ಎಸೆಸ್ಸೆಲ್ಸಿ ಮರು ಮೌಲ್ಯಮಾಪನದಲ್ಲಿ ಪ್ರಣಮ್ಯ ಆಳ್ವ ರಾಜ್ಯದಲ್ಲಿ 5ನೇ ರ‍್ಯಾಂಕ್

0

ಪುತ್ತೂರು: ಎಸೆಸ್ಸೆಲ್ಸಿ ಪರೀಕ್ಷೆಯ ಮರು ಮೌಲ್ಯಮಾಪನದಲ್ಲಿ ಸುಳ್ಯ ರೋಟರಿ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಪ್ರಣಮ್ಯ ಎನ್.ಆಳ್ವರವರು 621 ಅಂಕ ಗಳಿಸಿ ರಾಜ್ಯದಲ್ಲಿ ಐದನೇ ರ‍್ಯಾಂಕ್, ಜಿಲ್ಲೆಯಲ್ಲಿ ಮೂರನೇ, ಸುಳ್ಯ ತಾಲೂಕಿನಲ್ಲಿ ಪ್ರಥಮ ರ‍್ಯಾಂಕ್ ಗಳಿಸಿಕೊಂಡಿದ್ದಾರೆ.


ಪ್ರಣಮ್ಯ ಆಳ್ವರವರು ಈ ಮೊದಲು 620 ಅಂಕ ಗಳಿಸಿದ್ದರು. ಮರು ಮೌಲ್ಯಮಾಪನದಲ್ಲಿ ಒಂದು ಅಂಕ ಹೆಚ್ಚುವರಿಯಾಗಿ ಪಡೆದಿದ್ದು ರಾಜ್ಯದಲ್ಲಿ ಐದನೇ ಸ್ಥಾನವನ್ನು ಪಡೆದಿರುತ್ತಾರೆ. ಪ್ರಣಮ್ಯರವರು ಕನ್ನಡ 125, ಇಂಗ್ಲೀಷ್ 100, ಹಿಂದಿ 100, ಗಣಿತ 98, ವಿಜ್ಞಾನ 99, ಸಮಾಜ ವಿಜ್ಞಾನ 99 ಅಂಕಗಳನ್ನು ಗಳಿಸಿಕೊಂಡಿರುತ್ತಾರೆ. ಇವರು ಕೇರಳ ಬಂದಡ್ಕ ನಿವಾಸಿ ನಿಶಾಂತ್ ಆಳ್ವ ಹಾಗೂ ಸುಪರ್ಣ ಆಳ್ವ ಎನ್.ಆಳ್ವ ದಂಪತಿ ಪುತ್ರಿ.

LEAVE A REPLY

Please enter your comment!
Please enter your name here