ಬೆಳಂದೂರು ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವಿಶ್ವ ಪರಿಸರ ದಿನಾಚರಣೆ

0

ಕಾಣಿಯೂರು: ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಸಾಮಾಜಿಕ ಅರಣ್ಯ ವಿಭಾಗ ಮಂಗಳೂರು,ಸಾಮಾಜಿಕ ಅರಣ್ಯ ವಲಯ ಪುತ್ತೂರು, ಯುವಶಕ್ತಿ ಫ್ರೆಂಡ್ಸ್ ಕೆಲಂಬೀರಿ, ಜೆಸಿಐ ಸುಳ್ಯ ಸಿಟಿ ಮತ್ತು ರಾಷ್ಟ್ರೀಯ ಸೇವಾ ಯೋಜನೆ ಬೆಳಂದೂರು ಕಾಲೇಜು ಇದರ ವತಿಯಿಂದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಬೆಳಂದೂರು ಇದರ ಆವರಣದಲ್ಲಿ ವಿಶ್ವ ಪರಿಸರ ದಿನಾಚರಣೆ ಪ್ರಯುಕ್ತ ವನಮಹೋತ್ಸವ ಕಾರ್ಯಕ್ರಮ ನಡೆಸಲಾಯಿತು. ಪುತ್ತೂರು ವಲಯ ಸಾಮಾಜಿಕ ಅರಣ್ಯ ಅಧಿಕಾರಿಯಾಗಿರುವ ವಿಧ್ಯಾರಾಣಿ ಪಿ. ಕೆ ಮತ್ತು ಉಪ ವಲಯ ಸಾಮಾಜಿಕ ಅರಣ್ಯ ಅಧಿಕಾರಿ ಯಶೋಧರ, ತಾಂತ್ರಿಕ ಸಹಾಯಕರಾದ ವರ್ಷಾ ಕಯ್ಯ ,ಕೆಲಂಬೀರಿ ಬ್ರಹ್ಮಬೈದೇರುಗಳ ಗರಡಿಯ ಆಡಳಿತ ಸಮಿತಿ ಅಧ್ಯಕ್ಷರಾದ ಬಿ ಎ ವಸಂತ ಪೂಜಾರಿ ಕೆಲಂಬೀರಿ, ನವೀನ್ ಕೊಯಕ್ಕುಡೆ ಹಾಗೂ ಯುವಶಕ್ತಿ ಫ್ರೆಂಡ್ಸ್‌ ಕೆಲಂಬೀರಿ ಇದರ ಕಾರ್ಯದರ್ಶಿ ಅಕ್ಷಯ್, ಜೊತೆ ಕಾರ್ಯದರ್ಶಿ ಕಿರಣ್ ಮತ್ತು ಸದಸ್ಯರುಗಳು ,ಉಪನ್ಯಾಸಕರಾದ ಮನಮೋಹನ ಬಳ್ಳಡ್ಕ,ರಂಜಿತ್ ಸವಿತ, ಸ್ವಾಮಿ ಎಸ್, ಹರಿಣಾಕ್ಷಿ, ಮತ್ತು ಕಾಲೇಜು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here