ಭಾರಿ ಮಳೆ: ಕೂಡುರಸ್ತೆ  ಮದರಸದ ಕಾಂಪೌಂಡ್ ಕುಸಿತ

0

ಪುತ್ತೂರು: ಜೂ.3ರಂದು ಸಂಜೆ ಸುರಿದ ಭಾರೀ ಮಳೆಗೆ ಸರ್ವೆ ಗ್ರಾಮದ ಕೂಡುರಸ್ತೆ ಮದರಸದ ಕಾಂಪೌಂಡ್ ಕುಸಿತಗೊಂಡಿದೆ. ಕಾಂಪೌಂಡ್ ಕುಸಿತದ ವೇಳೆ ಅದೃಷ್ಟವಶಾತ್ ಯಾವುದೇ ಅನಾಹುತ ಸಂಭವಿಸಿಲ್ಲ. ಘಟನೆಯಿಂದ 2 ಲಕ್ಷ ರೂ. ಅಂದಾಜು ನಷ್ಟ ಸಂಭವಿಸಿದೆ. ಘಟನೆ ವೇಳೆ ಕಾಂಪೌಂಡ್ ಕಲ್ಲುಗಳು ರಸ್ತೆಗೆ ಬಿದ್ದಿದ್ದು ಅದನ್ನು ಕೂಡುರಸ್ತೆ ಜಮಾಅತರು ಸೇರಿಕೊಂಡು ತೆರವು ಮಾಡಿರುವುದಾಗಿ ತಿಳಿದು ಬಂದಿದೆ.

LEAVE A REPLY

Please enter your comment!
Please enter your name here