ಕಡಬದಲ್ಲಿ ಬಿಜೆಪಿ ಕಾರ್ಯಕರ್ತನಿಂದ ರಸ್ತೆಯುದ್ದಕ್ಕೂ ಉರುಳುಸೇವೆ

0

ಕಡಬ: ಮೋದಿಯ ಅಪ್ಪಟ ಅಭಿಮಾನಿ, ಬಿಜೆಪಿ ಕಾರ್ಯಕರ್ತ ಕೋಡಿಂಬಾಳ ಗ್ರಾಮದ ಕುಕ್ಕೆರೆಬೆಟ್ಟು ನಿವಾಸಿ ರಘುರಾಮ ನಾೖಕ್‌ ಅವರು ಮೋದಿಯವರು ದೇಶದ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದ ಹಿನ್ನೆಲೆಯಲ್ಲಿ ಕಡಬ ಪೇಟೆಯುದ್ದಕ್ಕೂ ಉರುಳು ಸೇವೆ ನಡೆಸಿದ್ದಾರೆ.

ಸಂಜೆ ಕಡಬ ಶ್ರೀ ಕಂಠಸ್ವಾಮೀ ಶ್ರೀ ಮಹಾಗಣಪತಿ ದೇವಸ್ಥಾನದಿಂದ ರಾಜ್ಯ ರಸ್ತೆಯ ಮೂಲಕ ಕಡಬ ಶ್ರೀ ದುರ್ಗಾಂಬಿಕಾ ಅಮ್ಮನವರ ದೇವಸ್ಥಾನದ ತನಕ ಉರುಳು ಸೇವೆ ನಡೆಸಿದರು. ಇವರಿಗೆ ಬಿಜೆಪಿ ಕಾರ್ಯಕರ್ತರು ಸಾಥ್ ನೀಡಿದರು. ಶ್ರೀ ದುರ್ಗಾಂಬಿಕಾ ದೇವಸ್ಥಾನದಲ್ಲಿ ಪೂಜೆ ನಡೆಯಿತು.


2014ರಲ್ಲಿ ಮೋದಿಯವರು ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದ ಸಂದರ್ಭದಲ್ಲಿ ರಘುರಾಮ ನಾೖಕ್‌ ಅವರು ಈಶ್ವರಮಂಗಲ ಹನುಮಗಿರಿ ಕ್ಷೇತ್ರದಲ್ಲಿ ಒಂದು ವಾರಗಳ ಕಾಲ ಉಪವಾಸ ವೃತಾಚರಣೆ ನಡೆಸಿದ್ದರು. ಹಲವಾರು ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ರಘುರಾಮರವರು ಠಾಕ್ರೆ ಎಂಬ ಹೆಸರಿನಲ್ಲಿ ಜನಜನಿತರಾಗಿದ್ದಾರೆ.

LEAVE A REPLY

Please enter your comment!
Please enter your name here