ಉಪ್ಪಿನಂಗಡಿ: ಶನಿವಾರದಿಂದ ಸುರಿಯುತ್ತಿರುವ ಗಾಳಿ ಮಳೆಗೆ ಅಲ್ಲಲ್ಲಿ ಮರಗಳು ಬಿದ್ದು ಹಲವೆಡೆ ವಿದ್ಯುತ್ ಕಂಬಗಳು ತುಂಡರಿಸಲ್ಪಟ್ಟು ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವುಂಟಾದ ಘಟನೆ ನಡೆದಿದೆ.
ಉಪ್ಪಿನಂಗಡಿಯ ವೇದಶಂಕರ ನಗರ, ಬಜತ್ತೂರು ಗ್ರಾಮದ ಪರಂದಾಜೆ, ಗೋಳಿತೊಟ್ಟು ಗ್ರಾಮದ ಅನಿಲ , ಕೊಯಿಲ , ಆನೆಗುಂಡಿ ಪರಿಸರದಲ್ಲಿ ಒಟ್ಟು 3 ಎಚ್.ಟಿ. ವಿದ್ಯುತ್ ಕಂಬಗಳು ತುಂಡರಿಸಲ್ಪಟ್ಟಿದ್ದು, 9 ಎಲ್.ಟಿ. ವಿದ್ಯುತ್ ಕಂಬಗಳು ತುಂಡರಿಸಲ್ಪಟ್ಟಿವೆ. ಇದರಿಂದಾಗಿ ಶನಿವಾರ ರಾತ್ರಿಯಿಂದ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವುಂಟಾಗಿತ್ತು. ಮೆಸ್ಕಾಂ ಅಧಿಕಾರಿ ಹಾಗೂ ಸಿಬ್ಬಂದಿಗಳ ತಂಡ ಅವಿರತ ಶ್ರಮದಿಂದಾಗಿ ವಿದ್ಯುತ್ ಸಂಪರ್ಕವನ್ನು ಪುನರ್ ಸ್ಥಾಪಿಸಲು ಯಶಸ್ವಿಯಾಗಿದೆ.