ಶಿಕ್ಷಕರ, ಪದವೀಧರ ಕ್ಷೇತ್ರದಲ್ಲಿ ಬಿಜೆಪಿ ಜಯಭೇರಿ- ಸಂಭ್ರಮಾಚರಣೆ

0

ಕಾಂಗ್ರೆಸ್ ಸರಕಾರದ ದುರಾಢಳಿತ, ಭ್ರಷ್ಟಚಾರಗಳಿಗೆ ಮತದಾರರು ತಿಲಾಂಜಲಿ ನೀಡಲು ಎನ್ ಡಿ ಎ ಮೈತ್ರಿ‌ಕೂಟಕ್ಕೆ ಮತ ನೀಡಿದ್ದಾರೆ – ಸಂಜೀವ ಮಠಂದೂರು

ಪುತ್ತೂರು: ಕಾಂಗ್ರೆಸ್ ಸರಕಾರದ ದುರಾಢಳಿತ, ಭ್ರಷ್ಟಚಾರಗಳಿಗೆ ಮತದಾರರು ತಿಲಾಂಜಲಿ ನೀಡಲು ಬಿಜೆಪಿ ಎನ್ ಡಿ ಎ ಮೈತ್ರಿ‌ಕೂಟಕ್ಕೆ ಮತ ನೀಡಿದ್ದಾರೆ ಎಂದು ಮಾಜಿ ಶಾಸಕ ಸಂಜೀವ ಮಠಂದೂರು ಅವರು ಹೇಳಿದರು.


ಕರ್ನಾಟಕ ವಿಧಾನಪರಿಷತ್ ಪದವೀಧರ ಮತ್ತು ಶಿಕ್ಷಕರ ಕ್ಷೇತ್ರದಲ್ಲಿ ಗೆಲುವಾದ ಹಿನ್ನಲೆಯಲ್ಲಿ ಜೂ.7 ರಂದು ಪುತ್ತೂರು ಬಿಜೆಪಿ ಕಚೇರಿಯ‌ ಮುಂದೆ ಸಂಭ್ರಮಿಸಿದರು. ಈ ಸಂದರ್ಭ ಸಂಜೀವ ಮಠಂದೂರು ಅವರು ಮತದಾರರಿಗೆ ಕೃತಜ್ಞತೆ ಸಲ್ಲಿಸಿದರು. ಕರ್ನಾಟಕದಲ್ಲಿ ಸಿದ್ದರಾಮಯ್ಯ ಸರಕಾರ ಭ್ರಷ್ಟಚಾರ ಸರಕಾರವಾಗಿದೆ. ದಲಿತರ ಹಣವನ್ನು ನುಂಗಿ ದಲಿತರಿಗೂ ಅನ್ಯಾಯ ಮಾಡುವ ಜೊತೆಯಲ್ಲಿ ಭ್ರಷ್ಟಾಚಾರ ಯಾವ ರೀತಿಯಲ್ಲಿ ಮಾಡಬಹುದು ಎಂದು ತೋರಿಸಿಕೊಟ್ಟಿದ್ದಾರೆ. ಇದರ ಮಧ್ಯೆ ಇವತ್ತು ನೈರುತ್ಯ ಪದವೀಧರ ಮತ್ತು ನೈರುತ್ಯ ಶಿಕ್ಷಕರ ಕ್ಷೇತ್ರದಲ್ಲಿ ಶಿಕ್ಷಿತ ವರ್ಗ ಮತ್ತು ಶಿಕ್ಷಕ ವರ್ಗ ಮತ್ತೊಮ್ಮೆ ಬಿಜೆಪಿ ಮತ್ತು ಮೈತ್ರಿಯಾದ ಎನ್ ಡಿ ಎ ಯನ್ನು ಬೆಂಬಲಿಸಿದೆ. ಇದು ಕರ್ನಾಟಕದಲ್ಲಿ ಮತ್ತೊಮ್ಮೆ ಬಿಜೆಪಿ ಯಾವ ರೀತಿಯಾಗಿ ಬೆಳೆಯುತ್ತಿದೆ ಎಂಬುದಕ್ಕೆ ಮುನ್ಸೂಚನೆ ನೀಡಿದೆ. ಈ ಚುನಾವಣೆ ಮುಂದೆ ನಡೆಯುವ ತಾ.ಪಂ, ಜಿ.ಪಂ, ನಗರಸಭೆ, ಪುರಸಭೆ ಚುನಾವಣೆಗೆ ಮುನ್ನುಡಿ ಬರೆಯುವ ಕೆಲಸವನ್ನು ಮಾಡಿದೆ ಎಂದರು.

ಬಿಜೆಪಿ ಗ್ರಾಮಾಂತರ ಮಂಡಲದ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ನಗರ ಮಂಡಲದ ಅಧ್ಯಕ್ಷ ಪಿ ಜಿ‌ ಜಗನ್ನಿವಾಸ ರಾವ್, ನಗರಸಭೆ ನಿಕಟಪೂರ್ವ ಉಪಾಧ್ಯಕ್ಷ ವಿದ್ಯಾಗೌರಿ, ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾದ ನಿತೀಶ್ ಕುಮಾರ್ ಶಾಂತಿವನ, ಪುರುಷೋತ್ತಮ ಮುಂಗ್ಲಿಮನೆ, ಯುವರಾಜ್, ಬಿಜೆಪಿ ನಗರ ಮಂಡಲ ಮಹಿಳಾ ಮಂಡಲದ ಅಧ್ಯಕ್ಷೆ ಜಯಶ್ರೀ ನಾಯಕ್, ನಗರ ಯುವ ಮೋರ್ಚಾ ಅಧ್ಯಕ್ಷ ಸಚಿನ್ ಶೆಣೈ, ಪುರಸಭೆ ಮಾಜಿ ಅಧ್ಯಕ್ಷ ರಾಜೇಶ್ ಬನ್ನೂರು, ಬಿಜೆಪಿ ಜಿಲ್ಲಾ ಸಮಿತಿ ಸದಸ್ಯ ಸುರೇಶ್ ಆಳ್ವ, ಚಂದ್ರಶೇಖರ್ ರಾವ್ ಬಪ್ಪಳಿಗೆ, ಪ್ರಮುಖರಾದ ರಾಧಾಕೃಷ್ಣ ನಂದಿಲ, ಸುರೇಶ್ ರೈ, ಗೌರಿ ಬನ್ನೂರು, ಇಂದುಶೇಖರ್, ಗೋವರ್ಧನ ಕುಮೇರಡ್ಕ, ನಗರಸಭಾ ಸದಸ್ಯರಾದ ಪೂರ್ಣಿಮ ಬಲ್ನಾಡು, ದೀಕ್ಷಾ ಪೈ, ಮನೋಹರ ಕಲ್ಲಾರೆ, ಅಶೋಕ್ ಬಲ್ನಾಡು, ದಿವ್ಯಾಪುರುಷೋತ್ತಮ, ಜ್ಯೋತಿ ಆರ್ ನಾಯಕ್, ಅಜಿತ್ ರೈ, ವಿರೂಪಾಕ್ಷ ಭಟ್, ಜಯಂತ ಕಂಬಳದಡ್ಡ , ನಾಗೇಶ್ ಟಿ, ಹರಿಪ್ರಸಾದ್ ಯಾದವ್, ವಿನಯ ಕಲ್ಲೇಗ ಸಹಿತ ಹಲವಾರು ಮಂದಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here