ವಿಟ್ಲದ ಸಪ್ತ ಜ್ಯುವೆಲ್ಸ್ ನಲ್ಲಿ ಪಾದಾರ್ಪಣೆ ಸಂಭ್ರಮ-ಚಿನ್ನಾಭರಣ ಕೊಳ್ಳುವಾಗ ಅಷ್ಟೇ ತೂಕದ ಬೆಳ್ಳಿ ನಾಣ್ಯ ಉಚಿತ

0

ವಿಟ್ಲ: ಇಲ್ಲಿನ ಪುತ್ತೂರು ರಸ್ತೆಯಲ್ಲಿರುವ ಸ್ಮಾರ್ಟ್ ಸಿಟಿ ಕಮರ್ಷಿಯಲ್ ಕಾಂಪ್ಲೆಕ್ಸ್ ನಲ್ಲಿರುವ ಸಪ್ತ ಜ್ಯುವೆಲ್ಸ್ ನಲ್ಲಿ ವರ್ಷಾಚರಣೆಯ ಸಂಭ್ರಮ ಆರಂಭವಾಗಿದೆ. ಸಂಸ್ಥೆ ಗ್ರಾಹಕರಿಗೆ ವಿವಿಧ ಕೊಡುಗೆಗಳನ್ನು ನೀಡುತ್ತಿದ್ದು, ಈ ಕೊಡುಗೆಗಳು ಜೂ.10ರಂದು ಕೊನೆಗೊಳ್ಳಗಳ್ಳಲಿದೆ.

ಸಂಭ್ರಮಾಚರಣೆ ಸಂದರ್ಭದಲ್ಲಿ ಆಭರಣ ಖರೀದಿಸಿದ ಗ್ರಾಹಕರಿಗೆ ಅಷ್ಟೇ ತೂಕದಬೆಳ್ಳಿಯ ನಾಣ್ಯಗಳನ್ನು ಸಂಸ್ಥೆ ನೀಡುತ್ತಿದೆ. ಪ್ರತಿ ಬೆಳ್ಳಿ ಸಾಮಾಗ್ರಿ/ ಆಭರಣ ಖರೀದಿಗೆ 5%-10%ರಿಯಾಯಿತಿ ದೊರೆಯಲಿದೆ. ಉಳಿದಂತೆ ಸಂಸ್ಥೆ ಗ್ರಾಹಕರಿಗೆ ವಿವಿಧ ಕೊಡುಗೆಗಳನ್ನು ನೀಡುತ್ತಿದೆ.

ಸಪ್ತ ಅಕ್ಷಯ ಯೋಜನೆಗೆ ಸೇರುವವರಿಗೆ ಬೆಳ್ಳಿನಾಣ್ಯ ಉಚಿತ:
‘ಸಪ್ತ ಅಕ್ಷಯ’ ಆಭರಣ ಖರೀದಿ ಯೋಜನ ಇದು ಗ್ರಾಹಕರಿಗೆ ಉಪಕಾರಿಯಾಗಿರುವ ಒಂದು ಯೋಜನೆಯಾಗಿದೆ. ಗ್ರಾಹಕರು ಪ್ರತೀ ತಿಂಗಳು ತಮ್ಮ ಆದಾಯದಲ್ಲಿನ ಸಣ್ಣಮೊತ್ತವನ್ನು ವಿನಿಯೋಗಿಸಿ, ಪ್ರತೀ ವರುಷ ಬಂಗಾರವನ್ನು ಖರೀದಿಸುವ ಒಂದು ಉತ್ತಮ ಯೋಜನೆಯಾಗಿದೆ. ಹನ್ನೊಂದು ತಿಂಗಳ ಯೋಜನೆ ಇದಾಗಿದ್ದು, ಪ್ರತೀ ತಿಂಗಳು 500 ರೂಪಾಯಿಗಿಂತ ಮೇಲ್ಪಟ್ಟು ಎಷ್ಟು ಹಣ ಬೇಕಾದರೂ ಪಾವತಿಸಬಹುದಾಗಿದೆ. ಆ ಮೊತ್ತದ ಚಿನ್ನಾಭರಣವನ್ನು ತಮ್ಮ ಆಕೌಂಟಿನಲ್ಲಿ ಜಮೆ ಮಾಡಲಾಗುತ್ತದೆ. ತಾವು ಪಾವತಿಸಿದ ಮೊತ್ತಕ್ಕೆ ಕೊನೆಯಲ್ಲಿ ಆವರ್ತನಾ ಪದ್ದತಿಯಲ್ಲಿ ಬೋನಸ್‌ ಲಭಿಸಲಿದೆ. ಸಂಸ್ಥೆಯ ಉದ್ಘಾಟನಾ ಸಂದರ್ಭದಲ್ಲಿ ಸಪ್ತ ಅಕ್ಷಯ ಯೋಜನೆಗೆ ಸೇರ್ಪಡೆಗೊಳ್ಳುವ ಗ್ರಾಹಕರಿಗೆ ಬೆಳ್ಳಿನಾಣ್ಯ ಉಚಿತವಾಗಿ ದೊರೆಯಲಿದೆ.

