ಅಧ್ಯಕ್ಷ:ಅಶ್ರಫ್ ಪಿ.ಎಂ,ಕಾರ್ಯದರ್ಶಿ:ವಸಂತ್ ಶಂಕರ್,ಕೋಶಾಧಿಕಾರಿ:ನವೀನ್‌ಚಂದ್ರ ನಾೖಕ್
ಪುತ್ತೂರು: ಅಂತರ್ರಾಷ್ಟ್ರೀಯ ರೋಟರಿ ಜಿಲ್ಲೆ 3181, ವಲಯ ಐದರ ರೋಟರಿ ಕ್ಲಬ್ ಪುತ್ತೂರು ಸೆಂಟ್ರಲ್ ಇದರ 2024-25ನೇ ಸಾಲಿನ ನೂತನ ಅಧ್ಯಕ್ಷರಾಗಿ ಸಹರಾ ಆರ್ಥ್‌ಮೂವರ‍್ಸ್ ಮತ್ತು ಬೋರ್‌ವೆಲ್ಸ್ ಮಾಲಕ ಅಶ್ರಫ್ ಪಿ.ಎಂ, ಕಾರ್ಯದರ್ಶಿಯಾಗಿ ಕೊಂಕಣ್ ಗ್ಯಾಸ್‌ನಲ್ಲಿ 22 ವರ್ಷ ಸೀನಿಯರ್ ಎಕೌಂಟೆಂಟ್ ಆಗಿ ನಿವೃತ್ತಿ ಹೊಂದಿದ ಬಿ.ವಸಂತ್ ಶಂಕರ್, ಕೋಶಾಧಿಕಾರಿಯಾಗಿ ಯುನೈಟೆಡ್ ಇನ್ಸೂರೆನ್ಸ್‌ನ ಮಾಜಿ ಉದ್ಯೋಗಿ ನವೀನ್‌ಚಂದ್ರ ನಾೖಕ್ ರವರು ಆಯ್ಕೆಯಾಗಿದ್ದಾರೆ.
ಉಳಿದಂತೆ ಜೊತೆ ಕಾರ್ಯದರ್ಶಿಯಾಗಿ ನವ್ಯಶ್ರೀ ನಾೖಕ್ , ನಿಯೋಜಿತ ಅಧ್ಯಕ್ಷರಾಗಿ ಚಂದ್ರಹಾಸ ರೈ ಬಿ, ಉಪಾಧ್ಯಕ್ಷರಾಗಿ ಪ್ರದೀಪ್ ಪೂಜಾರಿ, ನಿಕಟಪೂರ್ವ ಅಧ್ಯಕ್ಷರಾಗಿ ಡಾ.ರಾಜೇಶ್ ಬೆಜ್ಜಂಗಳ, ಕ್ಲಬ್ ಸರ್ವಿಸ್ ನಿರ್ದೇಶಕರಾಗಿ ಜಯಪ್ರಕಾಶ್ ಎ.ಎಲ್, ಕಮ್ಯೂನಿಟಿ ಸರ್ವಿಸ್ ನಿರ್ದೇಶಕರಾಗಿ ಬಿ.ಟಿ ಮಹೇಶ್ಚಂದ್ರ ಸಾಲಿಯಾನ್, ವೊಕೇಶನಲ್ ಸರ್ವಿಸ್ ನಿರ್ದೇಶಕರಾಗಿ ಲೋಕೇಶ್ ಎಂ.ಎಚ್, ಇಂಟರ್‌ನ್ಯಾಷನಲ್ ಸರ್ವಿಸ್ ನಿರ್ದೇಶಕರಾಗಿ ಸನತ್ ರೈ, ಯೂತ್ ಸರ್ವಿಸ್ ನಿರ್ದೇಶಕರಾಗಿ ಜಗನ್ನಾಥ್ ಅರಿಯಡ್ಕ, ಸಾರ್ಜಂಟ್ ಎಟ್ ಆರ್ಮ್ಸ್ ಶಿವರಾಂ ಎಂ.ಎಸ್, ಚೇರ್‌ಮ್ಯಾನ್‌ಗಳಾಗಿ ಡಾ.ರಾಮಚಂದ್ರ ಕೆ(ವೆಬ್), ಡಾ.ನಮಿತಾ(ಪೋಲಿಯೋ ಪ್ಲಸ್), ಭಾರತಿ ಎಸ್.ರೈ(ಟೀಚ್), ಜಯಪ್ರಕಾಶ್ ಅಮೈ(ಟಿಆರ್‌ಎಫ್), ಲಾವಣ್ಯ ನಾಕ್(ಮೆಂಬರ್‌ಶಿಪ್ ಡೆವಲಪ್‌ಮೆಂಟ್), ಪದ್ಮನಾಭ ಶೆಟ್ಟಿ(ಜಿಲ್ಲಾ ಪ್ರಾಜೆಕ್ಟ್), ಸಂತೋಷ್ ಶೆಟ್ಟಿ(ಕ್ರೀಡೆ), ಪ್ರಮೋದ್ ಕುಮಾರ್ ಕೆ.ಕೆ(ಸಾಂಸ್ಕೃತಿಕ), ಪ್ರದೀಪ್ ಬೊಳ್ವಾರ್(ಫೆಲೋಶಿಪ್), ಶಾಂತಕುಮಾರ್(ಹಾಜರಾತಿ ಸಮಿತಿ), ಮೊಹಮ್ಮದ್ ರಫೀಕ್ ದರ್ಬೆ(ಸಿಎಲ್‌ಸಿಸಿ), ಅಮಿತಾ ಶೆಟ್ಟಿ(ಎಥಿಕ್ಸ್), ಸಂತೋಷ್ ಶೆಟ್ಟಿ(ಕ್ಲಬ್ ಫೆಸಿಲಿಟೇಟರ್)ರವರು ಆಯ್ಕೆಯಾಗಿದ್ದಾರೆ.
ಜು.9 ರಂದು ಪದ ಪ್ರದಾನ..
ಜು.9 ರಂದು ಪರ್ಲಡ್ಕ-ಬೈಪಾಸ್ ಆಶ್ಮಿ ಕಂಫರ್ಟ್‌ನಲ್ಲಿ ಕ್ಲಬ್‌ನ ನೂತನ ಪದಾಧಿಕಾರಿಗಳ ಪದ ಪ್ರದಾನ ಸಮಾರಂಭ ಜರಗಲಿದ್ದು, ರೋಟರಿ ಜಿಲ್ಲೆ 3181 ಇದರ ಪಿಡಿಜಿ ರಂಗನಾಥ್ ಭಟ್‌ರವರು ನೂತನ ಪದಾಧಿಕಾರಿಗಳಿಗೆ ಪದ ಪ್ರದಾನವನ್ನು ನೆರವೇರಿಸಲಿದ್ದಾರೆ. ವಲಯ ಐದರ ಅಸಿಸ್ಟಂಟ್ ಗವರ್ನರ್ ಸೂರ್ಯನಾಥ ಆಳ್ವ, ವಲಯ ಸೇನಾನಿ ಮೊಹಮದ್ ರಫೀಕ್ ದರ್ಬೆ, ಮಾತೃಸಂಸ್ಥೆ ರೋಟರಿ ಕ್ಲಬ್ ಪುತ್ತೂರು ಸ್ವರ್ಣ ಅಧ್ಯಕ್ಷ ಸುರೇಶ್ ಪಿ.ರವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.