ಭಕ್ತಿಪೂರ್ವಕದ ಪ್ರಾರ್ಥನೆಯೇ ದೇವರು, ಮಾನವನ ನಡುವಿನ ಸಂಬಂಧ-ವಂ|ಮ್ಯಾಕ್ಸಿಂ ನೊರೋನ್ಹಾ
ಪುತ್ತೂರು: ಜೀವನದಲ್ಲಿ ಯಾವುದು ಬೇಡ ಅದನ್ನು ದೂರವಿಡಿ. ಎಲ್ಲಿ ಕೆಟ್ಟದ್ದು ಇದೆಯೋ ಅಲ್ಲಿ ಒಳ್ಳೆಯದನ್ನು ಭಿತ್ತುವ ಮನಸ್ಸು ನಮ್ಮದಾಗಲಿ. ಪ್ರತಿ ಕುಟುಂಬದಲ್ಲಿ ಪ್ರಾರ್ಥನೆ ಎಂಬುದು ಮೊದಲ ಆದ್ಯತೆಯಾಗಲಿ ಯಾಕೆಂದರೆ ಅಂತರಾಳದಿಂದ ಕೂಡಿದ ಭಕ್ತಿಪೂರ್ವಕ ಪ್ರಾರ್ಥನೆಯು ದೇವರು ಮತ್ತು ಮಾನವನ ಜೀವಿತದ ನಡುವಿನ ಸಂಬಂಧವನ್ನು ಎತ್ತಿ ತೋರಿಸುತ್ತದೆ ಎಂದು ಮಂಗಳೂರು ಕಥೋಲಿಕ್ ಧರ್ಮಪ್ರಾಂತ್ಯದ ವಿಕಾರ್ ಜನರಲ್ ಆಗಿರುವ ವಂ|ಮ್ಯಾಕ್ಸಿಂ ಎಲ್.ನೊರೋನ್ಹಾರವರು ಹೇಳಿದರು.
ಅವರು ಜೂ.13 ರಂದು ಬನ್ನೂರು ಸಂತ ಆಂತೋನಿ ಚರ್ಚ್‌ನಲ್ಲಿ ಜರಗಿದ ಸಂತ ಅಂತೋನಿಯರವರ ವಾರ್ಷಿಕ ಮಹೋತ್ಸವದ ಪ್ರಧಾನ ದಿವ್ಯ ಬಲಿಪೂಜೆಯನ್ನು ನೆರವೇರಿಸಿ, ಭಕ್ತಾಧಿಗಳಿಗೆ ಪವಿತ್ರ ಬೈಬಲ್ ಮೇಲೆ ಸಂದೇಶ ನೀಡಿದರು. ನಾವು ನಮಗೋಸ್ಕರ ಪ್ರಾರ್ಥನೆ ಮಾಡುವ ಬದಲು ಇತರರ ಒಳಿತಿಗೋಸ್ಕರ ಪ್ರಾರ್ಥನೆ ಮಾಡಿದಾಗ ದೇವರು ಆಶೀರ್ವದಿಸುತ್ತಾನೆ. ಕುಟುಂಬದಲ್ಲಿ ಜೀವಿಸುವ ನಾವೆಲ್ಲರೂ ಉತ್ತಮ ರೀತಿಯಲ್ಲಿ, ಯಾರಿಗೂ ನೋಯಿಸದೆ ಜೀವನ ನಡೆಸಿದಾಗ ಆ ಕುಟುಂಬ ಮಾದರಿ ಕುಟುಂಬ ಎನಿಸುವಂತಾಗುತ್ತದೆ. ದೇವರು ನಮ್ಮೊಳಗೆ, ನಮ್ಮ ನಡುವೆ ಇದ್ದಾನೆ ಎಂಬ ಭರವಸೆಯ, ವಿಶ್ವಾಸದ, ನಂಬಿಕೆಯ, ಸುಪ್ತ ಮನಸ್ಸಿನ ಬದುಕು ನಮ್ಮದಾಗಬೇಕು ಎಂದ ಅವರು
ಸಬೇಕಾದರೆ ಪ್ರಾರ್ಥನೆಯ ಮೂಲಕ ಮಾನವನ ಹೃದಯ ಹಾಗೂ ಮನಸ್ಸಿನಲ್ಲಿ ದೇವರನ್ನು ಹೊಂದುವಂತಾಗಬೇಕು ಎಂದರು.