ಸಪ್ತ ಜ್ಯುವೆಲ್ಸ್‌ನ ವಿಶೇಷತೆಗಳು:
ಉತ್ಕೃಷ್ಟ ಆಭರಣಗಳು ವಿಶ್ವಾಸನೀಯ ಬೆಲೆಯಲ್ಲಿ ದೊರೆಯುವ ಸಂಸ್ಥೆ ಇದಾಗಿದೆ. ಗ್ರಾಹಕರ ಆಭರಣಗಳ ವಿನ್ಯಾಸದ ಆಯ್ಕೆಗೆ ವಿಶೇಷ ಸಹಕಾರವನ್ನು ನೀಡಲಾಗುತ್ತಿದೆ ಮಾತ್ರವಲ್ಲದೆ ಪ್ರತಿಯೊಂದೂ ಆಭರಣಗಳ ತಯಾರಿಕೆಯ ಸಂದರ್ಭದಲ್ಲಿ ವಿಶೇಷ ಕಾಳಜಿಯನ್ನು ವಹಿಸಲಾಗುತ್ತದೆ. ಎಲ್ಲಾ ವರ್ಗದ ಹಾಗೂ ಎಲ್ಲಾ ಪೀಳಿಗೆಯ ಜನರ ಮನಸ್ಸಿಗೆ ಒಪ್ಪುವಂತಹ ಆಭರಣಗಳ ಬೃಹತ್ ಸಂಗ್ರಹವೇ ಇಲ್ಲಿದೆ. ಇದೊಂದು 916 ಶುದ್ಧತೆಯ HUID ಹಾಲ್ ಮಾರ್ಕ್ ಹೊಂದಿರುವ ಚಿನ್ನಾಭರಣಗಳ ಮಾರಾಟ ಮಳಿಗೆಯಾಗಿದೆ.

