ಪುತ್ತೂರು: ವಿಜಯಸಾಮ್ರಾಟ್ ಸಂಸ್ಥೆಯ ವತಿಯಿಂದ ಪುತ್ತೂರಿನಲ್ಲಿ ನಡೆದ ಮೊದಲನೇ ಸೀಸನ್ ಪಿಲಿಗೊಬ್ಬು ಕಾರ್ಯಕ್ರಮ ಹಾಗೂ ಆಹಾರ ಮೇಳವು ತಾಲೂಕು ಹಾಗೂ ಜಿಲ್ಲಾಮಟ್ಟದಲ್ಲಿ ಗಮನ ಸೆಳೆದಿದ್ದು, ಗ್ರಾಮೀಣ ಪ್ರದೇಶಗಳನ್ನೊಳಗೊಂಡ ಪುತ್ತೂರಿನ ಮಹಾತೋಭಾರ ಶ್ರೀ ಮಹಾಲಿಂಗೇಶ್ವರ ದೇವಾಲಯದ ದೇವರಮಾರು ಗದ್ದೆಯಲ್ಲಿ ದಸರಾ ಸಂದರ್ಭ ಅ.5ನೇ ತಾರೀಖಿಗೆ ಫುಡ್ ಫೆಸ್ಟ್ ಕಾರ್ಯಕ್ರಮಕ್ಕೆ ಚಾಲನೆ ನೀಡಿ,ಅ. 6ರಂದು ಎರಡನೇ ಸೀಸನ್ನ ಪುತ್ತೂರುದ ಪಿಲಿಗೊಬ್ಬು ಕಾರ್ಯಕ್ರಮವು ಇನ್ನಷ್ಟು ಅದ್ದೂರಿ ಹಾಗೂ ವೈಭವಯುತವಾಗಿ ಜರುಗಲಿದೆ ಎಂದು ವಿಜಯಸಾಮ್ರಾಟ್ ಪುತ್ತೂರು ಸಂಸ್ಥೆಯ ಸ್ಥಾಪಕಾಧ್ಯಕ್ಷ ಸಹಜ್ ರೈ ಬಳಜ್ಜ ತಿಳಿಸಿದರು.
ಅವರು ದರ್ಬೆಯ ಶ್ರೀ ರಾಮ ಸೌಧ ಕಟ್ಟಡದಲ್ಲಿ ನಡೆದ ಪಿಲಿಗೊಬ್ಬು ಕಾರ್ಯಕ್ರಮ ಹಾಗೂ ಆಹಾರ ಮೇಳ ಕುರಿತಾದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು. ಸಭೆಯಲ್ಲಿ ಕಾರ್ಯಕ್ರಮದ ರೂಪುರೇಷೆ ಹಾಗೂ ಯೋಜನೆಯ ಬಗ್ಗೆ ಚರ್ಚಿಸಲಾಯಿತು.
ಪುತ್ತೂರುದ ಪಿಲಿಗೊಬ್ಬು-2023 ಕಾರ್ಯಕ್ರಮವು ಕಳೆದ ಬಾರಿ ಎಲ್ಲರ ಸಹಕಾರದಿಂದ ಅತ್ಯಂತ ಯಶಸ್ವಿಯಾಗಿ ಜರುಗಿದ್ದು,ಈ ಬಾರಿಯೂ ಕೂಡಾ ಎಲ್ಲರ ಸಹಕಾರದೊಂದಿಗೆ ಇನ್ನಷ್ಟು ವಿಜೃಂಭಣೆಯಿಂದ ಹಾಗೂ ಸಡಗರದಿಂದ ನಡೆಸುವಲ್ಲಿ ಎಲ್ಲರ ಪ್ರೋತ್ಸಾಹ ಅಗತ್ಯ.
-ಸಹಜ್ ರೈ ಬಳಜ್ಜ
ಸ್ಥಾಪಕಾದ್ಯಕ್ಷರು ವಿಜಯಸಾಮ್ರಾಟ್ ಸಂಸ್ಥೆ (ರಿ.)ಪುತ್ತೂರು
ವೇದಿಕೆಯಲ್ಲಿ ಪಿಲಿಗೊಬ್ಬು ಸಮಿತಿಯ ಅಧ್ಯಕ್ಷರಾದ ಶ್ರೀ ಪುತ್ತೂರು ಉಮೇಶ್ ನಾಯಕ್,ಸಂಚಾಲಕ ನಾಗರಾಜ್ ನಡುವಡ್ಕ, ಪ್ರಧಾನ ಕಾರ್ಯದರ್ಶಿ ಶ್ರೀ ಶರತ್ ಆಳ್ವ ಕೂರೇಲು ಹಾಗೂ ಪಿಲಿಗೊಬ್ಬು ಸಮಿತಿಯ ಪದಾಧಿಕಾರಿಗಳು ವಿಜಯಸಾಮ್ರಾಟ್ ಸಂಸ್ಥೆಯ ಸದಸ್ಯರು ಉಪಸ್ಥಿತರಿದ್ದರು.