





ಕಾಣಿಯೂರು: ಕಡಬ ತಾಲೂಕಿನ ಚಾರ್ವಾಕ ಗ್ರಾಮದ ಶ್ರೀ ಕಪಿಲೇಶ್ವರ ಸಿಂಗಾರಿ ಮೇಳ ಚಾರ್ವಾಕ ತಂಡವು ಐದನೇ ವರ್ಷಚಾರಣೆಯ ಸಂಭ್ರಮದಲಿದ್ದು, ಆ ಪ್ರಯುಕ್ತ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಶ್ರೀ ಕಪಿಲೇಶ್ವರ ದೇವಸ್ಥಾನದ ಆಸುಪಾಸಿನಲ್ಲಿ,ಕಾಸ್ಪಾಡಿ ಇರ್ವೇರ್ ಉಳ್ಳಾಕುಲು ಮಾಲ್ಯದ ಆಸುಪಾಸಿನಲ್ಲಿ ಹಾಗು ದೇವಿನಗರ ಶ್ರೀ ಅಮ್ಮನವರ ದೇವಸ್ಥಾನ ಆಸುಪಾಸಿನಲ್ಲಿ 100 ಕ್ಕೂ ಅಧಿಕ ಉತ್ತಮ ಜಾತಿ ಸಸಿ ಹಾಗು ಹಣ್ಣು ನೀಡುವ ಸಸಿಗಳನ್ನು ನೆಟ್ಟು ಪೋಷಿಸುವ ಮೂಲಕ ತಮ್ಮ ಎರಡನೇ ಹಂತದ ಸಂಭ್ರಮಚರಣೆಯನ್ನು ಆಚರಿಸಿಕೊಂಡರು.


ಉತ್ತಮ ಸಸಿಗಳಾದ ಹಲಸು, ಕಿರಲ್ ಬೋಗಿ ,ಬಿಲ್ವಪತ್ರೆ,ನೇರಳೆ, ರಾಂಬುಟನ್, ಶ್ರೀ ಗಂಧ, ರಕ್ತಚಂದನ,ಸಾಗುವನಿ,ಸಂಪಿಗೆ,ಮಾವು,ಗೋಳಿ,ಅಶ್ವತ್ಥ ಹಾಗೂ ಇನ್ನಿತರ ಸಸಿಗಳನ್ನು ನೆಡಲಾಯಿತು.ಈ ಸಂದರ್ಭದಲ್ಲಿ ಸಹಕರಿಸಿದ ಶ್ರೀ ಕಪಿಲೇಶ್ವರ ದೇವಸ್ಥಾನದ ಹಾಗೂ ಕಾಸ್ಪಾಡಿಗುತ್ತು ಇರ್ವೆರ್ ಉಳ್ಳಾಕುಳು ಮಾಳ್ಯದ ಆಡಳಿತ ಸಮಿತಿಯವರು ಹಾಗೂ ಹಿರಿಯರು,ಊರಿನ ಪ್ರಮುಖರು ಹಾಗೂ ಹಿರಿಯರಾದ ಶ್ರೀ ಬಾಲಕೃಷ್ಣ ರೈ ಕಾಸ್ಪಾಡಿಗುತ್ತು, ಕರುಣಾಕರ ರೈ ಕಾಸ್ಪಾಡಿಗುತ್ತು, ಬೈಲುವಾರು ಪಂಗಡದ ಅಧ್ಯಕ್ಷರು ಶ್ರೀ ಕುಸುಮಾಧಾರ ಗೌಡ ಬೀರೋಳಿಗೆ,ಸಿಂಗಾರಿ ಮೇಳದ ಅಧ್ಯಕ್ಷರು ಶ್ರೀ ಗೌತಮ್ ಕಜೆ ಹಾಗು ಸಿಂಗಾರಿ ಮೇಳದ ಆಡಳಿತ ಸಮಿತಿಯವರು ಮತ್ತು ಸದಸ್ಯರು ಉಪಸ್ಥಿತರಿದ್ದರು.











