ನೆಲ್ಯಾಡಿ : ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಶಾಂತಿನಗರ -ಗೋಳಿತ್ತಟ್ಟು ಇಲ್ಲಿನ ವಿದ್ಯಾರ್ಥಿಗಳಿಗೆ ಡೆಂಗ್ಯೂ ಜ್ವರ ಹಾಗೂ ಮಳೆಗಾಲದಲ್ಲಿ ತಲೆದೋರುವ ವಿವಿಧ ಖಾಯಿಲೆ ಬಗ್ಗೆ ಮಾಹಿತಿ ಕಾರ್ಯಾಗಾರ ನಡೆಯಿತು.
ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಗೋಳಿತ್ತೊಟ್ಟು ಗ್ರಾಮದ ಸಮುದಾಯ ಆರೋಗ್ಯ ಅಧಿಕಾರಿ ಶ್ರೀಮತಿ ಸುಧಾ ಅವರು ಮಾಹಿತಿ ನೀಡಿ, ಶಾಲೆ ಹಾಗೂ ಮನೆಯ ಪರಿಸರದಲ್ಲಿ ನೀರು ನಿಲ್ಲದ ರೀತಿ ನೋಡಿಕೊಳ್ಳುವುದರಿಂದ ಹಾಗೂ ಶುಚಿತ್ವವನ್ನು ಕಾಪಾಡುವ ಮೂಲಕ ಡೆಂಗ್ಯೂ ಹಾಗೂ ಇತರೇ ಖಾಯಿಲೆಗಳಿಂದ ಮುಕ್ತಿ ಪಡೆಯಬಹುದು ಎಂದು ಹೇಳಿದರು. ಶಾಲಾ ಮುಖ್ಯ ಗುರು ಪ್ರದೀಪ್ ಬಾಕಿಲ ಸ್ವಾಗತಿಸಿದರು. ಶಿಕ್ಷಕರಾದ ಮಂಜುನಾಥ ಮಣಕವಾಡ, ಪ್ರಮೀಳಾ, ಸುನಂದ ಹಾಗೂ ಮೋಹಿನಿ ಸಹಕರಿಸಿದರು.