ಆಲಂಕಾರು: ಮೊಗೇರ ಸಂಘದ ವತಿಯಿಂದ ಪುಸ್ತಕ ವಿತರಣೆ – ಸನ್ಮಾನ ಕಾರ್ಯಕ್ರಮ

0

ಪುತ್ತೂರು: ಮೊಗೇರ ಸಂಘ ಆಲಂಕಾರು ಮಂಡಲ ಮತ್ತು ತನ್ನಿಮಾನಿಗ ಮೊಗೇರ ಮಹಿಳಾ ಸಂಘ ಇದರ ಆಶ್ರಯದಲ್ಲಿ ಜೂ.9ರಂದು ಆಲಂಕಾರು ಗ್ರಾಮ ಪಂಚಾಯತ್ ಸಭಾ ಭವನ ದಲ್ಲಿ ಪುಸ್ತಕ ವಿತರಣೆ ಹಾಗೂ ಪ್ರತಿಭಾ ಪುರಸ್ಕಾರ ನಡೆಯಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವುದರ ಮೂಲಕ ಸಂಘದ ಗೌರವ ಸಲಹೆಗಾರರಾದ ಕರಿಯ ಗಾಣಂತಿ ನೆರವೇರಿಸಿದರು. ಸಭಾ ಅಧ್ಯಕ್ಷತೆಯನ್ನು ಮೊಗೇರ ಸಂಘ ಆಲಂಕಾರಿನ ಅಧ್ಯಕ್ಷರಾದ ಬಾಲಕೃಷ್ಣ ಕೇಪುಳು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಕ್ಯಾನ್ಸರ್ ತಜ್ಞ ರು ಹಾಗೂ ಮುಖಂಡರಾದ ಡಾ. ರಘು ಬೆಳ್ಳಿಪ್ಪಾಡಿ ಇವರು ಸಮುದಾಯದ ಮಕ್ಕಳು ಉತ್ತಮ ಶಿಕ್ಷಣ ಪಡೆದು  ಸಂಘಟಿತರಾಗುವಂತೆ ಕರೆ ನೀಡಿದರು. ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಸುಳ್ಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಇಂಗ್ಲೀಷ್ ಪ್ರಾಧ್ಯಾಪಕಿ ಸುರೇಖಾ ಎಚ್ ಇವರು ಶಿಕ್ಷಣದ ಮೇಲೆ ಮೊಬೈಲ್ ನ ದುಷ್ಪರಿಣಾಮ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿರುವುದರ ಬಗ್ಗೆ ಉದಾಹರಣೆಗಳ ಸಹಿತ ಮಾತನಾಡಿದರು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಶ್ರೀ ಮಹಾಲಿಂಗೇಶ್ವರ ಬ್ರಹ್ಮ ಮೊಗೇರ ಆರಾಧನಾ ಟ್ರಸ್ಟ್  ಪುತ್ತೂರಿನ  ಅಧ್ಯಕ್ಷರಾದ ಗಣೇಶ್ ಸಂಪ್ಯ, ಪುತ್ತೂರು ತಾಲೂಕು ಮೊಗೇರ ಸಂಘದ ಕಾರ್ಯದರ್ಶಿ ಮುಖೇಶ್ ಕೆಮ್ಮಿಂಜೆ, ಸುಳ್ಯ ತಾಲೂಕು ಮೊಗೇರ ಸಂಘದ ಅಧ್ಯಕ್ಷರಾದ ಕರುಣಾಕರ ಪಲ್ಲತಡ್ಕ, ಉಪನ್ಯಾಸಕಿ ಅಮಿತಾ ನೆಕ್ಕರೆ, ಮಂತಾದವರು ಭಾಗವಹಿಸಿ ಶುಭ ಹಾರೈಸಿದರು. 

