ಪುತ್ತೂರು: ಕೊಳ್ತಿಗೆ ಸ.ಹಿ.ಪ್ರಾ. ಶಾಲಾ ಸಂಸತ್ತಿನ ಚುನಾವಣೆಯನ್ನು ನಡೆಸಲಾಯಿತು.
ಶಾಲಾ ಮುಖ್ಯಮಂತ್ರಿಯಾಗಿ ದಕ್ಷಾ(7ನೇ), ಉಪ ಮುಖ್ಯಮಂತ್ರಿಯಾಗಿ ಅಹಮದ್ ಶಾಮಿಲ್(7ನೇ)ರವರು ಆಯ್ಕೆಯಾಗಿದ್ದಾರೆ. ಗೃಹ ಮಂತ್ರಿಯಾಗಿ ನಿರೀಕ್ಷಾ ಹಾಗೂ ದಕ್ಷಾ, ಶಿಕ್ಷಣ ಮಂತ್ರಿಯಾಗಿ ಮೋಕ್ಷ ಹಾಗೂ ಅನುಶ್ರೀ, ಆಹಾರ ಮಂತ್ರಿಯಾಗಿ ಜುವೈರಿಯಾ ಹಾಗೂ ಅಬ್ಸಾನಾ, ಕ್ರೀಡಾ ಮಂತ್ರಿಯಾಗಿ ಫಾಹಿಮ್ ಹಾಗೂ ಟಾನಿಯಾ, ನೀರಾವರಿ ಮಂತ್ರಿಯಾಗಿ ಮುಝಮಿಲ್ ಹಾಗೂ ಕೃತಿಕ್, ತೋಟಗಾರಿಕಾ ಮಂತ್ರಿಯಾಗಿ ವರುಣ್ ಮತ್ತು ಚೇತನ್, ಆರೋಗ್ಯ/ಸ್ವಚ್ಛತಾ ಮಂತ್ರಿಯಾಗಿ ವೀಕ್ಷಾ ಹಾಗೂ ಶಮ್ನಾ, ಗ್ರಂಥಾಲಯ ಮಂತ್ರಿಯಾಗಿ ಮೋಕ್ಷ ಹಾಗೂ ಅನುಶ್ರೀ, ವಿರೋಧ ಪಕ್ಷದ ನಾಯಕ-ನಾಯಕಿಯಾಗಿ ನಿಖಿಲ್ ಹಾಗೂ ಬಿಂದ್ಯಾ ಆಯ್ಕೆಯಾಗಿದ್ದಾರೆ.
ಮುಖ್ಯಗುರು ಶಿವಪ್ರಸಾದ್ ರವರು ಮಾರ್ಗದರ್ಶನ ನೀಡಿದರು. ಚುನಾವಣಾ ಉಸ್ತುವಾರಿಯಾಗಿ ಸಹ ಶಿಕ್ಷಕ ರವಿರಾಜ್ ರವರು ಕಾರ್ಯ ನಿರ್ವಹಿಸಿದರು. ಪದವೀಧರ ಶಿಕ್ಷಕಿ ಅಶ್ವಿನಿರವರು ಚುನಾವಣಾ ಮಹತ್ವ ಹಾಗೂ ಗೌಪ್ಯತೆ ಬಗ್ಗೆ ತಿಳಿಸಿದರು. ಕಾರ್ಯನಿರ್ವಹಣಾಧಿಕಾರಿಗಳಾಗಿ ಅತಿಥಿ ಶಿಕ್ಷಕರಾದ ಭವ್ಯ ಹಾಗೂ ಲತಾ ಕಾರ್ಯನಿರ್ವಹಿಸಿದರು.