ವಿವಿಧ ವಿನ್ಯಾಸದ ಚಿನ್ನಾಭರಣಗಳು:
ಸಪ್ತ ಜ್ಯುವೆಲ್ಸ್‌ನಲ್ಲಿ ಸ್ಥಳೀಯ ನುರಿತ ಕುಶಲ ಕರ್ಮಿಗಳಿಂದ ತಯಾರಿಸಲ್ಪಟ್ಟ ವಿವಿಧ ವಿನ್ಯಾಸದ ಚಿನ್ನಾಭರಣಗಳ ಬೃಹತ್ ಸಂಗ್ರಹವಿದೆ. ಪಾರಂಪರಿಕ ಆಭರಣಗಳು, ಮಾಂಗಲ್ಯ ಸರ, ನವರತ್ನದ ಉಂಗುರ, ಲೈಟ್ ವೈಟ್ ರಿಂಗ್, ಕಾಸ್ಟಿಂಗ್ ರಿಂಗ್, ಕಪಲ್ ರಿಂಗ್, ಕ್ಲೋಸೆಟ್ಟಿಂಗ್ ರಿಂಗ್, ಬರ್ತ್ ಸ್ಟೋನ್ ರಿಂಗ್, ಪವಿತ್ರ ರಿಂಗ್, ಕರ್ಟ್ಸ್ ಬಳೆಗಳು, ಬೆಂಡೋಲೆಗಳು, ಹವಳ – ಮುತ್ತಿನ ಸರಗಳು, ಕೊತ್ತಂಬರಿಸರ, ಮೋಹನಸರ, ಕನಕಸರ, ರೇಡಿಯೋ ಚೈನ್, ಲೈಟ್ ವೈಟ್ ಸಿರಾಮಿಕ್ ಸ್ಟಡ್ಸ್, ಕೊಡಗು ಶೈಲಿಯ ಕೊಕ್ಕೆತಾತಿ ಪೆಂಡೆಂಟ್ ಗಳು, ಕೊಕ್ಕೆತಾತಿ ಕಿವಿಯೋಲೆಗಳು, ಟೆಂಪಲ್ ಕಲೆಕ್ಷನ್ ನಲ್ಲಿ ವಿವಿಧ ರೀತಿಯ ಮೆರುಗನ್ನು ಕೊಡುವ ವಿನ್ಯಾಸಗಳು, ಫೈ ಇನ್ ವನ್ ಹಾರಗಳು, ಪ್ಯೂಜನ್ ಕಲೆಕ್ಷನ್, ಚೆಟ್ಟಿನಾಡ್ ಕಲೆಕ್ಷನ್, ನಕ್ಷಿ ಓರ್ನಮೆಂಟ್ಸ್ ಇವುಗಳಲ್ಲಿ ವೆಡ್ಡಿಂಗ್ ಸೆಟ್ ಹಾಗೂ ಡಿವೈನ್ ಸೆಟ್ ಗಳು ಲಭ್ಯವಿದೆ. ರಿಚ್ ಲುಕ್ ನೀಡುವ ರೂಬಿ, ಎಮೋಲ್ಡ್ ಸಿಝಡ್ ಸ್ಟೋನ್ ಗಳಲ್ಲಿ ಮಾಡಿದ ಚನ್ನಾಭರಣಗಳ ಸಂಗ್ರಹವಿದೆ. ಉತ್ತಮ ಕಾರ್ಯ ಕೌಶಲ್ಯತೆ ಹೊಂದಿರುವ ಕೊಲ್ಕತ್ತಾ, ಬೆಂಗಾಳಿ, ಬಾಂಬೆ ಶೈಲಿಯ ವೆಡ್ಡಿಂಗ್ ಸೆಟ್‌ಗಳು ಸಹ ದೊರೆಯುತ್ತಿರುವುದು ಸಂಸ್ಥೆಯ ವಿಶೇಷತೆಯಾಗಿದೆ. ಕೊಲ್ಲಾಪುರ ಲೈಟ್ ವೈಟ್ ವ್ಯಾಕ್ಸ್ ಮಾಲೆಗಳ ಬೃಹತ್ ಸಂಗ್ರಹವೇ ಇಲ್ಲಿದೆ. ಬೆಂಗಾಲಿ ಹ್ಯಾಂಡ್ ಮೇಡ್ ಜೈನ್, ಕೊಯಮುತ್ತೂರು ಸ್ಪೆಷಲ್ ಕಟ್ಟಿಂಗ್ ಚೈನ್, ಕೇರಳ ಹ್ಯಾಂಡ್ ಮೇಡ್ ಚೈನ್ಸ್, ಇಂಡೋ ಇಟೇಲಿಯನ್ ಚೈನ್ಸ್ ಸಹಿತ ಹಲವಾರು ಬಗೆಯ ವಿನೂತನ ಶೈಲಿಯ ಚಿನ್ನಾಭರಣಗಳು ಲಭ್ಯವಿದೆ. ಸಂಸ್ಥೆಯಲ್ಲಿ ದೊರಕುವ ಚಿನ್ನಾಭರಣ‌ ವೆರೈಟಿಗಾಗಿ ವಿವಿಧ ಜೆಲ್ಲೆಗಳ ಗ್ರಾಹಕರು ಸಂಸ್ಥೆಗೆ ಆಗಮಿಸುತ್ತಿರುವುದು ಇಲ್ಲಿನ ಮತ್ತೊಂದು ವಿಶೇಷತೆಯಾಗಿದೆ.

ವಿವಿಧ ವಿನ್ಯಾಸದ ಪೆಂಡೆಂಟ್:
ವಿವಿಧ ವಿನ್ಯಾಸದ ಬೆಂಗಾಳಿ ವರ್ಕ್ ಪೆಂಡೆಂಟ್, ಪಾರಂಪರಿಕ ಲಕ್ಷ್ಮೀ ಪೆಂಡೆಂಟ್, ಮಲ್ಲಿಗೆ ಮೊಗ್ಗು ಪೆಂಡೆಂಟ್, ಗಿಲಿಯೋಲೆ ಪೆಂಡೆಂಟ್, ಪಿಲಿಗಿರಿ ವರ್ಕ್ ಪೆಂಡೆಂಟ್, ಎಂಬೋಸಿಂಗ್ ಪೆಂಡೆಂಟ್ ಸಹಿತ ವಿವಿಧ ರೀತಿಯ ಪೆಂಡೆಂಟ್ ಗಳು ಲಭ್ಯವಿದೆ.

