ಕರ್ನಾಟಕ ಸರಕಾರದ ಕಾಲೇಜು ಶಿಕ್ಷಣ ಇಲಾಖೆಯು 2009ರಲ್ಲಿ ಕಾಣಿಯೂರಿನಲ್ಲಿ ಸರಕಾರಿ ಪ್ರಥಮ ದರ್ಜೆ ಕಾಲೇಜನ್ನು ಆರಂಭಿಸಿತು. ಬಳಿಕ ಕಾಲೇಜನ್ನು 2014ರಲ್ಲಿ ಬೆಳಂದೂರಿಗೆ ಸ್ಥಳಾಂತರಿಸಲಾಯಿತು. 2017ರಲ್ಲಿ ಬೆಳಂದೂರಿನಲ್ಲಿ ಕಾಲೇಜಿನ ಪ್ರಥಮ ಹಂತದ ಕಟ್ಟಡ ನಿರ್ಮಾಣವಾಯಿತು. 2009ರಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ಸಂಯೋಜನೆ ಪಡೆದ ಬೆಳಂದೂರು ಕಾಲೇಜು 2010ರಲ್ಲಿ ಯುಜಿಸಿಯಿಂದ ೨ಈ ಮಾನ್ಯತೆ ಪಡೆಯಿತು. 2009ರಲ್ಲಿ ಬಿ.ಎ. ಕೋರ್ಸ್, 2010ರಲ್ಲಿ ಬಿಕಾಂ ಕೋರ್ಸ್ 2021ರಲ್ಲಿ ಬಿಬಿಎ ಕೋರ್ಸ್ಗಳು ಆರಂಭವಾಗಿ ನಡೆಯುತ್ತಿದೆ. 2021ರಲ್ಲಿ ಕಾಲೇಜಿಗೆ 2ನೇ ಹಂತದ ಕಟ್ಟಡ ನಿರ್ಮಾಣಗೊಂಡಿತು. ಸುಸಜ್ಜಿತವಾದ ಸುಂದರ ಕಟ್ಟಡದಲ್ಲಿ ತರಗತಿಗಳು ನಡೆಯುತ್ತಿವೆ. ಉತ್ತಮವಾದ ಗ್ರಂಥಾಲಯವು ವಿದ್ಯಾರ್ಥಿಗಳಿಗೆ ಪಠ್ಯಕ್ಕೆ ಪೂರಕವಾದ ಜ್ಞಾನವನ್ನು ನೀಡುತ್ತಿದೆ. ಕಾಲೇಜಿನಲ್ಲಿರುವ ಸುಸಜ್ಜಿತ ಕಂಪ್ಯೂಟರ್ ಲ್ಯಾಬ್ ಮೂಲಕ ವಿದ್ಯಾರ್ಥಿಗಳಿಗೆ ಉಚಿತ ಬೇಸಿಕ್ ಕಂಪ್ಯೂಟರ್ ಕೋರ್ಸ್ ತರಬೇತಿ ನೀಡಲಾಗುತ್ತಿದೆ. ವಿಶಾಲವಾದ ಕ್ರೀಡಾಂಗಣದಲ್ಲಿ ವಿದ್ಯಾರ್ಥಿಗಳು ಕ್ರೀಡಾ ತರಬೇತಿ ಪಡೆಯುತ್ತಾರೆ. ವಿದ್ಯಾರ್ಥಿಗಳು ವಿಶ್ವವಿದ್ಯಾನಿಲಯ ಪರೀಕ್ಷೆಗಳಲ್ಲಿ ಉತ್ತಮ ಫಲಿತಾಂಶ ಪಡೆದಿದ್ದಾರೆ. ಕಾಲೇಜಿನಲ್ಲಿರುವ ಎನ್.ಎಸ್.ಎಸ್. ಘಟಕ, ರೆಡ್‌ಕ್ರಾಸ್ ಘಟಕ, ರೋರ‍್ಸ್ ರೇಂಜರ್ ಘಟಕಗಳಿಂದ ವಿದ್ಯಾರ್ಥಿಗಳು ಅನೇಕ ವಿಚಾರಗಳನ್ನು ಕಲಿಯುತ್ತಿದ್ದಾರೆ. ಕಾಲೇಜಿನ ಒಂದು ಎಕ್ರೆ ಅಡಿಕೆ ತೋಟದಲ್ಲಿ ವಿದ್ಯಾರ್ಥಿಗಳು ನಡೆಸುವ ಶ್ರಮದಾನದಿಂದ ಕೃಷಿಯನ್ನು ಇಷ್ಟಪಡುವಂತೆ ಮಾಡಿದೆ. ಕಾಲೇಜಿನಲ್ಲಿರುವ ಬಿಸಿಯೂಟದ ತಯಾರಿಯಲ್ಲಿ ವಿದ್ಯಾರ್ಥಿಗಳಿಗೆ ತರಬೇತಿ ಸಿಗುತ್ತಿದೆ. ೨೦೨೩ರ ಎಪ್ರಿಲ್‌ನಲ್ಲಿ ನ್ಯಾಕ್ ತಂಡವು ಕಾಲೇಜಿನ ಮೌಲ್ಯಮಾಪನ ನಡೆಸಿದೆ. ಇದರಲ್ಲಿ ಃ+ ಗ್ರೇಡ್ ಪಡೆದಿರುವುದು ಸಂತೋಷದ ವಿಷಯವಾಗಿದೆ, ಗ್ರಾಮೀಣ ಪ್ರದೇಶದ ಸುಂದರ ಪರಿಸರದಲ್ಲಿರುವ ಈ ಕಾಲೇಜು ಬಿ.ಎ., ಬಿ.ಕಾಂ., ಬಿ.ಬಿ.ಎ. ಕೋರ್ಸ್ಗಳ ಅಧ್ಯಯನಕ್ಕೆ ಉತ್ತಮ ಅವಕಾಶ ನೀಡುತ್ತಿದೆ ಎಂದು ಕಾಲೇಜಿನ ಪ್ರಾಂಶುಪಾಲರಾದ ಡಾ. ಶಂಕರ್ ಭಟ್ ತಿಳಿಸಿದ್ದಾರೆ.