ಉಪ್ಪಿನಂಗಡಿಯ ಟೂರ್ ಏಜೆನ್ಸಿಯಿಂದ ವಂಚನೆ, ಜೀವ ಬೆದರಿಕೆ ಆರೋಪ- ಬೆಂಗಳೂರಿನ ಪದ್ಮನಾಭನಗರ ಠಾಣೆಯಲ್ಲಿ ದೂರು ದಾಖಲು

0

ಉಪ್ಪಿನಂಗಡಿ ಮೂಲದ ಫಾರೂಕ್‌ ಎಂಬವರಿಗೆ ಸೇರಿದ ಜಲಾಲಿಯ್ಯ ಅಜ್ಮೀರ್ ಝಿಯಾರತ್ ಟೂರ್‌ ಏಜೆನ್ಸಿ ವಿರುದ್ಧ ವಂಚನೆಯ ಆರೋಪ ಕೇಳಿ ಬಂದಿದ್ದು, ಟೂರ್ ಏಜನ್ಸಿ ಅಜ್ಮೀರ್ ಯಾತ್ರೆಗೆ ಕರೆದುಕೊಂಡು ಹೋಗಿ ವಂಚಿಸಿರುವುದಾಗಿ ಯಾತ್ರಾರ್ಥಿ ಕುಟುಂಬವೊಂದರ ಸದಸ್ಯ ಅಬ್ದುಲ್ ರಝಾಕ್ ಬೆಂಗಳೂರಿನ ಪದ್ಮನಾಭನಗರ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ.


ಉಪ್ಪಿನಂಗಡಿ ಸಮೀಪದ ಕುಪ್ಪೆಟ್ಟಿ ಮೂಲದ ಫಾರೂಕ್ ಗೆ ಸೇರಿದ ಈ ಟೂರ್ ಏಜೆನ್ಸಿ ಮೂಲಕ ಆತೂರು ಮೂಲದ ಕುಟುಂಬದ ಒಟ್ಟು 60 ಯಾತ್ರಿಕರಿದ್ದ ತಂಡ ಬೆಂಗಳೂರಿನಿಂದ ಅಜ್ಮೀರ್ ಗೆ ತೆರಳಿತ್ತು. ಅಜ್ಮೀರ್ ಯಾತ್ರೆ ಮುಗಿಸಿ ಹಿಂತಿರುಗುತ್ತಿದ್ದ ವೇಳೆ ಕುಟುಂಬ ಸದಸ್ಯರಲ್ಲಿ ಟೂ‌ರ್ ಏಜೆನ್ಸಿ ಸಿಬ್ಬಂದಿ ಹೆಚ್ಚುವರಿ ಹಣ ಕೇಳಿದ್ದಾರೆ ಎಂದು ಆರೋಪಿಸಲಾಗಿದೆ.
ನಾವು ಕೊಡಲ್ಲ. ಯಾಕೆ ಹೆಚ್ಚುವರಿಯಾಗಿ ಹಣ ಕೊಡಬೇಕು ಎಂದು ಪ್ರಶ್ನಿಸಿದಾಗ ಯಾತ್ರಿಕರಿಗೆ ಟೂರ್ ಏಜೆನ್ಸಿ ಸಿಬ್ಬಂದಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಯಾತ್ರಿಕರನನ್ನು ಅಜ್ಮೀರ್‌ ನಲ್ಲಿಯೇ ಬಿಟ್ಟು ಬರುವುದಾಗಿ ಹೇಳಿದ್ದಾರೆ. ಆ ರೀತಿ ಮಾಡಿದರೆ ಪೊಲೀಸ್‌ ದೂರು ನೀಡುವುದಾಗಿ ಅಬ್ದುಲ್‌ ರಝಾಕ್ ಹೇಳಿದ್ದು,ಅವರಿಗೆ ಫಾರೂಕ್ ಜೀವ ಬೆದರಿಕೆ ಒಡ್ಡಿದ್ಧಾರೆ. ಯಾತ್ರಿಕರ ಕುಟುಂಬದ ಸದಸ್ಯ ಅಬ್ದುಲ್‌ ರಝಾಕ್ ಬೆಂಗಳೂರಿನ ಪದ್ಮನಾಭನಗರ ಪೊಲೀಸ್‌ ಠಾಣೆಗೆ ಈ ಕುರಿತು ದೂರು ನೀಡಿದ್ದಾರೆ. ಪ್ರಶ್ನೆ ಮಾಡಿದ ಕುಟುಂಬ ಸದಸ್ಯರ ಮೇಲೆ ಟೂರ್ ಏಜೆನ್ಸಿ ಸಿಬ್ಬಂದಿ ಹಲ್ಲೆ ಮಾಡಿರುವುದಾಗಿ ಹೇಳಲಾಗಿದ್ದು, ಈ ಕುರಿತು ಪೊಲೀಸರಿಗೆ ನೀಡಿದ ದೂರಿನಲ್ಲಿ ಯಾವುದೇ ಉಲ್ಲೇಖವಿರುವುದಿಲ್ಲ.

LEAVE A REPLY

Please enter your comment!
Please enter your name here