ನಾಳೆ(ಜೂ.9) ನರೇಂದ್ರ ಮೋದಿ ಪ್ರಮಾಣವಚನ- ಬೆಟ್ಟಂಪಾಡಿಯಲ್ಲಿ ಬಿ.ಜೆ.ಪಿ ಶಕ್ತಿ ಕೇಂದ್ರದಿಂದ ವಿಜಯೋತ್ಸವ – ಪ್ರಮಾಣ ವಚನದ ನೇರ ಪ್ರಸಾರ ವೀಕ್ಷಣೆ

0

ಪುತ್ತೂರು: ಕೇಂದ್ರದಲ್ಲಿ ಎನ್.ಡಿ.ಎ ಬಹುಮತದೊಂದಿಗರ ನರೇಂದ್ರ ಮೋದಿ ಮೂರನೇ ಬಾರಿಗೆ ದೇಶದ ಪ್ರಧಾನ ಮಂತ್ರಿಯಾಗಿ ಜೂ.9ರಂದು ಪ್ರಮಾಣ ವಚನ ಸ್ವೀಕರಿಸಲಿರುವ ಹಿನ್ನೆಲೆಯಲ್ಲಿ ಬೆಟ್ಟಂಪಾಡಿ ಬಿ. ಜೆ. ಪಿ ಶಕ್ತಿ ಕೇಂದ್ರದ ವತಿಯಿಂದ ವಿಜಯೋತ್ಸವದ ಮೆರವಣಿಗೆ, ಸಭಾ ಕಾರ್ಯಕ್ರಮ ಹಾಗೂ ಪ್ರಮಾಣ ವಚನದ ನೇರ ಪ್ರಸಾರ ನಡೆಯಲಿದೆ.
ಸಂಜೆ 4 ಗಂಟೆಗೆ ವಿಜಯೋತ್ಸವ ಮೆರವಣಿಗೆ ಇರ್ದೆ ಸರ್ಕಲ್ ಬಳಿಯಿಂದ ಹೊರಡಲಿದೆ. ಮೆರವಣಿಗೆಯು ಇರ್ದೆಯಿಂದ ಸಾಗಿ ಬಂದು ಬೆಟ್ಟಂಪಾಡಿ ಗ್ರಾಮ ಪಂಚಾಯತ್ ಸಮುದಾಯ ಭವನದಲ್ಲಿ ಸೇರಿ ವಿಜಯೋತ್ಸವ ನಡೆಯಲಿದೆ. ನಂತರ ಸಭಾ ಕಾರ್ಯಕ್ರಮ ನಡೆಯಲಿದೆ. ಇದೇ ಸಂದರ್ಭದಲ್ಲಿ ದೆಹಲಿಯಲ್ಲಿ ನಡೆಯುವ ಪ್ರಮಾಣ ವಚನದ ನೇರ ಪ್ರಸಾರವನ್ನು ಎಲ್.ಇ.ಡಿ ಪರದೆಯ ಮೂಲಕ ವೀಕ್ಷಣೆಗೆ ಅವಕಾಶ ಮಾಡಿಕೊಡಲಾಗುವುದು. ಈ ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಸಂಜೀವ ಮಠಂದೂರು, ಹಿಂದು ಮುಖಂಡ ಅರುಣ್‌ ಕುಮಾರ್ ಪುತ್ತಿಲ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಿಶೋರ್ ಬೊಟ್ಯಾಡಿ ಸಹಿತ ಹಲವು ಮಂದಿ ಪಕ್ಷದ ಪ್ರಮುಖರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಪಕ್ಷದ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here