ಆಲಂಕಾರು ದುರ್ಗಾಂಬಾ ಪದವಿ ಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿ ಸಂಘದ ಉದ್ಘಾಟನೆ

0

ಆಲಂಕಾರು: ಆಲಂಕಾರು ಶ್ರೀ ದುರ್ಗಾಂಬಾ ಪದವಿ ಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿ ಸಂಘದ ಉದ್ಘಾಟನಾ ಕಾರ್ಯಕ್ರಮವು ಜರಗಿತು. ವಿದ್ಯಾರ್ಥಿ ಸಂಘವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಇಂಟೀರಿಯರ್ ಡಿಸೈನ್ ಸ್ಟುಡಿಯೋ ಮರೋಲಿ ಮಂಗಳೂರಿನ ಮಾಲಕ ಸುದರ್ಶನ್ ರೈ ಮನವಳಿಕೆ ಯವರು ಮಾತನಾಡಿ ಜೀವನದಲ್ಲಿ ಅನೇಕ ಸವಾಲುಗಳನ್ನು ಮೆಟ್ಟಿನಿಂತಾಗ ಮಾತ್ರ ಜೀವನದಲ್ಲಿ ಯಶಸ್ಸನ್ನು ಪಡೆಯಲು ಸಾಧ್ಯವಾಗುತ್ತದೆ.ಈ ದಿಶೆಯಲ್ಲಿ ವಿದ್ಯಾರ್ಥಿಗಳು ವಿದ್ಯಾರ್ಥಿ ಜೀವನದಲ್ಲಿ ನಾಯಕತ್ವ ಗುಣವನ್ನು ರೂಡಿಸಿಕೊಳ್ಳಬೇಕೆಂದರು.


ಸಭಾಧ್ಯಕ್ಷತೆಯನ್ನು ವಹಿಸಿದ್ದ ಆಡಳಿತ ಮಂಡಳಿ ಅಧ್ಯಕ್ಷ ದಯಾನಂದ ರೈ ಮನವಳಿಕೆ ಯವರು ಮಾತನಾಡಿ ವಿದ್ಯಾರ್ಥಿಗಳಿಗೆ ಪ್ರಜಾಪ್ರಭುತ್ವದ ನೈಜ ಅನುಭವವನ್ನು ನೀಡುವ ಉದ್ದೇಶದಿಂದ ಶಾಲಾ ಮಟ್ಟದಲ್ಲಿ ಚುನಾವಣೆ ಪ್ರಕ್ರಿಯೆಗಳನ್ನು ನಡೆಸಲಾಗುತ್ತಿದೆ ಎಂಬುದನ್ನು ತಿಳಿಸಿ ನೂತನವಾಗಿ ಆಯ್ಕೆಯಾದ ಎಲ್ಲಾ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳಿಗೆ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಕಾಲೇಜು ವಿದ್ಯಾರ್ಥಿ ನಾಯಕನಾಗಿ ಆಯ್ಕೆಯಾದ ವಿಘ್ನೇಶ್ ಕೆ. ಡಿ, ತೋಟಗಾರಿಕಾ ಮಂತ್ರಿ ಪವನ್ ಕೆ, ಶಿಕ್ಷಣ ಮಂತ್ರಿ ಕೃತಿ ಕೆ ಎಸ್, ಆರೋಗ್ಯ ಮಂತ್ರಿ ದೀಕ್ಷಾ, ಕಾರ್ಯದರ್ಶಿ ಶ್ರಾವ್ಯ ಐ, ಸಾಂಸ್ಕೃತಿಕ ಮಂತ್ರಿ ಹರ್ಷಿತಾ, ಕ್ರೀಡಾ ಮಂತ್ರಿ ಹರ್ಷ, ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿ ನಾಯಕ ಚಿತ್ರೇಶ್, ಶಿಕ್ಷಣ ಮಂತ್ರಿ ಪ್ರಣಮ್ಯ, ಸಾಂಸ್ಕೃತಿಕ ಮಂತ್ರಿ ಹಂಸಿನಿ, ಕ್ರೀಡಾ ಮಂತ್ರಿ ಲಿಖಿತ, ತೋಟಗಾರಿಕಾ ಮಂತ್ರಿ ಧನ್ಯ ಬಿ, ಆರೋಗ್ಯ ಮಂತ್ರಿ ಮಹಮ್ಮದ್ ರುಮೈಸ್ ಇವರಿಗೆ ಮುಖ್ಯ ಗುರುಗಳಾದ ನವೀನ್ ರೈ ಅವರು ಪ್ರತಿಜ್ಞಾವಿಧಿ ಭೋದಿಸಿದರು. ಈ ಸಂದರ್ಭದಲ್ಲಿ ಪದವಿಪೂರ್ವ ಕಾಲೇಜಿನ ಕಲಾವಿಭಾಗದಲ್ಲಿ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ತಾಲೂಕಿನಲ್ಲಿ ಪ್ರಥಮ ಸ್ಥಾನ, ಜಿಲ್ಲೆಯಲ್ಲಿ ಐದನೇ ಸ್ಥಾನ ಮತ್ತು ರಾಜ್ಯದಲ್ಲಿ 13ನೇ ಸ್ಥಾನ ಪಡೆದ ಅಭಿಲಾಷ ಪಿ. ಡಿ ಯವರನ್ನು ಸನ್ಮಾನಿಸಲಾಯಿತು ಆಡಳಿತಾಧಿಕಾರಿ ಶ್ರೀಪತಿ ರಾವ್ ಎಚ್ ಸ್ವಾಗತಿಸಿದರು.

ಕಾರ್ಯಕ್ರಮದಲ್ಲಿ ಆಡಳಿತ ಮಂಡಳಿಯ ಸದಸ್ಯರಾದ ಮುತ್ತಪ್ಪ ಪೂಜಾರಿ ನೈಯಲ್ಗ, ರಾಮರಾಜ ನಗ್ರಿ, ಇಂದುಶೇಖರ ಶೆಟ್ಟಿ ಕುಕ್ಕೇರಿ, ವಿಜಯ ಕುಮಾರ್ ರೈ ಮನವಳಿಕೆ , ಸಂಸ್ಥೆಯ ಬೋಧಕ ಬೋಧಕೇತರ ವೃಂದದವರು ಉಪಸ್ಥಿತರಿದ್ದರು. ಆಂಗ್ಲಭಾಷಾ ಶಿಕ್ಷಕರಾದ ಜನಾರ್ದನ ಕಾರ್ಯಕ್ರಮ ನಿರೂಪಿಸಿ. ಕೃತಿ ಕೆ ಎಸ್, ಹರ್ಷ , ಮತ್ತು ದೀಕ್ಷಾ ಇವರ ಪ್ರಾರ್ಥಸಿದರು. ಪ್ರಾಂಶುಪಾಲರಾದ ರೂಪ ಜೆ ರೈ ಧನ್ಯವಾದ ಸಮರ್ಪಿಸಿದರು.

LEAVE A REPLY

Please enter your comment!
Please enter your name here