ಪುತ್ತೂರು: ವಿಟ್ಲದ ಸರಕಾರಿ ಐಟಿಐನಲ್ಲಿ ಜೂ.21ರಂದು ವಿಶ್ವ ಯೋಗ ದಿನಾಚರಣೆಯನ್ನು ಆಚರಿಸಿದರು.ಸಂಪನ್ಮೂಲ ವ್ಯಕ್ತಿಯಾಗಿದ್ದ ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ಕರ್ನಾಟಕ ಇದರ ಶ್ರೀ ಪಂಚಲಿಂಗೇಶ್ವರ ಶಾಖೆ ವಿಟ್ಲ ಇಲ್ಲಿಯ ಮುಖ್ಯ ಶಿಕ್ಷಕಿ ಪ್ರಪುಲ್ಲ ರವೀಂದ್ರ ಆಚಾರ್ಯ ಮಾತನಾಡಿ, ಯೋಗಾಭ್ಯಾಸ ಶರೀರದ ಆರೋಗ್ಯಕ್ಕೆ ಸಾಧನವಾಗಿರುವುದು ಮಾತ್ರವಲ್ಲದೆ ಮಾನಸಿಕ ಸ್ವಾಸ್ಥ್ಯ, ಬುದ್ದಿಯ ಪ್ರಕರತೆ ಮತ್ತು ಆಧ್ಯಾತ್ಮಿಕ ಪ್ರಗತಿಗೂ ದಾರಿ ಮಾಡಿಕೊಡುತ್ತದೆ. ಆರೋಗ್ಯಕರ ಜೀವನವನ್ನು ನಡೆಸಲು ನಮಗೆ ಯೋಗ ಸಹಕಾರಿಯಾಗುತ್ತದೆ ಎಂದು ಹೇಳಿದರು.
ಮೀರಾ ಭಟ್, ಸಂಗೀತ, ಉಷಾ ಹಾಗೂ ಮೀನಾಕ್ಷಿ ಯೋಗದ ಪ್ರಾತ್ಯಕ್ಷಿಕೆ ನೀಡಿದರು. ಸಂಸ್ಥೆಯ ಪ್ರಾಚಾರ್ಯ ಹರೀಶ್‌ರವರು ಸ್ವಾಗತಿಸಿ, ಎನ್.ಎಸ್.ಎಸ್. ಅಧಿಕಾರಿ ಶರತ್ ಕುಮಾರ್ ಎಸ್.ಎಚ್ ವಂದಿಸಿದರು. ವಿದ್ಯಾರ್ಥಿ ಹಿತೇಶ್ ಪ್ರಾರ್ಥಿಸಿದರು. ಕಿರಿಯ ತರಬೇತಿ ಅಧಿಕಾರಿ ಜೋಲ್ಡನ್ ಕ್ರಾಸ್ತಾ ಕಾರ್ಯಕ್ರಮ ನಿರೂಪಿಸಿದರು.