ಮಾಯಿದೆ ದೇವುಸ್ ಚರ್ಚ್‌ನ ಪ್ರಧಾನ ಧರ್ಮಗುರು ಹಾಗೂ ಪುತ್ತೂರು ವಲಯ ಚರ್ಚ್‌ಗಳ ಪ್ರಧಾನ ಧರ್ಮಗುರು ವಂ|ಲಾರೆನ್ಸ್ ಮಸ್ಕರೇನ್ಹಸ್, ಬನ್ನೂರು ಚರ್ಚ್‌ನ ಪ್ರಧಾನ ಧರ್ಮಗುರು ವಂ|ಬಾಲ್ತಜಾರ್ ಪಿಂಟೋ, ಸ್ಥಾಪಕ ಧರ್ಮಗುರು ವಂ|ಆಲ್ಫೋನ್ಸ್ ಮೊರಾಸ್, ನಿಕಟಪೂರ್ವ ಧರ್ಮಗುರು ಪ್ರಸ್ತುತ ಬೆಂಗಳೂರಿನ ಸೈಂಟ್ ಅಂತೋನಿ ಫ್ರಾಯರಿ ಚರ್ಚ್ ಧರ್ಮಗುರು ವಂ|ಪ್ರಶಾಂತ್ ಫೆರ್ನಾಂಡೀಸ್, ಮರೀಲ್ ಸೆಕ್ರೇಡ್ ಹಾರ್ಟ್ ಚರ್ಚ್‌ನ ವಂ|ಜೆ.ಬಿ ಮೊರಾಸ್, ಮಾಯಿದೆ ದೇವುಸ್ ಚರ್ಚ್ ಸಹಾಯಕ ಧರ್ಮಗುರು ವಂ|ಲೋಹಿತ್ ಅಜಯ್ ಮಸ್ಕರೇನ್ಹಸ್, ಧರ್ಮಗುರುಗಳಾದ ಫ್ರಾನ್ಸಿಸ್ಕನ್ ಸಭೆಯ ಪ್ರೊವಿನ್ಸಿಯಲ್ ಕೌನ್ಸಿಲರ್ ವಂ|ಕ್ರಿಸ್ಟಿ ಮಂಗಳೂರು, ಉರ್ವಾ ಚರ್ಚ್‌ನ ವಂ|ಬೆಂಜಮಿನ್ ಪಿಂಟೊ, ವಂ|ನೋರ್ಬರ್ಟ್ ಸಿಕ್ವೇರಾ ರೋಮ್, ಬರೇಲ ಧರ್ಮಪ್ರಾಂತ್ಯದ ಜ್ಯುಲಿಯಾನಾ ಪಿಂಟೊ ಪೆರ‍್ನೆ, ಕಡಬ ಚರ್ಚ್‌ನ ವಂ|ಪಾವ್ಲ್ ಪ್ರಕಾಸ್ ಡಿ’ಸೋಜ, ಸುಳ್ಯ ಚರ್ಚ್‌ನ ವಂ|ವಿಕ್ಟರ್ ಡಿ’ಸೋಜ, ಸಂಪಾಜೆ ಚರ್ಚ್‌ನ ವಂ|ಪಾವ್ಲ್ ಕ್ರಾಸ್ತಾ, ನಿಡ್ಪಳ್ಳಿ ಚರ್ಚ್‌ನ ವಂ|ಜೇಸನ್ ಲೋಬೊ, ಪಂಜ ಚರ್ಚ್‌ನ ವಂ|ಅಮಿತ್ ರೊಡ್ರಿಗಸ್, ಪಾಲೋಟಾಯ್ನ್ ಸಭೆಯ ವಂ|ಗಿಲ್ಬರ್ಟ್ ಮಸ್ಕರೇನ್ಹಸ್ ಬೆಂಗಳೂರು, ಬನ್ನೂರು ಚರ್ಚ್‌ನ ಸಹಾಯಕ ಧರ್ಮಗುರು ವಂ|ಬೆನೆಡಿಕ್ಟ್ ಗೋಮ್ಸ್ ಸಹಿತ ಇಪ್ಪತ್ತಕ್ಕೂ ಮಿಕ್ಕಿ ಧರ್ಮಗುರುಗಳು, ಧರ್ಮಭಗಿನಿಯರು ಮತ್ತು ಭಕ್ತಾಧಿಗಳೊಂದಿಗೆ ದಿವ್ಯ ಬಲಿಪೂಜೆಯಲ್ಲಿ ಪಾಲ್ಗೊಂಡರು.
ಬನ್ನೂರು ಚರ್ಚ್‌ನ ಪ್ರಧಾನ ಧರ್ಮಗುರು ವಂ|ಬಾಲ್ತಜಾರ್ ಪಿಂಟೊರವರು ವಾರ್ಷಿಕ ಹಬ್ಬಕ್ಕೆ ಆಗಮಿಸಿದವರಿಗೆ ಕೃತಜ್ಞತೆ ಸಲ್ಲಿಸಿದರು. ಚರ್ಚ್‌ನ ಪಾಲನಾ ಸಮಿತಿಯ ಉಪಾಧ್ಯಕ್ಷ ತೋಮಸ್ ಫೆರ್ನಾಂಡೀಸ್, ಕಾರ್ಯದರ್ಶಿ ಜೋಯ್ಸ್ ಡಿ’ಸೋಜ, 21 ಆಯೋಗಗಳ ಸಂಯೋಜಕ ಜೆರಿ ಪಾಯಿಸ್, ಚರ್ಚ್ ಪಾಲನಾ ಸಮಿತಿ ಸದಸ್ಯರು, ಗಾಯನ ಮಂಡಳಿ, ವೇದಿ ಸೇವಕರು, ವಿವಿಧ ವಾಳೆಯ ಗುರಿಕಾರರು, ವಿವಿಧ ಸಂಘ-ಸಂಸ್ಥೆಯ ಸದಸ್ಯರು ಸಹಕರಿಸಿದರು. ಬಳಿಕ ಪ್ರಸಾದ ಭೋಜನ ನೆರವೇರಿತು.