ಬೆಳ್ಳಿಯ ಆಭರಣಗಳು ಲಭ್ಯ:
ಕಾಲು ಚೈನ್, ಕಾಲುಂಗುರ, ಸರಗಳು, ಉಂಗುರಗಳು, ಬರ್ತ್ ಸ್ಟೋನ್ ಉಂಗುರಗಳು, ಪೆಂಡೆಂಟ್ ಗಳು, ಮಕ್ಕಳ ದೃಷ್ಟಿಬಳೆ, ದೃಷ್ಟಿ ಚೈನ್ ಗಳು, ಬೆಳ್ಳಿಯ ಮದುಪರ್ಕ, ದೀಪ, ವಿವಿಧ ರೀತಿಯ ಆರತಿಗಳು, ಹರಿವಾಣ, ಬೆಳ್ಳಿಯ ಆರ್ಟ್ ವರ್ಕ್‌ಗಳೂ ಲಭ್ಯವಿದೆ.

ವಿವಿಧರೀತಿಯ ಗಿಫ್ಟ್ ಐಟಮ್ ಗಳು:
ಮದುವೆ, ಗೃಹಪ್ರವೇಶ ಸಹಿತ ಶುಭಸಮಾರಂಭಗಳಿಗೆ ತಮ್ಮವರಿಗಾಗಿ ಗಿಫ್ಟ್ ನೀಡಬಹುದಾದ ಸಿಲ್ವರ್ ಫಾಯಿಲ್ ಕಲೆಕ್ಷನ್ ನ ಪ್ರೇಮ್‌ಗಳು, ಪ್ರೈಮಾ ಆರ್ಟ್ ಮತ್ತು ಆರ್ಯ ಆರ್ಟ್ ನ ಬ್ರಾಂಡೆಡ್ ಗೋಲ್ಡ್ ಗಿಫ್ಟ್ ಫಾಯಿಲ್ ಕಲೆಕ್ಷನ್ ಗಳು. ವಿವಿಧ ವಿನ್ಯಾಸ ಹಾಗು ಧರಗಳ ಸಿಲ್ವರ್ ಫಾಯಿಲ್ ಫ್ರೇಮ್ ಗಳು. ವಿವಿಧ ತೂಕ ಹಾಗೂ ವಿನ್ಯಾಸದ ಸಿಲ್ವರ್ ಕಾಯಿನ್‌ಗಳು ಲಭ್ಯವಿದ್ದು, ಈ ಕಲೆಕ್ಷನ್ ಗಳು ಮತ್ತಷ್ಟು ಗ್ರಾಹಕರ ಮನಸೂರೆಗೊಳಿಸಿದೆ.

