ಉಪ್ಪಿನಂಗಡಿ: ಮುಂಗಾರು ಬಿರುಸು ಪಡೆಯುತ್ತಿದ್ದಂತೆಯೇ ದ.ಕ ಜಿಲ್ಲೆಯ ಜೀವ ನದಿಗಳಾದ ನೇತ್ರಾವತಿ ಹಾಗೂ ಕುಮಾರಧಾರಾ ನದಿಗಳೆರಡರ ನೀರ ಹರಿವಿನಲ್ಲಿ ಗಮನಾರ್ಹ ಹೆಚ್ಚಳ ಕಂಡು ಬಂದಿದ್ದು, ಸಮುದ್ರ ಮಟ್ಟಕ್ಕಿಂತ 24.5 ಮೀಟರ್ ಎತ್ತರದಲ್ಲಿ ನೀರಿನ ಹರಿವು ದಾಖಲಾಗಿದೆ.
ಸುಬ್ರಹ್ಮಣ್ಯ ಪರಿಸರದಲ್ಲಿ ಸತತ ಮಳೆಯಾಗುತ್ತಿರುವುದರಿಂದ ಕುಮಾರಧಾರಾ ನದಿಯ ನೀರಿನ ಹರಿವಿನಲ್ಲಿ ಭಾರೀ ಹೆಚ್ಚಳವಾಗಿದ್ದು, ಉಪ್ಪಿನಂಗಡಿಯಲ್ಲಿ ನೇತ್ರಾವತಿ ನದಿಯನ್ನು ಸಂಗಮಿಸುವ ಸಮಯದಲ್ಲಿ ನೇತ್ರಾವತಿ ನದಿಯ ನೀರನ್ನು ತಡೆಗಟ್ಟಿದಂತೆ ಮುನ್ನುಗ್ಗಿ ಹರಿಯುತ್ತಿದೆ.