ಕೊಣಾಜೆ ನಿವಾಸಿ ಗಿರೀಶ್‌ ನಾಪತ್ತೆ-ದೂರು

0

ನೆಲ್ಯಾಡಿ: ಕಡ್ಯ-ಕೊಣಾಜೆ ಗ್ರಾಮದ ಮುಚ್ಚಿರೋಡಿ ನಿವಾಸಿ ಗಿರೀಶ್ ಗೌಡ(46ವ.)ಅವರು ಜೂ.19ರಂದು ಬೆಳಿಗ್ಗೆ ಮನೆಯಿಂದ ಕಾಣೆಯಾಗಿರುವುದಾಗಿ ಅವರ ಪತ್ನಿ ಶಂಕರಿ ಎಂ.ಎಂಬವರು ಉಪ್ಪಿನಂಗಡಿ ಪೊಲೀಸರಿಗೆ ದೂರು ನೀಡಿದ್ದಾರೆ.


ಶಂಕರಿ ಅವರು ಜೂ.19ರಂದು ಬೆಳಿಗ್ಗೆ 9.30ಕ್ಕೆ ಗುಡ್ಡಕ್ಕೆ ನೆರೆಮನೆಯವರ ಜೊತೆ ತೋಟಕ್ಕೆ ಸೊಪ್ಪು ಕಡಿಯುವ ಕೆಲಸಕ್ಕೆ ಹೋಗಿದ್ದು ನಂತರ 11.30ಕ್ಕೆ ಚಹಾ ಕುಡಿಯಲು ಮನೆಗೆ ಬಂದು 11:45ಕ್ಕೆ ಮತ್ತೆ ಗುಡ್ಡೆಗೆ ಹೋಗಿದ್ದಾರೆ. ಈ ವೇಳೆ ಅವರ ಗಂಡ ಮನೆಯಲ್ಲಿ ಅಡಿಕೆ ಸುಲಿಯುವ ಕೆಲಸ ಮಾಡಿಕೊಂಡಿದ್ದರು. ಶಂಕರಿ ಹಾಗೂ ಕೆಲಸದವರು ಮಧ್ಯಾಹ್ನ 1.30ಕ್ಕೆ ಊಟಕ್ಕೆಂದು ಮನೆಗೆ ಬಂದಾಗ ಅವರ ಗಂಡ ಮನೆಯಲಿ ಇರಲಿಲ್ಲ. ಅಸುಪಾಸಿನಲ್ಲಿ, ನೆರೆಕರೆಯವರಲ್ಲಿ, ತೋಟದಲ್ಲಿ ಹುಡುಕಾಡಿದರೂ ಪತ್ತೆಯಾಗಿರುವುದಿಲ್ಲ. ಸಂಬಂಧಿಕರ ಮನೆಗೆ ದೂರವಾಣಿ ಕರೆ ಮಾಡಿ ವಿಚಾರಿಸಿದ್ದು ಅಲ್ಲಿಯೂ ಪತ್ತೆಯಾಗಿರುವುದಿಲ್ಲ. ನಾಪತ್ತೆಯಾಗಿರುವ ಗಿರೀಶ್ ಅವರು ಧರ್ಮಸ್ಥಳ ಸಂಘ, ನವೋದಯ ಸಂಘ ಹಾಗೂ ಬ್ಯಾಂಕಿನಲ್ಲಿಯೂ ಸಾಲ ಪಡೆದುಕೊಂಡಿದ್ದು ಅದೇ ಬೇಸರದಲ್ಲಿ ಇದ್ದವರು ಜೂ.19ರಂದು ಬೆಳಿಗ್ಗೆ 11.45ಗಂಟೆಯಿಂದ ಮಧ್ಯಾಹ್ನ 1.30ರ ಮಧ್ಯೆ ಮನೆಯಿಂದ ಎಲ್ಲಿಯೋ ಹೋಗಿ ಕಾಣೆಯಾಗಿರುತ್ತಾರೆ ಎಂದು ಉಪ್ಪಿನಂಗಡಿ ಪೊಲೀಸರಿಗೆ ದೂರು ನೀಡಿದ್ದಾರೆ. ಉಪ್ಪಿನಂಗಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

LEAVE A REPLY

Please enter your comment!
Please enter your name here