ಅರಿಯಡ್ಕ: ಭಾರತ ಸರ್ಕಾರ, ಯುವ ಕಾರ್ಯ ಕ್ರೀಡಾ ಸಚಿವಾಲಯ ನೆಹರು ಯುವ ಕೇಂದ್ರ ಮಂಗಳೂರು , ಮತ್ತು ತಾಲೂಕು ಯುವಜನ ಒಕ್ಕೂಟ ಪುತ್ತೂರು ಹಾಗೂ ಶ್ರೀ ಕೃಷ್ಣ ಭಜನಾ ಮಂದಿರ ಕೌಡಿಚ್ಚಾರು ಇವುಗಳ ಸಹಯೋಗದಲ್ಲಿ “ತಾಲೂಕು ಅತ್ಯುತ್ತಮ ಯುವ ಸಂಸ್ಥೆ ಪ್ರಶಸ್ತಿ ಪುರಸ್ಕೃತ ” ವಿವೇಕಾನಂದ ಯುವಕ ವೃಂದ ಕೌಡಿಚ್ಚಾರು ಅರಿಯಡ್ಕ ಇದರ ಆಶ್ರಯದಲ್ಲಿ ,ಕೌಡಿಚ್ಚಾರು ಶ್ರೀ ಕೃಷ್ಣ ಭಜನಾ ಮಂದಿರದ ಸಭಾ ಭವನದಲ್ಲಿ , 3 ದಿನಗಳ ಯೋಗ ಶಿಬಿರ ಚಾಲನೆಗೊಂಡು ಯಶಸ್ವಿಯಾಗಿ ಜೂ.23 ರಂದು ಸಮಾಪ್ತಿಗೊಂಡಿತು.
ಈ ಸಮಾರೋಪ ಸಮಾರಂಭ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಯುವಕ ವೃಂದದ ಗೌರವಾಧ್ಯಕ್ಷರಾದ ಬಾಲಕೃಷ್ಣ ಕುಲಾಲ್ ಕೌಡಿಚ್ಚಾರು ವಹಿಸಿದ್ದರು , ಮುಖ್ಯ ಅತಿಥಿಗಳಾಗಿ, ತಾಲೂಕು ಯುವಜನ ಒಕ್ಕೂಟದ ಅಧ್ಯಕ್ಷರಾದ ,ದಿನೇಶ್ ಸಾಲ್ಯಾನ್, ಶ್ರೀ ಕೃಷ್ಣ ಭಜನಾ ಮಂದಿರದ ಉಪಾಧ್ಯಕ್ಷರಾದ ಕುಶಾಲಪ್ಪ ಗೌಡ ಮಡ್ಯಂಗಳ, ಹಾಗೂ ಪಶು ಪಾಲನಾ ಇಲಾಖೆಯ ನಿವೃತ ಉಪ ನಿರ್ದೇಶಕ ಡಾ. ಸುರೇಶ್ ಭಟ್ ಕೌಡಿಚ್ಚಾರು, ಕಾರ್ಯಕ್ರಮದಲ್ಲಿ ಉಪ್ಥಿತರಿದ್ದರು, 3 ದಿನಗಳಲ್ಲಿ ಬಹಳ ಅರ್ಥ ಪೂರ್ಣ ವಾಗಿ ಯೋಗ ತರಬೇತಿ ನೀಡಿದ ನರಿಮೊಗರು ಸಾಂದೀಪನಿ ಗ್ರಾಮೀಣ ವಿದ್ಯಾಸಂಸ್ಥೆಯ ಯೋಗ ಶಿಕ್ಷಕರಾದ ನವೀನ್ ಕುಮಾರ್ ರವರಿಗೆ ಗೌರವಪೂರ್ವಕವಾಗಿ ಎಲ್ಲಾ ಶಿಬಿರಾರ್ಥಿಗಳು ಗುರುವಂದನೆ ಸಲ್ಲಿಸಲಾಯಿತು.
ಶಿಬಿರಾರ್ಥಿಗಳಾದ, ಪದ್ಮನಾಭ ಆಚಾರ್ಯ ಶೇಖಮಲೆ, ಹಾಗೂ ಸಾತ್ವಿಕ್ ಆಚಾರ್ಯ ಹೋಸಗದ್ದೆ, ಹಾಡಿನ ಜೊತೆಗೆ ತಮ್ಮ ಅನಿಸಿಕೆ ವ್ಯಕ್ತಪಡಿಸಿದರು, ಯುವಕ ವೃಂದದ ಗೌರವ ಸಲಹೆಗಾರ ವಸಂತ ಕುಲಾಲ್ ಆಕಾಯಿ ಸ್ವಾಗತಿಸಿ, ಅಧ್ಯಕ್ಷ ಉದಯ ಕುಮಾರ್ ಆಕಾಯಿ ವಂದಿಸಿದರು, ಸಾಂಸ್ಕೃತಿಕ ಕಾರ್ಯದರ್ಶಿ ಚರಣ್ ರಾಜ್ ಎಂ ಡಿ ಹೊಸಗದ್ದೆ ಕಾರ್ಯಕ್ರಮ ನಿರೂಪಿಸಿದರು. ಈ ಸಂದರಭದಲ್ಲಿ ,ರಾಮದಾಸ ರೈ ಮಧ್ಲ, ದೀಪಕ್ ಕುಲಾಲ್ ಆಕಾಯಿ, ಮುಕುಂದ ನಾಯ್ಕ ದೇವುಮೂಲೆ, ಹರಿಶ್ಚಂದ್ರ ಆಚಾರ್ಯ ಹೊಸಗದ್ದೆ, ಸುಕುಮಾರ್ ಕರ್ಕೇರ ಮಡ್ಯಂಗಳ, ದುರ್ಗಾಪ್ರಸಾದ್ ನಾಯ್ಕ ಮುಂಗ್ಲಿಮೂಲೆ, ಚಂದ್ರ ಜಿ ಕುತ್ಯಾಡಿ, ಕೃಷ್ಣ ಕುಲಾಲ್ ಡಿ ಕೌಡಿಚ್ಚಾರು, ಹರೀಶ್ ಪಿ ಆರ್ ಪಾದೆಲಾಡಿ, ಜಯಪ್ರಕಾಶ್ ಕುತ್ಯಾಡಿ, ಕರುಣಾಕರ ಗೌಡ ಆಚಾರಿಮೂಲೆ , ಉಪಸ್ಥಿತರಿದ್ದರು.