ಸಪ್ತ ವೆಂಚರ್ಸ್ ಬಗ್ಗೆ….:
ಕೆಲ ಉತ್ಸಾಹಿ ಸ್ನೇಹಿತರು ಸೇರಿಕೊಂಡು ನಿರ್ದಿಷ್ಟ ಗುರಿಯನ್ನು ಇಟ್ಟುಕೊಂಡು ಪಾಲುದಾರಿಕೆಯಲ್ಲಿ ಸಪ್ತ ವೆಂಚರ್ಸ್ ಎನ್ನುವ ಸಂಸ್ಥೆಯನ್ನು ಹುಟ್ಟು ಹಾಕಿ 2014ರಲ್ಲಿ ಪೇರಮೊಗರಿನಲ್ಲಿ ಸಪ್ತ ಫುಡ್ ಪ್ರಾಡಕ್ಟ್ ನ್ನು ಆರಂಭಿಸಿದರು. ಇಲ್ಲಿ ಚಪಾತಿ, ಪೂರಿ, ಪರೋಟ, ಅಕ್ಕಿರೊಟ್ಟಿ, ಕಡ್ಲೆಬೇಳೆ ಹೋಳಿಗೆ, ಕಾಯಿಹೋಳಿಗೆ, ಗೋದಿಹಲ್ವಾ, ನೇಂದ್ರ ಬಾಳೆಹಣ್ಣಿನ ಹಲ್ವಾ ಮೊದಲಾದ ಆಹಾರೋತ್ಪಾದನೆಯನ್ನು ಆರಂಭಿಸಲಾಯಿತು. FSSI ಪ್ರಮಾಣೀಕೃತ ಟೆಕ್ನಾಲಜಿಯನ್ನು ಬಳಿಸಿ ಉತ್ಕೃಷ್ಟ ಗುಣಮಟ್ಟದ ಆಹಾರೋತ್ಪಾದನೆಯಲ್ಲಿ ತೊಡಗಿಕೊಂಡ ಸಂಸ್ಥೆ ಅತ್ಯಲ್ಪ ಸಮಯದಲ್ಲೇ ಪ್ರಸಿದ್ದಿಯನ್ನು ಪಡೆಯಿತು. ಕ್ಲಪ್ತ ಸಮಯದ ಸೇವೆ ಹಾಗೂ ವಸ್ತುವಿನ ಗುಣಮಟ್ಟ ಇವರ ಉತ್ಪನ್ನಗಳನ್ನು ಜನರು ಕೊಳ್ಳುವಂತೆ ಮಾಡಿತ್ತು. ಚಿನ್ನಾಭರಣಗಳ ಬಗ್ಗೆ ಅನುಭವ ಪಡೆದುಕೊಂಡ ಪಾಲುದಾರರು ಗ್ರಾಮೀಣ ಭಾಗದ ಜನರಿಗೆ ಮನಸಿಗೊಪ್ಪುವ ಆಭರಣಗಳನ್ನು ವಿಶ್ವಾಸನೀಯ ಬೆಲೆಯಲ್ಲಿ ನೀಡಬೇಕೆನ್ನುವ ನಿಟ್ಟಿನಲ್ಲಿ 2017ರಲ್ಲಿ ವಿಟ್ಲದ ಎಂಪಾಯ‌ರ್ ಮಹಲ್‌ನಲ್ಲಿ ಸಪ್ತ ಜ್ಯುವೆಲ್ಸ್ ಅನ್ನುವ ಚಿನ್ನಾಭರಣ ಮಳಿಗೆಯನ್ನು ಹುಟ್ಟು ಹಾಕಿದ್ದರು. ಇದು ಕೂಡ ಅತ್ಯಲ್ಪ ಸಮಯದಲ್ಲೇ ಈ ಭಾಗದ ಜನರ ಮನ ಗೆಲ್ಲುವಲ್ಲಿ ಸಫಲವಾಯಿತು. ಆ ಬಳಿಕ ವರುಷಗಳ ಹಿಂದೆ ವಿಟ್ಲದ ಸ್ಮಾರ್ಟ್ ಸಿಟಿ ಕಮರ್ಷಿಯಲ್ ಕಾಂಪ್ಲೆಕ್ಸ್ ಗೆ ಸಂಸ್ಥೆಯು ಸ್ಥಳಾಂತರಗೊಂದಿದ್ದು, ಇದೀಗ ಅಲ್ಲಿ ಎರಡನೇ ವರುಷದ ಸಂಬ್ರಮಾಚರಣೆ ನಡೆಯುತ್ತಿದೆ.

ವಿಸ್ತಾರವಾದ ಪಾರ್ಕಿಂಗ್:
ಗ್ರಾಮೀಣ ಭಾಗದಿಂದ ವಾಹನಗಳ ಮೂಲಕ ಸಂಸ್ಥೆಗೆ ಆಗಮಿಸುತ್ತಿರುವ ಗ್ರಾಹಕರು ಇನ್ನು ಮುಂದೆ ಚಿಂತಿಸುವ ಅಗತ್ಯವಿಲ್ಲ, ಸ್ಮಾರ್ಟ್ ಸಿಟಿ ಕಮರ್ಷಿಯಲ್ ಕಾಂಪ್ಲೆಕ್ಸ್ ನಲ್ಲಿ ವಿಶಾಲವಾದ ಪಾರ್ಕಿಂಗ್ ಸೌಲಭ್ಯವಿದೆ. ಇದು ಚಿನ್ನಾಭರಣ ಖರೀದಿಗೆ ಬರುವ ಗ್ರಾಹಕರಿಗೆ ಮತ್ತಷ್ಟು ಸುಲಭವಾಗಲಿದೆ.
ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ 70900 49777ಯನ್ನು ಸಂಪರ್ಕಿಸಬಹುದಾಗಿದೆ.

LEAVE A REPLY

Please enter your comment!
Please enter your name here