ಪುತ್ತೂರು: ಸಾಮಾಜಿಕ ಅರಣ್ಯ ವಲಯ ಪುತ್ತೂರು ಹಾಗೂ ಸರಕಾರಿ ಪ್ರಥಮ ದರ್ಜೆ ಕಾಲೇಜು ಬೆಟ್ಟಂಪಾಡಿ ಜಂಟಿಯಾಗಿ ಕಾಲೇಜು ಆವರಣದಲ್ಲಿ ವಿಶ್ವ ಪರಿಸರ ದಿನದ ಪ್ರಯುಕ್ತ ವನಮಹೋತ್ಸವವನ್ನು ಕಾಲೇಜಿನಲ್ಲಿ 1 ದಿನದ ಶಿಬಿರ ನಡೆಸುವ ಮೂಲಕ ಆಚರಿಸಲಾಯಿತು.
ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕ ಮತ್ತು ರೋವರ್ಸ್ ಮತ್ತು ರೇಂಜರ್ಸ್ ಘಟಕಗಳು ಪರಿಸರ ದಿನ ಆಚರಣೆಯಲ್ಲಿ ಪಾಲ್ಗೊಂಡು ಶಾಲಾ ಆವರಣದಲ್ಲಿ 100 ಗಿಡಗಳನ್ನು ನೆಡಲಾಯಿತು ಹಾಗೂ 25 ಸಸಿಗಳನ್ನು ವಿತರಿಸಲಾಯಿತು.ಕಾರ್ಯಕ್ರಮವನ್ನು ಸಾಮಾಜಿಕ ಅರಣ್ಯ ವಲಯ ಪುತ್ತೂರಿನ ವಲಯ ಅರಣ್ಯ ಅಧಿಕಾರಿ ವಿದ್ಯಾರಾಣಿ ಪಿ.ಕೆ. ಉದ್ಘಾಟಿಸಿ ಸಸಿಗಳನ್ನು ನೆಡುವ ಮೂಲಕ ವನಮಹೋತ್ಸವವನ್ನು ಆಚರಿಸಲಾಯಿತು.
ಕಾಲೇಜಿನ ಪ್ರಾಂಶುಪಾಲ ವರದರಾಜ್ ಚಂದ್ರಗಿರಿ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದರು. ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಸೇವಾ ಯೋಜನೆಯ ಯೋಜನಾಧಿಕಾರಿ ಲೋಯ್ ವಿಕ್ಕಿ ಡಿ’ಸೋಜ, ರೋವರ್ಸ್ ಮತ್ತು ರೇಂಜರ್ಸ್ ಘಟಕಗಳ ಲೀಡರ್ ತಿಮ್ಮಯ್ಯ ಎಲ್.ಎನ್, ಕಾಲೇಜಿನ ಆಂತರಿಕ ಗುಣಮಟ್ಟ ಕೋಶದ ಸಹ ಸಂಯೋಜಕ ಅನಂತ್ ಭಟ್, ಸಾಮಾಜಿಕ ಅರಣ್ಯ ವಲಯ ಪುತ್ತೂರಿನ ಉಪ ವಲಯ ಅರಣ್ಯ ಅಧಿಕಾರಿ ಯಶೋಧರ, ಹಾಗೂ ರಾಷ್ಟ್ರೀಯ ಸೇವಾ ಯೋಜನೆ ಘಟಕ ಮತ್ತು ರೋವರ್ಸ್ ಮತ್ತು ರೇಂಜರ್ಸ್ ಘಟಕಗಳ ವಿದ್ಯಾರ್ಥಿಗಳು ಭಾಗವಹಿಸಿದರು. ಕಾರ್ಯಕ್ರಮದ ಪ್ರಯುಕ್ತ ಚಿತ್ರಕಲಾ ಸ್ಪರ್ಧೆಯನ್ನು ನಡೆಸಿ, ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನವನ್ನು ವಿತರಿಸಲಾಯಿತು.