ಈ ಸಂದರ್ಭದಲ್ಲಿ ಮಾತನಾಡಿದ ಅಧ್ಯಕ್ಷರಾದ ಬಾಲಕೃಷ್ಣ ಕೇಪುಳು ಆಲಂಕಾರು ಮೊಗೇರ ಸಂಘವು ಶ್ರಮದಾನ, ಅಶಕ್ತರಿಗೆ ಸಹಾಯ, ಪ್ರತಿಭಾ ಪುರಸ್ಕಾರ, ಕ್ರೀಡೆ, ನೇಮೋತ್ಸವ ಹಾಗು ಮೊಗೇರ ಚರಿತ್ರೆ, ಸಂಸ್ಕೃತಿ ಉಳಿವಿನ ಕೆಲಸ ಮಾಡುತ್ತಾ ಬಂದಿದ್ದು ಮುಂದೆಯೂ ವಿಧ್ಯಾರ್ಥಿಗಳ ಶಿಕ್ಷಣ , ಸಂಘಟನೆಗೆ ನೆರವು ಕೊಡಲಿದೆ ಎಂದು ತಿಳಿಸಿದರು.  ಕಾರ್ಯಕ್ರಮದಲ್ಲಿ ಈ ಬಾರಿಯ ನೀಟ್ ಪರೀಕ್ಷೆಯಲ್ಲಿ 606 ನೇ ರಾಂಕ್ ವಿಜೇತೆ  ಹಾಗೂ ಜೆಇಇ, ಪಿಯು ಸಾಧಕಿ ಯುಕ್ತಾ ವಿ ಗಾಂಧಿ ಪೇಟೆ ಸಹಿತ ಎಸ್. ಎಸ್.ಎಲ್ .ಸಿ ಹಾಗೂ ಪಿಯುಸಿಯಲ್ಲಿ ಡಿಸ್ಟಿಂಕ್ಷನ್ ಪಡೆದ ತನುಶ್ರೀ, ಸಂಧ್ಯಾ ಎನ್,ಯಶಸ್ವಿನಿ, ಪ್ರಾಪ್ತಿ ಪಡುಬೆಟ್ಟು ಇವರನ್ನು ಸನ್ಮಾನಿಸಲಾಯಿತು.ಕಾರ್ಯಕ್ರಮದಲ್ಲಿ ಒಟ್ಟು 170 ವಿಧ್ಯಾರ್ಥಿಗಳಿಗೆ ಪುಸ್ತಕ ವಿತರಣೆ ಮಾಡಲಾಯಿತು. ಮಹಿಳಾ ಸಂಘದ ಅಧ್ಯಕ್ಷೆ ಅಕ್ಷತಾ ಕುಕ್ಕೆಜಾಲ್ ವಾರ್ಷಿಕ ವರದಿ ವಾಚಿಸಿದರು, ಮೊಗೇರ ಸಂಘದ ಜೊತೆ ಕಾರ್ಯದರ್ಶಿ ಮಹಾಬಲ ಪಡುಬೆಟ್ಟು ಪ್ರಾಸ್ತಾವಿಕ ಮಾತನಾಡಿದರು, ಸದಸ್ಯರಾದ ಸುರೇಶ್ ತೋಟಂತಿಲ ಸ್ವಾಗತಿಸಿದರು. ಸಂಘದ ಕಾರ್ಯದರ್ಶಿ ಸಂದೀಪ್ ಪಾಂಜೋಡಿ ವಂದಿಸಿದರು,  ಸಲಹೆಗಾರಾದ ಕೃಷ್ಣ ಗಾಣಂತಿ ಕಾರ್ಯಕ್ರಮ ನಿರೂಪಿಸಿದರು. ಮೊಗೇರ ಸಂಘದ ಉಪಾಧ್ಯಕ್ಷರಾದ ತಾರಾನಾಥ್ ಕಡೀರಡ್ಕ, ಭೀಮ್ ಆರ್ಮಿ ಕಡಬ  ತಾಲೂಕು ಅಧ್ಯಕ್ಷರಾದ ರಾಘವ ಕಳಾರ, ಮೊಗೇರ ಸಂಘದ ಸದಸ್ಯರಾದ ಶೀನಪ್ಪ ದೆರೋಡಿ, ಮೋನಪ್ಪ ಕೊನೆಮಜಲು ,ಪ್ರೇಮ್ ಮರುವಂತಿಲ,  ಹೇಮಂತ್ , ದಿನೇಶ್ ನೆಕ್ಕಿಲಾಡಿ, ಲಲಿತ ಪುರುಷಬೆಟ್ಟು, ಕಮಲ ಕಡೀರಡ್ಕ, ಲೋಲಾಕ್ಷಿ ಮರುವಂತಿಲ, ಸಹಕರಿಸಿದರು. ವಾರಿಜಾ ನಗ್ರಿ, ಸುಳ್ಯ ಮೊಗೇರ ಯುವವೇದಿಕೆಯ ಪ್ರಕಾಶ್ ಪಾತೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here