ಪುತ್ತೂರು: ನೂತನ ಧ್ವಜ ಸ್ಥಂಭ ಉದ್ಘಾಟನೆ ಹಾಗೂ 2023-24 ನೇ ಸಾಲಿನ SSLC ಸಾಧಕರಿಗೆ ಸನ್ಮಾನ ಮತ್ತು ನಿವೃತ್ತಿ ಹೊಂದಿದ ದೈಹಿಕ ಶಿಕ್ಷಣ ಶಿಕ್ಷಕ ಸೀತಾರಾಮ ಗೌಡ.ಬಿ ಯವರಿಗೆ ‘ಅಭಿನಂದನಾ’’ ಕಾರ್ಯಕ್ರಮ ಜರುಗಿತು.ಮಾಜಿ ಶಾಸಕ ಸಂಜೀವ ಮಠಂದೂರ್ ಕೊಡುಗೆಯಾಗಿ ನೀಡಿದ ನೂತನ ಧ್ವಜಸ್ಥಂಭವನ್ನು ಉದ್ಘಾಟಿಸಿ ಹಿರೆಬಂಡಾಡಿಯ ಶಾಲಾ ಇತಿಹಾಸವನ್ನು ಮೆಲುಕು ಹಾಕುತ್ತಾ ,ಸೀತಾರಾಮ ಗೌಡರ ಸಾಧನೆಯನ್ನು ಶ್ಲಾಘಿಸಿದರು.
ಶಾಲಾಭಿವೃದ್ಧಿ ಸಮಿತಿಯ ಕಾರ್ಯಾಧ್ಯಕ್ಷ ಸತೀಶ್ ಶೆಟ್ಟಿ ಹೆನ್ನಾಳವರು ಅದ್ಯಕ್ಷತೆ ವಹಿಸಿ ಶುಭಹಾರೈಸಿದರು.ಸರಳೀಕಟ್ಟೆ ಪ್ರೌಢಶಾಲೆಯ ಮುಖ್ಯಗುರು ಹರಿಕಿರಣ್ .ಕೆ ಸೀತಾರಾಮ ಗೌಡರೊಂದಿಗಿನ ತಮ್ಮ ಒಡನಾಟ ಮೆಲುಕು ಹಾಕಿದರು.ಪುತ್ತೂರು ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಸುಂದರಗೌಡ ಸೀತಾರಾಮ ಗೌಡರ ಕಾರ್ಯವೈಖರಿ ಮತ್ತು ಸತತ 4 ಬಾರಿಯಲ್ಲಿ ಶೇಕಡಾ ಫಲಿತಾಂಶ ದಾಖಲಿಸಿದ ಬಗ್ಗೆ ಪ್ರಶಂಸಿಸಿದರು.
ಗ್ರಾಮಪಂಚಾಯತ್ ಸದಸ್ಯ ಹಮ್ಮಬ್ಬ ಶೌಕತ್ ಅಲಿ ಸುಸಜ್ಜಿತ ಕ್ರೀಡಾಂಗಣ ಮತ್ತು ಕ್ರೀಡಾಕೂಟ ಆಯೋಜನೆಯಲ್ಲಿ ದೈಹಿಕ ಶಿಕ್ಷಣ ಶಿಕ್ಷಕ ಸೀತಾರಾಮ ಗೌಡರ ಅಹರ್ನಿಶಿ ದುಡಿಮೆಯನ್ನು ಸ್ಮರಿಸಿ ಸನ್ಮಾನಿಸಿದರು.
ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯ ಸದಸ್ಯರು ಶೇಕಡಾ ಫಲಿತಾಂಶ ದಾಖಲಿಸಿದ ಎಲ್ಲಾ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರದೊಂದಿಗೆ ಹೂ ನೀಡಿ ಅಭಿನಂದಿಸಿದರು.ಶಾಲಾಮುಖ್ಯಗುರು ಶ್ರೀಧರ್ ಭಟ್ ಸ್ವಾಗತಿಸಿ,ಕಾರ್ಯಕ್ರಮವನ್ನು ಹಿರಿಯ ಶಿಕ್ಷಕ ಲಲಿತಾ.ಕೆ.ಯ ನಿರೂಪಿಸಿದರು, ಮಲ್ಲಿಕಾ.ಐ , ಕಾರ್ಯಕ್ರಮ ಶಿಕ್ಷಕ ವಸಂತಕುಮಾರ್ .ಪಿ. ಕಾರ್ಯಕ್ರಮ ನಿರ್ವಹಿಸಿದರು.ವಿಜ್ಞಾನ ಶಿಕ್ಷಕ ಮನೋಹರ್ ,ಅತಿಥಿ ಶಿಕ್ಷಕಿ ಕುಮಾರಿ ಆರತಿಯವರು ಸಹಕರಿಸಿದರು. ವಿದ್ಯಾರ್ಥಿಗಳು, ಸಹೋದ್ಯೋಗಿಗಳು, ನೆರೆಯ ಶಾಲಾ ಅಧ್ಯಾಪಕ ಬಂಧುಗಳು,ಪೋಷಕರು,ಹಿತೈಷಿಗಳು ಉಪಸ್ಥಿತರಿದ್ದರು.