ಕಡಬ ಸರಸ್ವತಿ ಪ್ರೌಢ ಶಾಲೆಗೆ ನೂತನವಾಗಿ ಸೇರ್ಪಡೆಗೊಂಡ ವಿದ್ಯಾರ್ಥಿಗಳ ಪ್ರವೇಶೋತ್ಸವ

0

ಕಡಬ: ಸರಸ್ವತಿ ವಿದ್ಯಾಲಯ ಪ್ರೌಢಶಾಲೆಯಲ್ಲಿ ಸಂಸ್ಥೆಗೆ ನೂತನವಾಗಿ ಸೇರ್ಪಡೆಗೊಂಡ ವಿದ್ಯಾರ್ಥಿಗಳ ಪ್ರವೇಶೋತ್ಸವ ಕಾರ್ಯಕ್ರಮವು ಜೂ.25ರಂದು ವಿದ್ಯಾನಗರದ ಪ್ರಾಥಮಿಕ ಶಾಲಾ ಸಭಾಂಗಣದಲ್ಲಿ ನಡೆಯಿತು.


ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ಸರಸ್ವತಿ ಸಮೂಹ ಸಂಸ್ಥೆಗಳ ಅಧ್ಯಕ್ಷರಾದ ರವಿರಾಜ್ ಶೆಟ್ಟಿ ಕಡಬ ವಹಿಸಿ ವಿದ್ಯೆಯ ಜೊತೆಗೆ ವಿನಯತೆ ಸಂಸ್ಕಾರ ಅಗತ್ಯ ಕೇವಲ ಹಣಗಳಿಗಾಗಿ ಮಾತ್ರ ಶಿಕ್ಷಣವನ್ನು ಪಡೆಯುವುದಲ್ಲ ಜೀವನದಲ್ಲಿ ಸಂಸ್ಕಾರವನ್ನು ಮೈಗೂಡಿಸಿಕೊಳ್ಳಬೇಕು ಎಂದು ಹೇಳಿದರು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಕಡಬದ ಅಶ್ವಿನಿ ಫ್ಯಾನ್ಸಿ ಮತ್ತು
ಫೂಟ್ ವೇರ್ ನ ಮಾಲಕ ಶ್ರೀಧರ ಮಣಿಯಾಣಿ ಹಾಗೂ ಕಡಬದ ಕಿರಿಯ ಪಶು ವೈದ್ಯಕೀಯ ಪರೀಕ್ಷಕ ರವಿತೇಜ ಪಡೆಜ್ಜಾರ್ ಆಗಮಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು ಕಾರ್ಯಕ್ರಮದಲ್ಲಿ ನೂತನ ವಿದ್ಯಾರ್ಥಿಗಳು ಹೋಮಕುಂಡಕ್ಕೆ ಘೃತಾಹುತಿಯನ್ನು ಸಮರ್ಪಿಸಿ ಭಾರತ ಮಾತೆಗೆ ಪುಷ್ಪಾರ್ಚನೆಯನ್ನು ಮಾಡಿದರು.


ಸಂಸ್ಥೆಯ ಸಂಚಾಲಕರಾದ ವೆಂಕಟರಮಣರಾವ್ ಮಂಕುಡೆ ಇವರು ಪ್ರಾಸ್ತಾವಿಕ ಮಾತುಗಳನ್ನಾಡಿದರು. ವೇದಿಕೆಯಲ್ಲಿ ಆಡಳಿತ ಮಂಡಳಿಯ ಸದಸ್ಯರು, ಪ್ರೌಢ ವಿಭಾಗದ ಮೇಲ್ವಿಚಾರಕಿ ಪುಲಸ್ತ್ಯಾ ರೈ, ಪ್ರೌಢ ವಿಭಾಗದ ಮುಖ್ಯ ಗುರು ಶೈಲಶ್ರೀ ಎಸ್ ರೈ ಉಪಸ್ಥಿತರಿದ್ದರು.


ಕಾರ್ಯಕ್ರಮದಲ್ಲಿ ಆಡಳಿತ ಮಂಡಳಿ ಸದಸ್ಯರಾದ ಉಮೇಶ್ ಶೆಟ್ಟಿ ಸಾಯಿ ರಾಮ್, ಸೀತಾರಾಮಗೌಡ ಎ , ಶಿವಪ್ರಸಾದ್ ಮೈಲೇರಿ, ಪ್ರಮೀಳಾ ಲೋಕೇಶ್, ಯಶೋಧರ ಕೊಣಾಜೆ ಪ್ರಾಥಮಿಕ ವಿಭಾಗದ ಮುಖ್ಯ ಗುರು ಮಾಧವ ಕೊಲ್ಪೆ, ಆಂಗ್ಲ ಮಾಧ್ಯಮ ವಿಭಾಗದ ಪ್ರಭಾರ ಮುಖ್ಯ ಗುರು ಶ್ವೇತ ಕುಂದರ್, ಪೋಷಕ ವೃಂದದವರು ಹಾಗೂ ಶಿಕ್ಷಕ ಶಿಕ್ಷಕೇತರರು ಉಪಸ್ಥಿತರಿದ್ದರು. ಪ್ರೌಢ ವಿಭಾಗದ ಶಾಲಾ ನಾಯಕಿ ವರ್ಷಾ ಎಸ್ ಸ್ವಾಗತಿಸಿ, ಮೋಕ್ಷಿತ್ ಬಿ ಹತ್ತನೇ ತರಗತಿ ವಂದಿಸಿದರು. ಯಶ್ವಿತಾ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here