ಪುತ್ತೂರು: ವಿದ್ಯೆ, ಉದ್ಯೋಗ ಹಾಗೂ ಸಂಪರ್ಕದಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯುವವಾಹಿನಿ ಪುತ್ತೂರು ಘಟಕದ ಆಶ್ರಯದಲ್ಲಿ ಜರಗಲಿರುವ ‘ಬಿಲ್ಲವ ವಧು-ವರಾನ್ವೇಷಣೆ 2024’ ಕಾರ್ಯಕ್ರಮವು ಜುಲೈ ತಿಂಗಳಲ್ಲಿ ಬಪ್ಪಳಿಗೆ-ಪುತ್ತೂರು ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಸಭಾಭವನದಲ್ಲಿ ಜರಗಲಿದ್ದು, ಈ ಕಾರ್ಯಕ್ರಮದ ವಧು-ವರಾಕಾಂಕ್ಷಿಗಳು ತಮ್ಮ ಬಯೋಡಾಟವನ್ನು ಜು.೫ರೊಳಗೆ ಬಿಲ್ಲವ ಸಂಘದ ಕಛೇರಿಗೆ ಪಾವತಿಸತಕ್ಕದ್ದು.
ವಧುವಿಗೆ 18 ವರ್ಷ ಮತ್ತು ವರನಿಗೆ 21 ವರ್ಷಕ್ಕಿಂತ ಮೇಲ್ಪಟ್ಟಿರಬೇಕು. ವಧು-ವರಕಾಂಕ್ಷಿಗಳು ತಮ್ಮ ಹೆಸರು, ಇತ್ತೀಚಿನ ಭಾವಚಿತ್ರ, ಹುಟ್ಟಿದ ದಿನಾಂಕ, ತಾಯಿಯ ಬರಿ, ತಂದೆಯ ಬರಿ, ರಾಶಿ, ನಕ್ಷತ್ರ, ಉದ್ಯೋಗ, ವಿಳಾಸ, ವಿದ್ಯಾರ್ಹತೆ, ದೂರವಾಣಿ ಸಂಖ್ಯೆ, ಆಧಾರ್ ಕಾರ್ಡ್ ನೀಡಿ ಸಹಕರಿಸಬೇಕು. ವಧು-ವರಕಾಂಕ್ಷಿಗಳು ಅರ್ಜಿಯೊಂದಿಗೆ ಪ್ರವೇಶ ಶುಲ್ಕ ರೂ.200 ಅನ್ನು ಪಾವತಿಸತಕ್ಕದ್ದು. ವಧು-ವರರ ಸಂಪರ್ಕವನ್ನು ಮಾತ್ರ ಯುವವಾಹಿನಿ ಸಂಸ್ಥೆಯು ಕಲ್ಪಿಸುವ ಹೊರತು ವಧು-ವರರ ಪೂರ್ವಾಪರ/ಕೌಟುಂಬಿಕ ವಿಷಯಗಳಿಗೆ ಯುವವಾಹಿನಿ ಸಂಸ್ಥೆಯು ಜವಾಬ್ದಾರಿಯಲ್ಲ. ಅರ್ಜಿಯನ್ನು ಪೂರ್ಣವಾಗಿ ಭರ್ತಿಮಾಡಿ ಸಂಘಕ್ಕೆ ಸಲ್ಲಿಸತಕ್ಕದ್ದು. ಹೆಚ್ಚಿನ ಮಾಹಿತಿಗಾಗಿ ಯುವವಾಹಿನಿ ಪುತ್ತೂರು ಘಟಕದ ಅಧ್ಯಕ್ಷ ಜಯರಾಮ ಬಿ.ಎನ್(9901724973), ಕಾರ್ಯದರ್ಶಿ ಸಮಿತ್ ಪಿ(8105400784), ವಧು-ವರಾನ್ವೇಷಣೆ ಕಾರ್ಯಕ್ರಮದ ಸಂಚಾಲಕ ಉಮೇಶ್ ಬಾಯಾರು(9900654940), ಸಮಾಜ ಸೇವಾ ನಿರ್ದೇಶಕ ಗಣೇಶ್ ಬಿ(9743703517)ರವರುಗಳನ್ನು ಸಂಪರ್ಕಿಸುವಂತೆ ಹಾಗೂ ಸಮಾಜದ ಆಸಕ್ತ ವಧು-ವರಕಾಂಕ್ಷಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳಬೇಕಾಗಿ ಯುವವಾಹಿನಿ ಪುತ್ತೂರು ಘಟಕದ ಪ್ರಕಟಣೆ ತಿಳಿಸಿದೆ.