಾಗೂ ಟ್ರಸ್ಟಿ ಅಲೆಕ್ಸ್ ಚೆ೦ಪಿತಾನಮ್, ರಕ್ಷಕ ಶಿಕ್ಷಕ ಸಂಘದ ಪದಾಧಿಕಾರಿಗಳಾದ ಪ್ರಕಾಶ್ ಕೆ.ಜೆ, ಲಿಸ್ಸಿ, ಕುಮಾರ ಆಲ್ಟೊರವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here