ಆಲಂಕಾರು: ರಾಮಕುಂಜ ಗ್ರಾಮದ ಕುಂಡಾಜೆ ದಿ.ಅಬೂಬಕ್ಕರ್ ರವರ ಮಗ ಅಬ್ದುಲ್ಲಾ ಹಾಜಿ(85.ವ) ರವರು ವಯೋಸಹಜವಾಗಿ ಅಲ್ಪಕಾಲದ ಅಸೌಖ್ಯದಿಂದ ಜೂ.12 ರಂದು ಸ್ವಗೃಹದಲ್ಲಿ ನಿಧನರಾದರು.ಮೃತರು ಕುಂಡಾಜೆ ರಹಮ್ಮಾನಿಯಾ ಮಸೀದಿಯ ಗೌರವ ಸಲಹೆಗಾರರಾಗಿ ಸೇವೆ ಸಲ್ಲಿಸಿ ಎಲ್ಲರಿಗೂ ಚಿರಪರಿಚಿತರಾಗಿದ್ದರು.ಮೃತರು ಪತ್ನಿ ಜೈನಾಬು ಮಕ್ಕಳಾದ ಕುಂಡಾಜೆ ರಹಮ್ಮಾನೀಯ ಜಮ್ಮಾ ಮಸೀದಿಯ ಮಾಜಿ ಅಧ್ಯಕ್ಷ ಇಬ್ರಾಹಿಂ, ಝಕರಿಯಾ, ಜಮೀಳಾ, ಆಸಿಯಾರವರನ್ನು ಅಗಲಿದ್ದಾರೆ.