ನಿಡ್ಪಳ್ಳಿ: ದ.ಕ.ಜಿ.ಪಂ ಹಿರಿಯ ಪ್ರಾಥಮಿಕ ಶಾಲೆ ನಿಡ್ಪಳ್ಳಿ ಇದರ 2024-25 ನೇ ಸಾಲಿನ ಶಾಲಾ ಮಂತ್ರಿ ಮಂಡಲವನ್ನು ರಚಿಸಲಾಯಿತು. ನಾಯಕನಾಗಿ 7ನೇ ತರಗತಿಯ ಅಹಮ್ಮದ್ ಸುಹೈಲ್ ಹಾಗೂ ಉಪ ನಾಯಕನಾಗಿ 7ನೇ ತರಗತಿಯ ಮನ್ವಿತ್ ಆಯ್ಕೆಯಾದರು. ಉಳಿದಂತೆ ಗೃಹ ಮಂತ್ರಿಯಾಗಿ ದೀಕ್ಷಿತ್ ಕುಮಾರ್, ಆರೋಗ್ಯ ಮಂತ್ರಿಯಾಗಿ ಛಾಯಾಶ್ರೀ, ಉಪ ಆರೋಗ್ಯ ಮಂತ್ರಿಯಾಗಿ ಮಹಮ್ಮದ್ ಸವಾದ್, ಶಿಕ್ಷಣ ಮಂತ್ರಿಯಾಗಿ ಸ್ಮಿತಾ ವಿ.ಎಸ್, ಉಪ ಶಿಕ್ಷಣ ಮಂತ್ರಿಯಾಗಿ ಮಹಮ್ಮದ್ ಶಹಿರ್, ಸ್ವಚ್ಛತಾ ಮಂತ್ರಿಯಾಗಿ ಅಂಕಿತ, ಉಪ ಸ್ವಚ್ಛತಾ ಮಂತ್ರಿಯಾಗಿ ರೋಹಿತ್, ವಾರ್ತಾ ಮಂತ್ರಿಯಾಗಿ ವೀಕ್ಷಾ, ಉಪ ವಾರ್ತಾ ಮಂತ್ರಿಯಾಗಿ ಭವ್ಯಶ್ರೀ, ಸಾಂಸ್ಕೃತಿಕ ಮಂತ್ರಿಯಾಗಿ ಹಿತಾಶ್ರೀ .ಬಿ, ಉಪ ಸಾಂಸ್ಕೃತಿಕ ಮಂತ್ರಿಯಾಗಿ ಮನಸ್ವಿ, ಆಹಾರ ಮಂತ್ರಿಯಾಗಿ ನಿಖಿಲ್, ಉಪ ಆಹಾರ ಮಂತ್ರಿಯಾಗಿ ವಿನೋದ್, ಗ್ರಂಥಾಲಯ ಮಂತ್ರಿಯಾಗಿ ಸ್ಮಿತಾ .ವಿ.ಎಸ್, ಉಪ ಗ್ರಂಥಾಲಯ ಮಂತ್ರಿಯಾಗಿ ಸ್ನೇಹ.ಬಿ, ಶಿಸ್ತು ಮಂತ್ರಿಯಾಗಿ ಮಹಮ್ಮದ್ ಶಿಫಾನ್, ಉಪಶಿಸ್ತು ಮಂತ್ರಿಯಾಗಿ ವರುಣ್ ಕುಮಾರ್, ವಿರೋಧ ಪಕ್ಷ ನಾಯಕನಾಗಿ ಶಿವಾಂಕ್, ವಿರೋಧ ಪಕ್ಷದ ನಾಯಕಿಯಾಗಿ ನೆಫಿಸತ್ ತ್ವಾಹಿಬಾ, ಕ್ರೀಡಾ ಮಂತ್ರಿಯಾಗಿ ಅಹ್ಮದ್ ಸುಹೈಲ್, ನೀರಾವರಿ ಮಂತ್ರಿಯಾಗಿ ದೀಕ್ಷಿತ್ ಕುಮಾರ್, ಕೃಷಿ ಮಂತ್ರಿಯಾಗಿ ಜಶ್ವಿತ್, ರಕ್ಷಣಾ ಮಂತ್ರಿಯಾಗಿ ಮನೀಷ್ ಇವರು ಆಯ್ಕೆಯಾದರು.
ಮುಖ್ಯ ಶಿಕ್ಷಕಿ ಹೇಮಾ. ಎನ್ ಹಾಗೂ ಅತಿಥಿ ಶಿಕ್ಷಕಿ ಸುಮಾ.ಡಿ ನೇತೃತ್ವದಲ್ಲಿ ಆಯ್ಕೆ ಪ್ರಕ್ರಿಯೆ ನಡೆಯಿತು.