ಮಿತ್ತಡ್ಕ: ಮಳೆಗೆ ಕಂಪೌಂಡ್ ಕುಸಿತ

0

ಬೆಟ್ಟಂಪಾಡಿ: ಎರಡು ದಿನಗಳಿಂದ ಸುರಿಯುತ್ತಿರುವ ಭೀಕರ ಮಳೆಗೆ ಇಲ್ಲಿನ ಮಿತ್ತಡ್ಕ ನಿವಾಸಿ ಯೋಗೀಶ್ ಗೌಡರವರ ಮನೆಯ ಮುಂಭಾಗದ ಕಂಪೌಂಡ್ ಜರಿದು ಹಾನಿಗೊಳಗಾಗಿದೆ.

ಮಿತ್ತಡ್ಕ – ಒಡ್ಯ ರಸ್ತೆಯ ಬದಿಯಲ್ಲಿ ಇರುವ ಚರಂಡಿ ಬದಿಗೆ ಇವರು ಕಳೆದ ವರ್ಷ ಕೆಂಪು ಕಲ್ಲಿನಿಂದ ಸುಮಾರು 60 ಅಡಿ ಉದ್ಧದ ಕಂಪೌಂಡ್ ಕಟ್ಟಿದ್ದರು. ಆದರೆ ಮಳೆಗೆ ಸಂಪೂರ್ಣ ಕಂಪೌಂಡ್ ಜರಿದು ಬಿದ್ದಿದೆ. ಘಟನೆಯಿಂದಾಗಿ ಸುಮಾರು 1 ಲಕ್ಷ ರೂ. ಗಿಂತಲೂ ಅಧಿಕ ನಷ್ಟ ಸಂಭವಿಸಿದೆ ಎಂದು ಯೋಗೀಶ್ ಗೌಡ ಹೇಳಿದ್ದಾರೆ. ಸ್ಥಳಕ್ಕೆ ಬೆಟ್ಟಂಪಾಡಿ ಗ್ರಾ.ಪಂ. ಸದಸ್ಯ ಗಂಗಾಧರ ಎಂ.ಎಸ್. ಭೇಟಿ ನೀಡಿ ಪರಿಶೀಲಿಸಿದ್ದಾರೆ.

LEAVE A REPLY

Please enter your comment!
Please enter your name here