ಮೊಂಬತ್ತಿ ವಿತರಣೆ.
ದಿವ್ಯಬಲಿಪೂಜೆ ಮುನ್ನ ಹಬ್ಬದ ಪ್ರಯುಕ್ತ ಹಣದ, ವಸ್ತುಗಳ ರೂಪದಲ್ಲಿ ನೀಡಿದ ದಾನಿಗಳಿಗೆ ಶುದ್ಧೀಕರಿಸಿದ ಮೊಂಬತ್ತಿಯನ್ನು ಸ್ಮರಣಿಕೆಯನ್ನಾಗಿ ವಿತರಿಸಲಾಯಿತು. ಹಬ್ಬದ ಪ್ರಧಾನ ದಿವ್ಯ ಬಲಿಪೂಜೆ ನೆರವೇರಿಸಿದ ಮಂಗಳೂರು ಕಥೋಲಿಕ್ ಧರ್ಮಪ್ರಾಂತ್ಯದ ವಿಕಾರ್ ಜನರಲ್ ವಂ|ಮ್ಯಾಕ್ಸಿಂ ನೊರೋನ್ಹಾ ಹಾಗೂ ಪುತ್ತೂರು ವಲಯದ ಪ್ರಧಾನ ಧರ್ಮಗುರು ವಂ|ಲಾರೆನ್ಸ್ ಮಸ್ಕರೇನ್ಹಸ್‌ರವರು ಪವಿತ್ರ ಮೊಂಬತ್ತಿಯನ್ನು ವಿತರಿಸಿ, ಆಶೀರ್ವಾದ ನೀಡಿದರು.
ಪ್ರಸಾದ ಭೋಜನ..
ವಿವಾಹ ವಾರ್ಷಿಕೋತ್ಸವದ ಬೆಳ್ಳಿ ಹಬ್ಬವನ್ನು ಆಚರಿಸುತ್ತಿರುವ ಚರ್ಚ್ ವ್ಯಾಪ್ತಿಯ ಮ್ಯಾಕ್ಸಿಂ ಡಿ’ಸೋಜ ಹಾಗೂ ಗ್ರೇಸಿ ಫೆರ್ನಾಂಡೀಸ್ ಸಿದ್ಯಾಲ ದಂಪತಿಯವರ ಪ್ರಾಯೋಜಕತ್ವದಲ್ಲಿ ಸಾವಿರಕ್ಕೂ ಮಿಕ್ಕಿ ಭಕ್ತಾಧಿಗಳಿಗೆ ಹಬ್ಬದ ಪ್ರಯುಕ್ತ ಸೇವಾ ರೂಪದಲ್ಲಿ ಪ್ರಸಾದ ಭೋಜನ ಏರ್ಪಡಿಸಲಾಗಿತ್ತು.
13 ದಿನಗಳ ನವೇನಾ..
ಪವಾಡಪುರುಷ ಸಂತ ಅಂತೋನಿಯವರು ಜೂ.13 ರಂದು ಇಹಲೋಕವನ್ನು ತ್ಯಜಿಸಿ ಸ್ವರ್ಗಕ್ಕೇರಿದ ದಿನವನ್ನು ಬನ್ನೂರು ಚರ್ಚ್‌ನಲ್ಲಿ ಸಂತ ಅಂತೋನಿಯವರ ವಾರ್ಷಿಕ ಹಬ್ಬವನ್ನಾಗಿ ಆಚರಿಸಲಾಗುತ್ತಿದೆ. ಆ ಪ್ರಯುಕ್ತ ಮೇ 30 ರಿಂದ ಜೂ.12ರ ತನಕ 13 ದಿನಗಳ ವಿಶೇಷ ಪ್ರಾರ್ಥನೆ(ನವೇನಾ) ನಡೆಯಿತು. ವಿವಿಧ ಕಡೆಯಿಂದ ಆಗಮಿಸಿದ ಧರ್ಮಗುರುಗಳಿಂದ ವಿಶೇಷ ಪ್ರಾರ್ಥನೆಯು ನೆರವೇರಲ್ಪಟ್ಟಿದ್ದು, ನೂರಾರು ಭಕ್ತಾಧಿಗಳು ಈ ಪವಿತ್ರ ನವೇನಾದಲ್ಲಿ ಭಾಗವಹಿಸಿ ತಮ್ಮ ಬೇಡಿಕೆ, ಹರಕೆಗಳನ್ನು ಸಂತ ಅಂತೋನಿಯವರಲ್ಲಿ ಸಮರ್ಪಿಸುತ್ತಾ ಶ್ರದ್ಧಾಭಕ್ತಿಯಿಂದ ಪಾಲ್ಗೊಂಡರು.