ಕರ್ನಾಟಕ ಪತ್ರಕರ್ತರ ಸಂಘದ ಪುತ್ತೂರು ತಾ| ಘಟಕದ ಸಭೆ

0

ಪುತ್ತೂರು: ಕರ್ನಾಟಕ ಪತ್ರಕರ್ತರ ಸಂಘದ ಪುತ್ತೂರು ತಾಲೂಕು ಘಟಕದ ಸಭೆಯು ಜೂ.7ರಂದು ಸುದ್ದಿ ಮೀಡಿಯಾ ಸೆಂಟರ್‌ನಲ್ಲಿ ನಡೆಯಿತು. ಸಂಘದ ಅಧ್ಯಕ್ಷ ತಿಲಕ್ ರೈ ಕುತ್ಯಾಡಿ ಅಧ್ಯಕ್ಷತೆ ವಹಿಸಿ ಮಾತನಾಡಿ ಸಂಘವು ಕಳೆದ ಒಂದು ವರ್ಷದಲ್ಲಿ ಪತ್ರಿಕಾ ದಿನಾಚರಣೆ, ಆಟಿಕೂಟ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಮಾಹಿತಿ ಕಾರ್ಯಗಾರ ಸೇರಿದಂತೆ ಹಲವಾರು ಕಾರ್ಯಕ್ರಮಗಳನ್ನು ನಡೆಸಿದೆ. ಮುಂದೆಯೂ ಎಲ್ಲರ ಸಹಕಾರ ಸಿಗಲಿ ಎಂದು ಹೇಳಿ ಕೃತಜ್ಞತೆ ಸಲ್ಲಿಸಿದರು. ಸಂಘದ ಸದಸ್ಯರಿಗೆ 2024-25ನೇ ಸಾಲಿನ ಐಡಿ ಕಾರ್ಡ್ ವಿತರಿಸಲಾಯಿತು. ಜೂ.30ರಂದು ಮಹಾಸಭೆ ಹಾಗೂ ಪದಗ್ರಹಣ ನಡೆಸುವುದೆಂದು ತೀರ್ಮಾನಿಸಲಾಯಿತು. ಸಂಘದ ಮುಂದಿನ ಕಾರ್ಯಕ್ರಮಗಳಾಗಿ ಪತ್ರಿಕಾ ದಿನಾಚರಣೆ ಹಾಗೂ ಆಟಿ ಕೂಟ ನಡೆಸುವುದೆಂದು ನಿರ್ಣಯಿಸಲಾಯಿತು.

ಸಂಘದ ಪ್ರಧಾನ ಕಾರ್ಯದರ್ಶಿ ಶ್ರೀಧರ್ ರೈ ಕೋಡಂಬು ಸ್ವಾಗತಿಸಿ ಉಪಾಧ್ಯಕ್ಷ ಶರತ್ ಕುಮಾರ್ ಪಾರ ವಂದಿಸಿದರು. ಕೋಶಾಧಿಕಾರಿ ರಕ್ಷಿತಾ ಎಚ್. ನಾಯ್ಕ್, ಸದಸ್ಯರುಗಳಾದ ಅಕ್ಷತಾ ಆರ್., ನಿಶ್ಚಿತಾ ಬಿ., ರೇಶ್ಮಾ, ತಾರನಾಥ್, ನಾಗೇಂದ್ರ ರೈ, ಅಕ್ಷಯ್ ಕುಮಾರ್ ಎ., ಪ್ರೀತಾ, ಶ್ವೇತಾ, ಜಯಲಕ್ಷ್ಮೀ, ಮೋಹನ್ ಶೆಟ್ಟಿ, ಶಿವಕುಮಾರ್, ರಮೇಶ್ ಕೆಮ್ಮಾಯಿ, ಚಿತ್ರಾಂಗಿಣಿ ಉಪಸ್ಥಿತರಿದ್ದರು.

ನೂತನ ಪದಾಧಿಕಾರಿಗಳ ಆಯ್ಕೆ
ಸಭೆಯಲ್ಲಿ 2024-25ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ನಡೆಸಲಾಯಿತು. ನೂತನ ಅಧ್ಯಕ್ಷರಾಗಿ ಶೈಲಜಾ ಸುದೇಶ್ ಚಿಕ್ಕಪುತ್ತೂರು, ಪ್ರಧಾನ ಕಾರ್ಯದರ್ಶಿಯಾಗಿ ಲಕ್ಷ್ಮೀಕಾಂತ್ ರೈ ಅನಿಕೂಟೇಲು, ಉಪಾಧ್ಯಕ್ಷರಾಗಿ ಪಿ. ಸದಾಶಿವ ಭಟ್, ಕೋಶಾಧಿಕಾರಿಯಾಗಿ ಕವಿತಾ ವಿಶ್ವನಾಥ್ ಕುಂಬ್ರ, ಸಂಘಟನಾ ಕಾರ್ಯದರ್ಶಿಯಾಗಿ ಗೋಪಾಲಕೃಷ್ಣ ಮಾಡಾವು, ಜತೆ ಕಾರ್ಯದರ್ಶಿಯಾಗಿ ದಿಲ್‌ಶಾನ ಶರೀಫ್ ಕುಂಬ್ರರವರನ್ನು ಆಯ್ಕೆ ಮಾಡಲಾಯಿತು. ಬಳಿಕ ಕಾರ್ಯಕಾರಿ ಸಮಿತಿ ಸದಸ್ಯರನ್ನು ಆಯ್ಕೆ ಮಾಡಲಾಯಿತು.

LEAVE A REPLY

Please enter your comment!
Please enter your name here