ಪುತ್ತೂರು: ಕರ್ನಾಟಕದ ಮೊದಲ ಅಧಿಕೃತ ಮಾರುತಿ ಸುಝುಕಿ ಕಾರುಗಳ ಅಧಿಕೃತ ಡೀಲರ್ ಮಾಂಡೋವಿ ಮೋಟರ್ಸ್ ಸಮೂಹ ಸಂಸ್ಥೆಗೆ 40ರ ಸಂಭ್ರಮವಾಗಿದ್ದು ಆ ಸಲುವಾಗಿ ಈ ಸಂದರ್ಭದಲ್ಲಿ ಮಾಂಡೋವಿ ಮೋಟಾರ್ಸ್ ಉಪ್ಪಿನಂಗಡಿ ಶಾಖೆಯಲ್ಲಿ ಸಂಭ್ರಮಾಚರಣೆ ಮಾಡಲಾಯಿತು.
ಅತಿಥಿಗಳಾಗಿ ಅನಿವಾಸಿ ಭಾರತೀಯ ನಝೀರ್ ಕರುವೇಲು, ಪ್ರಗತಿಪರ ಕೃಷಿಕ ಸತ್ಯಶಂಕರ್ ಭಟ್, ಪುತ್ತೂರು ತಾಲೂಕು ಶಿಕ್ಷಣ ಸಂಪನ್ಮೂಲ ಕೇಂದ್ರ ಅಧ್ಯಕ್ಷ ಮಹಮ್ಮದ್ ರಫೀಕ್ ದರ್ಬೆ, ಪ್ರಗತಿಪರ ಕೃಷಿಕ ತಿರುಮಲೇಶ್ವರ ಪ್ರಸನ್ನ, ನಸೀಮ ನಾಸಿರ್ ಉಪಸ್ಥಿತರಿದ್ದರು.
ಉಪ್ಪಿನಂಗಡಿ ಮಾಂಡೋವಿ ಮೋಟರ್ಸ್ ಎಜಿಎಮ್ ಚಂದ್ರಶೇಖರ್ ಸನಿಲ್ ಸ್ವಾಗತಿಸಿ, ಸಂಸ್ಥೆಯ ಸೀನಿಯರ್ ರಿಲೇಷನ್ ಶಿಪ್ ಮ್ಯಾನೇಜರ್ ಸುಮಿತ್ ಎನ್ ವಂದಿಸಿ, ಸಂಸ್ಥೆಯ ಸೀನಿಯರ್ ರಿಲೇಷನ್ ಶಿಪ್ ಮ್ಯಾನೇಜರ್ ಹರ್ಷ ರೈ ಕಾರ್ಯಕ್ರಮ ನಿರೂಪಿಸಿದರು.
ಕರ್ನಾಟಕದ ಮೊದಲ ಅಧಿಕೃತ ಮಾರುತಿ ಸುಝುಕಿ ಕಾರುಗಳ ಅಧಿಕೃತ ಡೀಲರ್ ಮಾಂಡೋವಿ ಮೋಟರ್ಸ್ ಸಂಸ್ಥೆ ಜೂ.14ನೇ 1984ರಂದು ಬೆಂಗಳೂರಿನಲ್ಲಿ ಕಾರ್ಯರಂಭಿಸಿದ ನಂತರ 3ಸಿಟಿಗಳಲ್ಲಿ, 8ಜಿಲ್ಲೆಗಳಲ್ಲಿ,15 ತಾಲೂಕುಗಳಲ್ಲಿ 22 ಮಾರುತಿ ಸುಝುಕಿ ಅರೇನ, 4 ನೆಕ್ಸಾ, 6 ಟ್ರೂವಾಲ್ಲೂ, 8 ಮಾರುತಿ ಡ್ರೈವಿಂಗ್ ಸ್ಕೂಲ್ ಮತ್ತು 42 ವರ್ಕ್ ಶಾಪ್ಗಳನ್ನು ಹೊಂದಿದ್ದು ಸುಮಾರು 4000ಕ್ಕಿಂತಲೂ ಹೆಚ್ಚು ಉದ್ಯೋಗಿಗಳನ್ನು ಹೊಂದಿದೆ.