





ಪುತ್ತೂರು: ನರಿಮೊಗರು ವಲಯ ಕಾಂಗ್ರೆಸ್ ಅಧ್ಯಕ್ಷರಾದ ಪ್ರಕಾಶ್ ಅವರ ನಿಧನಕ್ಕೆ ಶಾಸಕರು ಸಂತಾಪ ಸೂಚಿಸಿದ್ದು, ತನ್ನ ಇಂದಿನ ಎಲ್ಲಾ ಕಾರ್ಯಕ್ರಮಗಳನ್ನು ರದ್ದುಗೊಳಿಸಿದ್ದಾರೆ. ಪಕ್ಷದ ಅತ್ಯಂತ ಪ್ರಾಮಾಣಿಕ ಕಾರ್ಯಕರ್ತರಾಗಿ ಪಕ್ಷಕ್ಕಾಗಿ ಹಗಲಿರುಳು ಸೇವೆ ಮಾಡುತ್ತಿದ್ದ, ಸಮಾಜ ಸೇವಾ ಕೆಲಸದಲ್ಲೂ ತನನ್ನು ತೊಡಗಿಸಿಕೊಂಡಿರುವ ಪ್ರಕಾಶ್ ಅವರ ನಿಧನದಿಂದ ಅತ್ಯಂತ ದು:ಖಿತರಾಗಿರುವ ಶಾಸಕರು ತನ್ನ ಎಲ್ಲಾ ಕಾರ್ಯಕ್ರಮವನ್ನು ರದ್ದುಗೊಳಿಸಿದ್ದಾರೆ. ಇವತ್ತಿನ ಕಾರ್ಯಕ್ರಮವನ್ನು ಮುಂದೂಡಲಾಗಿದೆ.










