ಸಾಂಕೇತ್ ಚಿತ್ರದ ಟ್ರೈಲರ್ ಬಿಡುಗಡೆ- ಉತ್ತಮ ಪ್ರತಿಕ್ರಿಯೆ

0

ಪುತ್ತೂರು :ತನ್ನ ಟೈಟಲ್‌ ನಿಂದಲೇ ಸಾಕಷ್ಟು ನಿರೀಕ್ಷೆ ಮೂಡಿಸಿರುವ ಜ್ಯೋತ್ಸ್ನಾ ಕೆ ರಾಜ್ ನಿರ್ದೇಶನದ ಸಾಂಕೇತ್ ಚಿತ್ರದ ಟ್ರೈಲರ್ ಯೂಟ್ಯೂಬ್ ನಲ್ಲಿ ಬಿಡುಗಡೆಯಾಗಿದೆ.ಈ ಹಿಂದೆ ‘ಸಾಂಕೇತ್ ಸಿನೆಮಾದ ಪೋಸ್ಟರ್, ಟೀಸರ್ ಕುತೂಹಲ ಹುಟ್ಟು ಹಾಕಿದ್ದು, ಇದೀಗ ಚಿತ್ರದ ಟ್ರೈಲರ್ ಬಿಡುಗಡೆಗೊಂಡಿದೆ.

ಇದೊಂದು ಸಸ್ಪೆನ್ಸ್, ಥ್ರಿಲ್ಲರ್ ಕಥೆಯನ್ನೊಳಗೊಂಡ ವಿನೂತನ ಚಿತ್ರ ಅನ್ನೋದನ್ನು ಟ್ರೈಲರ್ ನಮಗೆ ಅರಿವು ಮಾಡುತ್ತದೆ. ಯಾರು ಈ ಸಾಂಕೇತ್ ಅನ್ನೋ ಕೌತುಕತೆ ಟ್ರೈಲರ್ ನೋಡಿದವರಲ್ಲಿ ಕಾಡುವ ಪ್ರಶ್ನೆಯಾಗಿಯೇ ಉಳಿಯುವಂತೆ ಮಾಡಿದ ಕೈಚಲಕ ಮೆಚ್ಚುವಂತಹುದೆ.ಅದರ ಜೊತೆ ಜೊತೆಗೆ ಇದು ಹಾರರ್ ಸಿನಿಮಾನಾ? ಅಥವಾ ಮಾಟ, ಮಂತ್ರ ಇತ್ಯಾದಿ ಅಂಶಗಳನ್ನೊಳಗೊಂಡ ಸಿನಿಮಾನಾ? ಅಥವಾ ಇದೊಂದು ಸೈಕಾಲಾಜಿಕಲ್ ಥ್ರಿಲ್ಲರ್ ಸಿನಿಮಾನಾ? ಎಂಬ ಪ್ರಶ್ನೆಗಳು ಉದ್ಭವಿಸುವಂತೆ ನೋಡುಗರಲ್ಲಿ ಸಿನೆಮಾದ ಮೂಲಕವೇ ಉತ್ತರ ಸಿಗುವಂತೆ ಟ್ರೈಲರ್‌ ನಲ್ಲಿ ಕಟ್ಟಿಕೊಟ್ಟಿದ್ದಾರೆ ಸಿನೆಮಾ ತಂಡ.

ಈ ಸಿನೆಮಾದಲ್ಲಿ ರಾಜ್ ಕಾರ್ತಿಕ್ ಸ್ಕ್ರೀನ್ ಪ್ಲೇ, ಸಿನಿಮಾಟೋಗ್ರಾಫಿ, ಬಿಜಿಎಂ ಆ್ಯಂಡ್ ವಿಎಫ್ ಎಕ್ಸ್ ನಲ್ಲಿ ಕೈಚಳಕ ಮಾಡಿದ್ದಾರೆ.ಸನತ್ ಕುಮಾರ್ ಸಹಾಯಕ ನಿರ್ದೇಶಕನಾಗಿ, ಛಾಯಾಗ್ರಾಹಕನಾಗಿ ,ಪ್ರಕಾಶ್ ರಾವ್ ಅವರ ಸಾಹಿತ್ಯ, ಪ್ರೊಡಕ್ಷನ್ ಮ್ಯಾನೇಜರ್ ಆಗಿ ನಿಶಾನ್ ತೆಲ್ಲಿಸ್ ಕಾರ್ಯ ನಿರ್ವಹಿಸಿದ್ದಾರೆ.

ತುಳನಾಡ ಪ್ರತಿಭೆ ಚೈತ್ರ ಶೆಟ್ಟಿ, ವಿಕ್ಕಿ ರಾವ್, ಮೋಹನ್ ಶೆಣಿ, ರೂಪಶ್ರೀ ವರ್ಕಾಡಿ, ರಾಹುಲ್ ಅಮೀನ್, ನಿರೀಕ್ಷಾ ಶೆಟ್ಟಿ, ಸದಾಶಿವ ಅಮೀನ್, ನಿರಿಕ್ಷಾ ರಾಣಿ, ರಜೀತ್ ಕದ್ರಿ, ಮೇಘನಾ ರಕ್ಷಿತಾ ಮೊದಲಾವರು ಚಿತ್ರದಲ್ಲಿ ಪಾತ್ರವಾಗಿದ್ದಾರೆ. ಇನ್ನು ಬಿಡುಗಡೆಯಾಗಿರುವ ಟ್ರೈಲರ್ ಉತ್ತಮ ರೆಸ್ಪಾನ್ಸ್ ಗಿಟ್ಟಿಸಿಕೊಂಡಿದೆ.ಟ್ರೈಲರ್‌ ನೋಡಿ ಸಿನೆಮಾ ನೋಡಲು ಸಿನಿರಸಿಕರು ಕಾತರದಿಂದ ಕಾಯುತ್ತಿದ್ದಾರೆ.

LEAVE A REPLY

Please enter your comment!
Please enter your name here