ಬಡಗನ್ನೂರುಃ ಕುಂಬ್ರ ಪ್ರಾ.ಕೃ.ಪ.ಸ.ಸಂಘದ ವತಿಯಿಂದ ಸಂಘದ ಸಾಲ ಸೌಲಭ್ಯಗಳ ಮಾಹಿತಿ ಮತ್ತು ಹವಾಮಾನ ಆಧಾರಿತ ಬೆಳೆ ವಿಮೆ ಬಗ್ಗೆ ಮಾಹಿತಿ ಕಾರ್ಯಗಾರ ಜೂ 26 ರಂದು ಬಡಗನ್ನೂರು ಗ್ರಾ. ಪಂ. ಸಭಾಂಗಣದಲ್ಲಿ ನಡೆಯಿತು.
ಕುಂಬ್ರ ಪ್ರಾ.ಕೃ.ಪ.ಸ.ಸಂಘದ ಅಧ್ಯಕ್ಷ ಪ್ರಕಾಶ್ಚಂದ್ರ ರೈ ಕೈಕಾರ ಪ್ರಾಸ್ತಾವಿಕ ಮಾತನಾಡಿ, ಸಂಸ್ಥೆಯಿಂದ ದೊರಕುವ ಸಾಲ ಸೌಲಭ್ಯಗಳು ಮತ್ತು ಹವಾಮಾನ ಆಧಾರಿತ ಬೆಳೆ ವಿಮೆ ಹಾಗೂ ಇತರ ಸಾಲ ಸೌಲಭ್ಯಗಳನ್ನು ರೈತರು ಹೆಚ್ಚು ಸಂಖ್ಯೆಯಲ್ಲಿ ಸದುಪಯೋಗ ಪಡೆದುಕೊಳ್ಳುವಂತೆ ಕರೆನೀಡಿದರು.
ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಭವಾನಿ ಬಿ ಸಂಸ್ಥೆಯಿಂದ ದೊರಕುವ ಸಾಲ ಸೌಲಭ್ಯಗಳು ಮತ್ತು ಹವಾಮಾನ ಆಧಾರಿತ ಬೆಳೆ ವಿಮೆ ಮತ್ತು ಇತರ ಸಾಲ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿ ಮಾತನಾಡಿ ಬೆಳೆ ವಿಮೆ ಮಾಡುವವರು ಕಡ್ಡಾಯವಾಗಿ ಸಂಘದ ಸದಸ್ಯತ್ವ ಪಡೆದುಕೊಳ್ಳಬೇಕು.ಮತ್ತು ಪರ್ಮಾರ್ ಐಡಿ ಮಾಡಿಸಿಕೊಳ್ಳಬೇಕು. ಬೆಳೆ ಸಮೀಕ್ಷೆ ಕಡ್ಡಾಯವಾಗಿರುತ್ತದೆ.ಎಂದು ತಿಳಿಸಿದರು. ಬಡಗನ್ನೂರು ಗ್ರಾ.ಪಂ ಅಭಿವೃದ್ಧಿ ಅದಿಕಾರಿ ಮೋನಪ್ಪ ಕೆ, ಮಾತನಾಡಿ ಯಾವುದೇ ಸರ್ಕಾರ ಮತ್ತು ಸಹಕಾರಿ ಸಂಸ್ಥೆಗಳು ಸಂಸ್ಥೆಯಿಂದ ಸಿಗುವ ಸೌಲಭ್ಯಗಳ ಮಾಹಿತಿ ಜನರ ಬಳಿ ತಲುಪಿಸಿದಾಗ ಸಹಕಾರಿ ಸಂಘಗಳು ಅಭಿವೃದ್ಧಿ ಹೊಂದಲು ಸಾಧ್ಯ ಈ ಕೆಲಸ ಕುಂಬ್ರ ಪ್ರಾ ಕೃ ಪ ಸ ಸಂಘ ಮಾಡಿದೆ ಈ ಬಗ್ಗೆ ಅಭಿನಂದನೆ ಸಲ್ಲಿಸಿ, ಗ್ರಾ.ಪಂ ನ ಉದ್ಯೋಗ ಖಾತರಿ ಯೋಜನೆ ಬಗ್ಗೆ ಮಾಹಿತಿ ನೀಡಿ ಹೆಚ್ಚು ಜನರು ಈ ಯೋಜನೆಯ ಸೌಲಭ್ಯಗಳನ್ನು ಪಡೆದುಕೊಳ್ಳುವಂತೆ ತಿಳಿಸಿದರು.
ವೇದಿಕೆಯಲ್ಲಿ , ಗ್ರಾ.ಪಂ ಅಧ್ಯಕ್ಷೆ ಪುಷ್ಪಲತಾ ದೇವಕಜೆ, ಕುಂಬ್ರ ಪ್ರಾ.ಕೃ.ಪ.ಸ.ಸಂಘದ ನಿರ್ದೇಶಕ ಸೂರ್ಯನಾರಾಯಣ ಭಟ್ ಪ್ರಗತಿಪರ ಕೃಷಿಕ ಶ್ರೀನಿವಾಸ್ ಭಟ್ ಸಿ.ಹೆಚ್, ಉಪಸ್ಥಿತರಿದ್ದರು.
ಸಭೆಯಲ್ಲಿ ಸದಸ್ಯರುಗಳಾದ ಸಂತೋಷ್ ಆಳ್ವ ಗಿರಿಮನೆ, ಲಿಂಗಪ್ಪ ಗೌಡ ಮೋಡಿಕೆ, ರವಿಚಂದ್ರ ಸಾರಪ್ಪಾಡಿ,ಕಲಾವತಿ ಗೌಡ ಪಟ್ಲಡ್ಕ, ದಮಯಂತಿ ಕೆಮನಡ್ಕ , ವೆಂಕಟೇಶ್ ಕನ್ನಡ್ಕ ಶ್ರೀಮತಿ ಕನ್ನಡ್ಕ, ಹಾಗೂ ಬಡಗನ್ನೂರು ಹಾಗೂ ಪಡುವನ್ನೂರು ಗ್ರಾಮದ ರೈತರು ಭಾಗವಹಿಸಿದ್ದರು.ಕುಂಬ್ರ ಪ್ರಾ.ಕೃ.ಪ.ಸ.ಸಂಘದ ಮೆನೇಜರ್ ರಾಜ್ ಪ್ರಕಾಶ್ ರೈ ಸ್ವಾಗತಿಸಿ, ವಂದಿಸಿ ಕಾರ್ಯಕ್ರಮ ನಿರೂಪಿಸಿದರು. ನಿರ್ದೇಶಕ ರಘುರಾಮ ಪಾಟಾಳಿ ಶರವು ಸಹಕರಿಸಿದರು.
ಕಾರ್ಗಾರದಲ್ಲಿ ಸುಮಾರು ನೂರಕ್ಕೂ ಹೆಚ್ಚು ರೈತರು ಹವಾಮಾನ ಆಧಾರಿತ ಬೆಳೆ ವಿಮೆ ನೊಂದಾಯಿಸಿಕೊಂಡು ಯೋಜನೆಯ ಸದುಪಯೋಗ ಪಡೆದುಕೊಂಡರು.